ಭಾರತಕ್ಕಿಂತ ಮೊದಲು ನೋಟು ರದ್ದತಿ ಮಾಡಿದ ದೇಶಗಳಿವು
ಭಾರತಕ್ಕೆ ಮೊದಲು ನೋಟು ರದ್ದತಿ ನೀತಿಯನ್ನು ಅಳವಡಿಸಿಕೊಂಡ ಎಂಟು ದೇಶಗಳ ವಿವರ ಇಲ್ಲಿದೆ:
ನೈಜೀರಿಯ
1984ರಲ್ಲಿ ಮುಹಮ್ಮದ್ ಬುಹಾರಿ ಸರ್ಕಾರದ ಅವಧಿಯಲ್ಲಿ ನೈಜೀರಿಯ ಹೊಸ ಕರೆನ್ಸಿಯನ್ನು ಪರಿಚಯಿಸಿ ಹಳೇ ನೋಟುಗಳನ್ನು ನಿಷೇಧಿಸಿದೆ. ಆದರೆ ಸಾಲ ಪೀಡಿತ ಮತ್ತು ಹಣದುಬ್ಬರ ಸಮಸ್ಯೆ ಎದುರಿಸಿದ ದೇಶ ಈ ಬದಲಾವಣೆಯನ್ನು ಸೈರಿಸಿಕೊಳ್ಳಲು ಸಾಧ್ಯವಾಗದೆ ಸಂಪೂರ್ಣ ಅರ್ಥವ್ಯವಸ್ಥೆ ಮಕಾಡೆ ಮಲಗಿತ್ತು.
ಘಾನಾ
1982ರಲ್ಲಿ ಘಾನಾ ತನ್ನ 50 ಸಿಡಿ ನೋಟುಗಳನ್ನು ಹಿಂತೆಗೆದುಕೊಂಡು ತೆರಿಗೆ ಉಲ್ಲಂಘಿಸುವವರನ್ನು ನಿಭಾಯಿಸುವ ಪ್ರಯತ್ನ ಮಾಡಿತು. ಇದರಿಂದ ಜನರು ಕಾಳಸಂತೆಗೆ ಬೆಂಬಲ ತೋರಿಸಿದರು ಮತ್ತು ಭೌತಿಕ ಆಸ್ತಿಗಳಲ್ಲಿ ಹಣ ಹೂಡಲು ಆರಂಭಿಸಿದ ಕಾರಣ ಅರ್ಥವ್ಯವಸ್ಥೆ ದುರ್ಬಲವಾಯಿತು.
ಪಾಕಿಸ್ತಾನ
2016 ಡಿಸೆಂಬರ್‌ನಲ್ಲಿ ಪಾಕಿಸ್ತಾನ ಹಳೇ ನೋಟುಗಳನ್ನು ಹಿಂತೆಗೆದುಕೊಂಡು ಹೊಸ ನೋಟುಗಳನ್ನು ವಿನ್ಯಾಸ ಮಾಡಲಿದೆ. ಪಾಕಿಸ್ತಾನ ವರ್ಷದ ಹಿಂದೆಯೇ ಕಾನೂನು ಪ್ರಕಾರ ಟೆಂಡರ್ ಹಾಕಿದೆ. ಪ್ರಜೆಗಳಿಗೆ ಹಳೇ ನೋಟುಗಳನ್ನು ಹಿಂತೆಗೆದುಕೊಂಡು ಹೊಸ ವಿನ್ಯಾಸದ ನೋಟುಗಳನ್ನು ಪಡೆಯಲು ಸಮಯವಿದೆ.
ಜಿಂಬಾಬ್ವೆ
ಜಿಂಬಾಬ್ವೆ ಬಳಿ ಒಂದು ನೂರು ಟ್ರಿಲಿಯನ್ ಡಾಲರ್ ($100,000,000,000,000) ನೋಟುಗಳಿದ್ದವು. ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರು ನೋಟು ರದ್ದತಿಗೆ ಆದೇಶಿಸಿದ ಮೇಲೆ ಟ್ರಿಲಿಯನ್ ಡಾಲ್ 0.5 ಡಾಲರ್‌ಗೆ ಇಳಿಯಿತು.
ಉತ್ತರ ಕೊರಿಯ
2010ರ ನೋಟು ರದ್ದತಿಯ ಬಳಿಕ ಉತ್ತರ ಕೊರಿಯದಲ್ಲಿ ಜನರಿಗೆ ಆಹಾರ ಮತ್ತು ವಸತಿ ಇಲ್ಲದ ಸ್ಥಿತಿ ಬಂತು. ದ್ವಿತೀಯ ಕಿಮ್ ಜಾಂಗ್ ಹಳೇ ಕರೆನ್ಸಿಯ ಮುಖಬೆಲೆಯಿಂದ ಎರಡು ಸೊನ್ನೆಗಳನ್ನು ತೆಗೆದು ಕಾಳಸಂತೆ ತಡೆಯಲು ಯತ್ನಿಸಿದ್ದರು.
ಸೋವಿಯತ್ ಒಕ್ಕೂಟ
ಮಿಖೈಲ್ ಗೋರ್ಬಚೇವ್ ಕಾಳಸಂತೆಯ ಮೇಲೆ ನಿಯಂತ್ರಣ ಸಾಧಿಸಲು ದೊಡ್ಡ ರೂಬಲ್ ಬಿಲ್‌ಗಳ ವಾಪಾಸಾತಿಗೆ ಆದೇಶಿಸಿದರು. ಈ ನಡೆ ಪ್ರಜೆಗಳಿಗೆ ಹಿಡಿಸಲಿಲ್ಲ. ಹೀಗಾಗಿ ನಾಗರಿಕ ದಂಗೆ ಏರ್ಪಟ್ಟು ಅವರು ಅಧಿಕಾರ ಕಳೆದುಕೊಂಡರು ಮತ್ತು ಸೋವಿಯತ್ ಒಕ್ಕೂಟ ಒಡೆದು ಹೋಯಿತು.
ಆಸ್ಟ್ರೇಲಿಯ
ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ತಂದ ಮೊದಲ ದೇಶ ಆಸ್ಟ್ರೇಲಿಯ. ನೋಟನ್ನು ಕಾಗದದಿಂದ ಪ್ಲಾಸ್ಟಿಕ್‌ಗೆ ಬದಲಿಸುವುದಷ್ಟೇ ಉದ್ದೇಶವಾಗಿದ್ದ ಕಾರಣ ಅರ್ಥವ್ಯವಸ್ಥೆಯ ಮೇಲೆ ಹೆಚ್ಚೇನೂ ಪರಿಣಾಮ ಬೀರಲಿಲ್ಲ.
ಮ್ಯಾನ್ಮಾರ್
1987ರಲ್ಲಿ ಮ್ಯಾನ್ಮಾರ್ ಸೇನೆ ಕಾಳಸಂತೆಯನ್ನು ಧಮನಿಸಲು ಶೇ. 80ರಷ್ಟು ಮೌಲ್ಯದ ಹಣವನ್ನು ಅಮಾನ್ಯವೆಂದು ಹೇಳಿತು. ಈ ನಿರ್ಧಾರದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿ, ಸಾಮೂಹಿಕ ಪ್ರತಿಭಟನೆಗಳು ನಡೆದು ಹಲವು ಮಂದಿ ಪ್ರಾಣಕಳೆದುಕೊಂಡರು.
ಕೃಪೆ: www.indiatimes.com