ದುಷ್ಪರಿಣಾಮ ಬೀರಬಲ್ಲ ಸುಳ್ಳು ಸುದ್ದಿಗಳು!
ಸುಳ್ಳುಸುದ್ದಿಗಳು ಕೂಡಾ ಜನರ ಮನಸ್ಸಿನ ಮೇಲೆ ಮತ್ತು ಚುನಾವಣೆಯ ಮೇಲೆ ಕೂಡಾ ಪರಿಣಾಮ ಬೀರಬಲ್ಲವು ಎನ್ನುವುದನ್ನು ನಾವು ಇತ್ತೀಚೆಗೆ ಗಮನಿಸಿದ್ದೇವೆ. ಇದರ ಜತೆಗೆ ಇಂಥ ಸುಳ್ಳು ಸುದ್ದಿಗಳನ್ನು ನಿರ್ಬಂಧಿಸಲು, ನಂಬಲನರ್ಹ ಸುದ್ದಿಮೂಲಗಳನ್ನು ತಡೆಯುವ ನಿಟ್ಟಿನಲ್ಲಿ ಫೇಸ್‌ಬುಕ್‌ನ ಅಸಹಾಯಕತೆಯನ್ನು ಕೂಡಾ ನಾವು ನೋಡಿದ್ದೇವೆ. ಈ ಲೇಖನ ಇಂಥ ವಾಸ್ತವ ಅಂಶಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ. ಅಂದರೆ ನೀವು ಇಂಟರ್ನೆಟ್‌ನಲ್ಲಿ ಕ್ಲಿಕ್ ಮಾಡಿದ್ದೆಲ್ಲ ನಿಜ ಎಂದು ನಂಬುತ್ತೀರಿ. ಆದರೆ ವಾಸ್ತವ ಹಾಗಿಲ್ಲ.
ದೇಶದಲ್ಲಿ 500 ಹಾಗೂ 1000 ರೂಪಾಯಿ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೆಡ್ಡು ಹೊಡೆದಿದ್ದಾರೆ. ಪ್ರಧಾನಿ ನಿರ್ಧಾರ ಖಂಡಿಸಿ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಬೆದರಿಕೆಯೊಡ್ಡಿದ್ದು, ಪ್ರಧಾನಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಕೇಜ್ರಿ ರಾಜೀನಾಮೆ ಕುರಿತ ವದಂತಿ ಹಬ್ಬಿಸಿರುವುದು ನೋಡಿದರೆ, ಮುಂದಿನ ಕೆಲ ದಿನಗಳಲ್ಲೇ ದಿಲ್ಲಿ ಸಿಎಂ ಪದತ್ಯಾಗ ಮಾಡುತ್ತಾರೆ ಎಂದು ನಿರೀಕ್ಷಿಸಬಹುದು. ಆದರೆ ವಾಸ್ತವ ಎಂದರೆ ಅವರು ರಾಜೀನಾಮೆ ನೀಡಲಾರರು. ಏಕೆಂದರೆ ಅವರು ಆ ಅರ್ಥದ ಹೇಳಿಕೆ ನೀಡಿಲ್ಲ. ನೀವು ಆ ಲೇಖನವನ್ನು ಓದದೇ ಕ್ಲಿಕ್ ಮಾಡಿರುತ್ತೀರಿ ಅಥವಾ ಲೇಖನದಲ್ಲಿ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಪರಿಶೀಲಿಸದೇ ಶೇರ್ ಮಾಡಿರುತ್ತೀರಿ. ಇದೀಗ ಈ ಲೇಖನದ ಹಿನ್ನೆಲೆ ಏನು ಎನ್ನುವ ಬಗ್ಗೆ ನಿಮ್ಮ ಗಮನ ಸೆಳೆಯಬಯಸುತ್ತೇವೆ.
