×
Ad

ಭಾರತದಲ್ಲಿ ಸಂಭವಿಸಿದ ಪ್ರಮುಖ 8 ರೈಲು ದುರಂತಗಳು

Update: 2016-11-20 18:34 IST

2016,ನ.20: ಉ.ಪ್ರದೇಶದ ಕಾನಪುರ ಗ್ರಾಮೀಣ ಜಿಲ್ಲೆಯ ಪುಖರಾಯಾಂ ಬಳಿ ಇಂದೋರ್-ಪಟ್ನಾ ಎಕ್ಸಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿ 100ಕ್ಕೂ ಅಧಿಕ ಪ್ರಯಾಣಿಕರ ಸಾವು,200ಕ್ಕೂ ಅಧಿಕ ಜನರಿಗೆ ಗಾಯ

► 2010,ಮೇ 28: ಪ.ಬಂಗಾಲದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ನಕ್ಸಲರು ಜ್ಞಾನೇಶ್ವರಿ ಎಕ್ಸಪ್ರೆಸ್‌ನ ಹಳಿ ತಪ್ಪಿಸಿದ ಪರಿಣಾಮ ಕನಿಷ್ಠ 148 ಜನರ ಸಾವು
 
► 2002,ಸೆ.9: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಹೌರಾ-ದಿಲ್ಲಿ ರಾಜಧಾನಿ ಎಕ್ಸಪ್ರೆಸ್‌ನ ಬೋಗಿಯೊಂದು ಧಾವೆ ನದಿಗುರುಳಿ 100 ಪ್ರಯಾಣಿಕರ ಮೃತ್ಯು,150 ಜನರಿಗೆ ಗಾಯ

► 1999,ಆ.2: ಅಸ್ಸಾಮಿನ ಗೈಸಾಲ್‌ನಲ್ಲಿ ಒಟ್ಟು 2,500 ಪ್ರಯಾಣಿಕರನ್ನು ಸಾಗಿಸುತ್ತಿದ್ದ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 290 ಜನರು ಬಲಿ

► 1998,ನ.26: ಪಂಜಾಬಿನ ಖನ್ನಾ ಸಮೀಪ ಹಳಿ ತಪ್ಪಿದ್ದ ಫ್ರಾಂಟಿಯರ್ ಮೇಲ್‌ನ ಬೋಗಿಗಳಿಗೆ ಜಮ್ಮು ತಾವಿ-ಸಿಯಾಲ್ಡಾ ಎಕ್ಸಪ್ರೆಸ್ ಡಿಕ್ಕಿ ಹೊಡೆದು ಕನಿಷ್ಠ 212 ಜನರ ಸಾವು

► 1997,ಸೆ.14: ಮಧ್ಯಪ್ರದೇಶದ ಬಿಲಾಸಪುರ ಜಿಲ್ಲೆಯಲ್ಲಿ ಅಹ್ಮದಾಬಾದ್-ಹೌರಾ ಎಕ್ಸಪ್ರೆಸ್‌ನ ಐದು ಬೋಗಿಗಳು ನದಿಗುರುಳಿ 81ಜನರ ಸಾವು

► 1995,ಆ.20: ಉತ್ತರ ಪ್ರದೇಶದ ಫಿರೋಝಾಬಾದ್ ರೈಲ್ವೆ ನಿಲ್ದಾಣದ ಬಳಿ ಪುರುಷೋತ್ತಮ್ ಎಕ್ಸಪ್ರೆಸ್ ರೈಲು ಕಾಲಿಂದಿ ಎಕ್ಸಪ್ರೆಸ್‌ಗೆ ಡಿಕ್ಕಿ ಹೊಡೆದು 400 ಜನರ ಮೃತ್ಯು

► 1988,ಎ.18: ಉತ್ತರ ಪ್ರದೇಶದ ಲಲಿತ್‌ಪುರ ಸಮೀಪ ಕರ್ನಾಟಕ ಎಕ್ಸಪ್ರೆಸ್ ರೈಲು ಹಳಿ ತಪ್ಪಿ ಕನಿಷ್ಠ 75 ಜನರ ಸಾವು

► 1988,ಜು.8: ಐಲಂಡ್ ಎಕ್ಸಪ್ರೆಸ್ ಕೇರಳದ ಅಷ್ಟಮುಡಿ ಸರೋವರಕ್ಕೆ ಧುಮುಕಿ 107 ಜನರ ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News