×
Ad

ನೋಟು ರದ್ಧತಿ ಬಳಿಕ ಬಲಿಯಾದ ಜನರಲ್ಲಿ ಕಪ್ಪುಹಣವಿತ್ತೇ ? ಪ್ರಧಾನಿಗೆ ರಾಜ್‌ಠಾಕ್ರೆ ಪ್ರಶ್ನೆ

Update: 2016-11-20 23:37 IST

ಮುಂಬೈ, ನ.20: ನೋಟು ರದ್ಧತಿ ಬಳಿಕ 40ಕ್ಕೂ ಹೆಚ್ಚು ಮಂದಿ ಅದೇ ಕಾರಣದಿಂದ ಬಲಿಯಾಗಿದ್ದಾರೆ. ಅವರೆಲ್ಲರ ಬಳಿ ಕಪ್ಪುಹಣವಿತ್ತೇ ? ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಕಪ್ಪುಹಣವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ನೋಟು ರದ್ಧತಿ ಮಾಡಲಾಗಿತ್ತು ಎಂದು ಪ್ರಧಾನಿ ಹೇಳುತ್ತಿದ್ದಾರೆ ಹಾಗಿದ್ದರೆ ಕರ್ನಾಟಕ ದ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ 500 ಕೋಟಿ ರೂ. ಹೇಗೆ ಖರ್ಚು ಮಾಡಿದ್ದರು ಎಂದು ರಾಜ್‌ಠಾಕ್ರೆ ಪ್ರಶ್ನಿಸಿದ್ದಾರೆ.

ನೋಟು ರದ್ಧತಿಯಿಂದ ನಮ್ಮ ಪಕ್ಷಕ್ಕೆ ಲಾಭವಾಗಿದೆ. ಏಕೆಂದರೆ ಬೇರೆ ಎಲ್ಲ ಪಕ್ಷಗಳು ಧಾರಾಳವಾಗಿ ಹಣ ಖರ್ಚು ಮಾಡುತ್ತವೆ. ಆದೆ ಈಗ ಎಲ್ಲ ಪಕ್ಷಗಳು ಸಮಾನವಾಗಿವೆ. ಈ ಕ್ರಮದಿಂದ ದೇಶಕ್ಕೆ ಒಳ್ಳೆಯದಾಗಿದೆ ಎಂದು ಹೇಳಲಾಗುತ್ತದೆ. ಆದರೆ ಇದಕ್ಕಾಗಿ ಸೂಕ್ತ ತಯಾರಿ ಮಾಡಿಕೊಳ್ಳದಿರುವುದು ಗಂಭೀರ ವಿಷಯವಾಗಿದೆ ಎಲ್ಲರೂ ಇದು ಭವಿಷ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ. ಆದರೆ ಭವಿಷ್ಯ ಏನು ಎಂದು ಪ್ರಧಾನಿ ಮೋದಿಯವರೇ ಹೇಳುತ್ತಿಲ್ಲ ಎಂದು ರಾಜ್‌ಠಾಕ್ರೆ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News