ಇದು ಸುಳ್ಳು ಸುದ್ದಿ ಎನ್ನುವುದನ್ನು ನೀವು ಗಮನಿಸಿರುವುದಿಲ್ಲ ಎಂದುಕೊಳ್ಳಿ. ಇಂದಿನ ಇಂಟರ್ನೆಟ್ ಯುಗದ ಜ್ವಲಂತ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರಬಯಸುತ್ತೇವೆ. ಸುಳ್ಳುಸುದ್ದಿಗಳು ಕೂಡಾ ಜನರ ಮನಸ್ಸಿನ ಮೇಲೆ ಮತ್ತು ಚುನಾವಣೆಯ ಮೇಲೆ ಕೂಡಾ ಪರಿಣಾಮ ಬೀರಬಲ್ಲವು ಎನ್ನುವುದನ್ನು ನಾವು ಇತ್ತೀಚೆಗೆ ಗಮನಿಸಿದ್ದೇವೆ. ಇದರ ಜತೆಗೆ ಇಂಥ ಸುಳ್ಳು ಸುದ್ದಿಗಳನ್ನು ನಿರ್ಬಂಧಿಸಲು, ನಂಬಲನರ್ಹ ಸುದ್ದಿಮೂಲಗಳನ್ನು ತಡೆಯುವ ನಿಟ್ಟಿನಲ್ಲಿ ಫೇಸ್‌ಬುಕ್‌ನ ಅಸಹಾಯಕತೆಯನ್ನು ಕೂಡಾ ನಾವು ನೋಡಿದ್ದೇವೆ. ಈ ಲೇಖನ ಇಂಥ ವಾಸ್ತವ ಅಂಶಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ. ಅಂದರೆ ನೀವು ಇಂಟರ್ನೆಟ್‌ನಲ್ಲಿ ಕ್ಲಿಕ್ ಮಾಡಿದ್ದೆಲ್ಲ ನಿಜ ಎಂದು ನಂಬುತ್ತೀರಿ. ಆದರೆ ವಾಸ್ತವ ಹಾಗಿಲ್ಲ.
ಸಾಮಾಜಿಕ ಜಾಲತಾಣಗಳು ಇಡೀ ವಿಶ್ವದ ಜನರನ್ನು ಸಂಪರ್ಕಿಸಲು ಅಪೂರ್ವ ವೇದಿಕೆ. ಆದರೆ ಅದು ಕನಿಷ್ಠ ಆರು ವರ್ಷಗಳ ಹಿಂದಿನ ಮಾತು. ಆದರೆ ಇಂದು ನಾವು ನಮ್ಮ ಶೇ. 40ರಷ್ಟು ಸುದ್ದಿಗಳನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಂಥ ಸಾಮಾಜಿಕ ಜಾಲತಾಣಗಳ ಮೂಲಕವೇ ಪಡೆದಿರುತ್ತೇವೆ. ಈ ಲೇಖನವನ್ನು ಓದಲು ಕಾರಣ ಕೂಡಾ ನೀವು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ನೋಡಿರುತ್ತೀರಿ.
ಕಳೆದ ಕೆಲ ವರ್ಷಗಳಿಂದ ನಮ್ಮ ಟೈಮ್‌ಲೈನ್‌ಗಳಲ್ಲಿ ಹೇಗೆ ಸುಳ್ಳುಸುದ್ದಿಗಳು ಪ್ರವಾಹೋಪಾದಿಯಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವುದನ್ನು ತೋರಿಸಿಕೊಡುವ ಸಣ್ಣಪ್ರಯತ್ನ ಇದು. ಸುಳ್ಳು ಸಾವಿನ ಸುದ್ದಿಗಳಿಂದ ಹಿಡಿದು ಸುಳ್ಳು ರಾಜಕೀಯ ಪ್ರತಿಪಾದನೆಗಳವರೆಗೆ ಇಂಥ ಸುದ್ದಿಗಳು ಹರಡುತ್ತಲೇ ಇರುವುದು ಸಮಸ್ಯೆಯ ಮೂಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಇದು ಸ್ಫೋಟಗೊಂಡಿತು. ಭಾರತದ ಸನ್ನಿವೇಶದಲ್ಲೂ ಇಂಥ ಸುದ್ದಿಗಳು ಹರಿದಾಡುತ್ತಲೇ ಇವೆ. ಉದಾಹರಣೆಗೆ ಯುನೆಸ್ಕೊ ನರೇಂದ್ರ ಮೋದಿಯವರನ್ನು ವಿಶ್ವದ ಶ್ರೇಷ್ಠ ಪ್ರಧಾನಿ ಎಂದು ಗುರುತಿಸಿದೆ ಎನ್ನುವ ಸುದ್ದಿ. ಆದರೆ ವಿಶ್ವಾಸನೀಯ ಮೂಲಗಳು ಇಂಥ ಸುದ್ದಿಗಳ ವಿರುದ್ಧ ಕಾವಲುನಾಯಿಗಳಾಗಿ ಕೆಲಸ ಮಾಡಬೇಕಾಗುತ್ತದೆ ಹಾಗೂ ಇಂಥ ವದಂತಿಗಳನ್ನು ತಳ್ಳಿಹಾಕಬೇಕಾಗುತ್ತದೆ.
