×
Ad

ದೀರ್ಘಕಾಲದ ಕನಸು ನನಸಾಯಿತು: ಸಿಂಧು

Update: 2016-11-20 23:13 IST

ಹೊಸದಿಲ್ಲಿ, ನ.20: ‘‘ನನಗೆ ಪ್ರತಿಕ್ರಿಯಿಸಲು ಶಬ್ದಗಳೇ ಸಿಗುತ್ತಿಲ್ಲ. ನನ್ನ ಕನಸು ಕೊನೆಗೂ ಈಡೇರಿದೆ’’ ಎಂದು ಚೀನಾ ಓಪನ್‌ನಲ್ಲಿ ಚೊಚ್ಚಲ ಸೂಪರ್ ಸರಣಿ ಪ್ರಶಸ್ತಿ ಜಯಿಸಿರುವ ಪಿ.ವಿ.ಸಿಂಧು ಹೇಳಿದ್ದಾರೆ.

‘‘ಸೂಪರ್ ಸರಣಿ ಗೆಲ್ಲಬೇಕೆನ್ನುವುದು ನನ್ನ ದೀರ್ಘಕಾಲದ ಕನಸಾಗಿತ್ತು. ಒಲಿಂಪಿಕ್ಸ್‌ನ ಬಳಿಕ ಎಲ್ಲರೂ ನನ್ನ ಬಳಿ ಮುಂದೇನು ಎಂದು ಕೇಳುತ್ತಿದ್ದರು. ಸೂಪರ್ ಸರಣಿ ಪ್ರಶಸ್ತಿ ಗೆಲ್ಲುವುದು ನನಗೆ ಅತ್ಯಂತ ಮುಖ್ಯವಾಗಿತ್ತು. ಒಲಿಂಪಿಕ್ಸ್‌ನ ಬಳಿಕ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಾನು ಗೆಲುವಿನ ಲಯಕ್ಕೆ ಮರಳಲು ತುಂಬಾ ಸಮಯಬೇಕು ಎಂದು ಜನರು ನಂಬಿದ್ದರು. ಆದರೆ, ನಾನು ಕಠಿಣ ಶ್ರಮಪಟ್ಟು ಕನಸು ಈಡೇರಿಸಿಕೊಂಡಿರುವೆ’’ ಎಂದು ಸಿಂಧು ನುಡಿದರು.

‘‘ಇದು ನನ್ನ ಮೊದಲ ಸೂಪರ್ ಸರಣಿ ಪ್ರಶಸ್ತಿ. ನನಗೆ ತುಂಬಾ ಸಂತೋಷವಾಗಿದೆ. ಸಂತೋಷ ವರ್ಣಿಸಲು ಸಾಧ್ಯವಾಗುತ್ತಿಲ್ಲ. ನಾನು ಡೆನ್ಮಾರ್ಕ್ ಓಪನ್‌ನಲ್ಲಿ ಕೊನೆಯ ಬಾರಿ ಫೈನಲ್‌ಗೆ ತಲುಪಿದ್ದೆ’’ ಎಂದು ಸಿಂಧು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News