ಜನ ಅರ್ಥಮಾಡಿಕೊಳ್ಳದಿರುವ ಒಂದು ವಿಚಾರವೆಂದರೆ ಬಹುತೇಕ ಮಂದಿ ಲೇಖನಗಳ ಶೀರ್ಷಿಕೆ ಓದಿಯೇ ಇದನ್ನು ಲೈಕ್ ಅಥವಾ ಶೇರ್ ಮಾಡುತ್ತಾರೆ. ಈ ಕಾರಣದಿಂದಾಗಿಯೇ ಇದನ್ನು ನೀವು ಓದುತ್ತಿದ್ದೀರಿ. ಈ ಲೇಖನವನ್ನು ನೀವು ಕ್ಲಿಕ್ ಮಾಡಿರುವುದು ಕೂಡಾ ಇದು ನಿಜಕ್ಕೂ ಆಘಾತಕಾರಿ ಸುದ್ದಿ ಎಂಬ ಕಾರಣಕ್ಕಾಗಿ ಅಥವಾ ನಿಮ್ಮ ಕಲ್ಪನೆಗೆ ಅನುಗುಣವಾಗಿ ಇರುವ ಕಾರಣದಿಂದ. ಕೆಲ ವ್ಯಕ್ತಿಗಳು ಲೇಖನವನ್ನು ಓದಿರುವುದೇ ಇಲ್ಲ. ಲೇಖನದಲ್ಲಿ ಏನು ಬರೆದಿದೆ ಎಂಬುದರ ಬಗ್ಗೆ ಅವರು ತಲೆ ಕೆಡಿಸಿಕೊಂಡಿರುವುದೂ ಇಲ್ಲ. ಅವರ ಅಭಿಪ್ರಾಯಗಳು ಶೀರ್ಷಿಕೆಗಳ ಆಧಾರದಲ್ಲೇ ರೂಪುಗೊಂಡಿರುತ್ತವೆ. ಇಂಥವರು ಇದನ್ನು ಓದಲೇಬೇಕಾದ ಅಗತ್ಯವಿದೆ.
ಕೆಲವರಂತೂ ತಮ್ಮ ಅಭಿಪ್ರಾಯಕ್ಕೆ ಅನುಗುಣವಾದ ಅಥವಾ ತಮ್ಮ ಮೂಗಿನ ನೇರಕ್ಕೆ ಇರುವ ಸುದ್ದಿಗಳನ್ನು ಓದುತ್ತಾರೆ ಅಥವಾ ಕೇಳುತ್ತಾರೆ. ಯಾವುದನ್ನು ಅವರ ತಲೆಗೆ ತುಂಬಿಕೊಳ್ಳಬೇಕು ಎಂದು ನಿರ್ಧರಿಸಿರುತ್ತಾರೋ ಅಂಥ ಲೇಖನವನ್ನಷ್ಟೇ ಅವರು ಓದುತ್ತಾರೆ. ಅವರ ಅಭಿಪ್ರಾಯಗಳನ್ನು ದೃಢಪಡಿಸುವಂತಿರುವ ಲೇಖನಗಳನ್ನಷ್ಟೇ ಇವರು ಶೇರ್ ಮಾಡುತ್ತಾರೆ. ದುರದೃಷ್ಟವಶಾತ್ ಇಂದು ಇಂಟರ್ನೆಟ್ ಕೆಲಸ ಮಾಡುವುದು ಹೀಗೆ. ಹಿಂದೆ ಪತ್ರಿಕೋದ್ಯಮವನ್ನು ಪ್ರತಿಷ್ಠಿತ ಹಾಗೂ ವಿಶ್ವಾಸಾರ್ಹ ಎಂದು ಪರಿಗಣಿಸಲಾಗುತ್ತಿತ್ತು. ಇಂಥ ಜವಾಬ್ದಾರಿಯುತ ಪತ್ರಿಕೋದ್ಯಮದಿಂದಾಗಿ, ಜನರಿಗೆ ಸರಿಯಾದ ಮಾಹಿತಿಗಳು ತಲುಪುತ್ತಿದ್ದವು. ಹೀಗೆ ಸರಿ ಮಾಹಿತಿಯನ್ನು ಹೊಂದಿದ ನಾಗರಿಕ, ಸಾಮಾಜಿಕ ಚಟುವಟಿಕೆಗಳ ಮಾರ್ಗದರ್ಶಕನಾಗುತ್ತಿದ್ದ. ಈ ಕಾರಣದಿಂದಾಗಿಯೇ ರೋಮ್ ಹಾಗೂ ಗ್ರೀಕ್ ಆಯಾ ಸಂದರ್ಭದಲ್ಲಿ ವಿಶ್ವದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದವು. ಏಕೆಂದರೆ ಅದು ಜ್ಞಾನ ಹಾಗೂ ಮಾಹಿ ತಿಯ ಯುಗವಾಗಿತ್ತು. ಜನರಿಗೆ ತಮ್ಮ ಚಕ್ರಾಧಿಪತಿಗಳ ಬಗ್ಗೆ ಸರಿ ಯಾದ ಮಾಹಿತಿ ಇರುತ್ತಿತ್ತು. ರಾಜರು ತಮ್ಮ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಕಲ್ಪನೆ ಇತ್ತು.
ದುರದೃಷ್ಟವೆಂದರೆ ಅದೇ ಮಾತನ್ನು ಇಂದಿಗೆ ಅನ್ವಯಿಸುವಂತಿಲ್ಲ. ತಿರುಚಿದ ಹಾಗೂ ಸೂಕ್ತ ಮಾಹಿತಿ ಇಲ್ಲದ ಜನಸಾಮಾನ್ಯರು ಇಂದು ಇಂಟರ್ನೆಟ್ ಅವಲಂಬಿಸಿದ್ದಾರೆ. ಇದು ಎಲ್ಲರಿಗೂ ಭೀತಿ ಹುಟ್ಟಿಸುವ ವಿಚಾರ. ಸುಳ್ಳುಸುದ್ದಿಗಳು ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬಿದ್ದು, ಇವು ಚುನಾವಣೆಗಳ ಮೇಲೆ ಪ್ರಭಾವ ಬೀರಬಲ್ಲವು. ಜನರನ್ನು ಜೈಲಿಗೆ ಕಳುಹಿಸಬಲ್ಲವು ಅಥವಾ ಅವರ ಬದುಕನ್ನು ನಾಶಪಡಿಸಬಲ್ಲವು. ಇಂಥ ಸಾಂಕ್ರಾಮಿಕವನ್ನು ನಿರ್ಬಂಧಿಸುವ ಅಗತ್ಯವಿದ್ದು, ಅದನ್ನು ನಾವಷ್ಟೇ ಮಾಡಲು ಸಾಧ್ಯ.
ಸುಳ್ಳುಸುದ್ದಿ ಪತ್ತೆ ಹೇಗೆ?
ಇದು ತೀರಾ ಸರಳ. ನಿಮ್ಮದೇ ಸಂಶೋಧನೆ ನಡೆಸಿ. ಅದನ್ನು ಕಿತ್ತೆಸೆಯಬೇಕಾದರೆ ನೀವು ಸರಿಯಾಗಿ ಅದನ್ನು ಓದಿ ಆ ಬಳಿಕ ನಿಮ್ಮ ಟೈಮ್‌ಲೈನ್‌ನಲ್ಲಿ ಶೇರ್ ಮಾಡಬೇಕಷ್ಟೇ. ನೆನಪಿಡಿ; ನೀವು ಸುಳ್ಳುಸುದ್ದಿಯನ್ನು ನಿಮ್ಮ ಟೈಮ್‌ಲೈನ್‌ನಲ್ಲಿ ಶೇರ್ ಮಾಡಿದರೆ, ನೀವು ಮೂರ್ಖರಾಗುತ್ತೀರಿ. ನಮ್ಮತ್ತ ಹಾಗೆ ಬೆಟ್ಟುಮಾಡಬಾರದು ಎಂದಾದರೆ, ಇದನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ನಿಮಗೆ ಮಾರ್ಗದರ್ಶನ ಅಗತ್ಯ. ಈ ನಿಟ್ಟಿನಲ್ಲಿ ನೀವು ಸರಳ ಹಾಗು ಅನಿವಾರ್ಯ ಹೆಜ್ಜೆಗಳನ್ನು ಅನುಸರಿಸಬೇಕಾಗುತ್ತದೆ.
1. ಲೇಖನ ಓದಿ!
ಸಕಾರಣಕ್ಕಾಗಿ ಹೇಗೆ ಓದಬೇಕು ಎಂಬುದನ್ನು ನಿಮಗೆ ಬೋಧಿಸಲಾಗಿರುತ್ತದೆ. ಆದರೂ ನೀವು ಅಸತ್ಯ ಎನಿಸಿದ ಲೇಖನವನ್ನು ಶೇರ್ ಮಾಡಿರುತ್ತೀರಿ. ಇಲ್ಲಿರುವ ವ್ಯತ್ಯಾಸ ಎಂದರೆ ನೀವು ತಪ್ಪಿನಿಂದ ತಿಳಿದುಕೊಳ್ಳುತ್ತೀರಿ. ಆದ್ದರಿಂದ ಕೇವಲ ಶೀರ್ಷಿಕೆಯನ್ನಷ್ಟೇ ಅಲ್ಲದೇ ಇಡೀ ಲೇಖನ ಓದಿ.
2. ಮೂಲ ಯಾವುದು?
ಹಲವು ಬಾರಿ ಒಳ್ಳೆಯ ಹಾಗೂ ಸತ್ಯವಾದ ಮಾಹಿತಿಗಳು ಸಾಮಾಜಿಕ ಜಾಲತಾಣದಿಂದ ಸಿಗುತ್ತವೆ. ಆದರೆ ಇದರಲ್ಲಿ ತೀರಾ ಅಸಹ್ಯ ಸುದ್ದಿಗಳೂ ತುಂಬಿರುತ್ತವೆ. ಕಾಲೇಜಿನಲ್ಲಿ ಒಂದು ಕಿರುಪ್ರಬಂಧ ಬರೆಯಬೇಕಾಗಿ ಬಂದಾಗ ನಿಮಗೆ ಬೋಧಿಸಿರುವುದು ಅದರ ಮೂಲ ಯಾವುದು ಅಥವಾ ಯಾರು ಎನ್ನುವುದನ್ನು ತಿಳಿಯಬೇಕು ಎನ್ನುವ ಮೂಲಭೂತ ತತ್ವ. ಯಾವುದೇ ಲೇಖನ, ನಿಯತಕಾಲಿಕ ಅಥವಾ ಅಂಕಿ ಅಂಶಗಳಿಗೆ ಸೂಕ್ತ ಮೂಲದ ಹಿನ್ನೆಲೆ ಇರಲೇಬೇಕು. ಯಾವ ಪ್ರಾಥಮಿಕ ಅಥವಾ ಪೂರಕ ಸಂಶೋಧನೆಯ ಅಂಶಗಳನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದನ್ನು ಪರಿಶೀಲಿಸಿ. ಈ ಮೂಲಗಳು ಸಮರ್ಪಕವೇ ಅಥವಾ ಸತ್ಯವಾದ ಅಂಕಿ ಅಂಶಗಳನ್ನು ಹೊಂದಿವೆಯೇ ಎನ್ನುವುದನ್ನು ಪರಾಮರ್ಶಿಸಿ. ಒಂದು ಲೇಖನ ಸೂಕ್ತವಾದ ಮಾಹಿತಿ ಮೂಲವನ್ನು ಉಲ್ಲೇಖಿಸಿಲ್ಲ ಎಂದಾದರೆ ಅದನ್ನು ನಿರ್ಲಕ್ಷಿಸುವುದೇ ಸೂಕ್ತ.
3. ಗೂಗಲ್‌ನಲ್ಲಿ ಹುಡುಕಿ
ಗೂಗಲ್ ದೀರ್ಘಕಾಲದಿಂದ ನಮ್ಮ ಸ್ನೇಹಿತ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಒಂದು ಸುದ್ದಿ ಸುಳ್ಳು ಎಂಬ ಅನುಮಾನ ನಿಮಗೆ ಬಂದರೆ, ಆ ಸುದ್ದಿಯ ಅಂಶಗಳನ್ನು ಗೂಗಲ್‌ನಲ್ಲಿ ಹುಡುಕಿ. ಇದರ ಯಾವುದೇ ಅಂತರ್ಜಾಲ ತಾಣಗಳಲ್ಲಿ ಈ ಸುದ್ದಿ ಪ್ರಕಟವಾಗಿದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಲೇಖನ ಪ್ರತಿಪಾದಿಸುವ ಅಂಕಿ ಅಂಶಗಳನ್ನು ಎರಡೆರಡು ಬಾರಿ ಪರಾಮರ್ಶಿಸಿ. ಅಥವಾ ಬೇರೆಯವರು ಈ ಅಂಶಗಳಿಗೆ ಸವಾಲು ಹಾಕಿದ್ದಾರೆಯೇ ಎನ್ನುವುದನ್ನೂ ಪರಿಶೀಲಿಸಿ. ಅಂತಿಮವಾಗಿ ನೀವು ಎಲ್ಲ ಆಯಾಮಗಳಿಂದ ಆ ಲೇಖನವನ್ನು ಓದಿ ಆ ಬಳಿಕ ಅಂತಿಮ ನಿರ್ಧಾರಕ್ಕೆ ಬನ್ನಿ.
ಸಮಾಜಕ್ಕೆ ಸಾಧ್ಯವಾದಷ್ಟೂ ಸಮರ್ಪಕ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಸರಳ ಹೆಜ್ಜೆಗಳನ್ನು ನಾವೆಲ್ಲರೂ ಅನುಸರಿಸುವ ವಿಶ್ವವನ್ನು ಕಲ್ಪಿಸಿಕೊಳ್ಳಿ. ಹಾಗಿದ್ದರೆ ಟ್ರಂಪ್ ವಿಶ್ವದ ಪ್ರಭಾವಿ ದೇಶದ ಅಧ್ಯಕ್ಷರಾಗುತ್ತಿರಲಿಲ್ಲ; ನಾವು ಬಾಬಾ ರಾಮ್‌ದೇವ್‌ಗೆ ಹೆಚ್ಚಿನ ಗಮನ ನೀಡುವುದು ಬೇಕಿರಲಿಲ್ಲ. ನಿರ್ದಿಷ್ಟ ಅಭಿಪ್ರಾಯಗಳನ್ನು ಹೊಂದುವುದು ಅಗತ್ಯವಾಗಿದ್ದರೆ, ಅದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದರ ಅಂಕಿ ಅಂಶಗಳು ಅಥವಾ ಮಾಹಿತಿಗಳು ಎಷ್ಟರಮಟ್ಟಿಗೆ ವಾಸ್ತವ ಎನ್ನುವುದನ್ನು ಪರಿಶೀಲಿಸುವಷ್ಟು ಜವಾಬ್ದಾರಿ ನಮಗೆ ಇರಬೇಡವೇ? ಇದನ್ನು ನಿಮ್ಮ ಸ್ನೇಹಿತರ ಜತೆ ನಿಮ್ಮ ಟೈಮ್‌ಲೈನ್‌ನಲ್ಲಿ ಶೇರ್ ಮಾಡಿ. ಜನರಿಗೆ ಸೂಕ್ತ ಮಾಹಿತಿ ನೀಡುವ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳಿ.