ಶ್ರೀರವಿಶಂಕರ್ ಅವರಿಗೆ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ
Update: 2016-11-20 23:43 IST
ಹೊಸದಿಲ್ಲಿ,ನ.20: ವಿಶ್ವ ಶಾಂತಿಗಾಗಿ ಪ್ರಯತ್ನಿಸುತ್ತಿರುವುದಕ್ಕಾಗಿ ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್ ಅವರಿಗೆ ಇಂದಿಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಯೊಂದಿಗೆ ಗೌರವಿಸಲಾಯಿತು.
ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರು ಶ್ರೀರವಿಶಂಕರ್ ಅವರಿಗೆ ‘ಡಾ.ನಾಗೇಂದ್ರ ಸಿಂಗ್ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ’ ಯನ್ನು ಪ್ರದಾನಿಸಿದರು.
ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಪ್ರಥಮ ಭಾರತೀಯ ನ್ಯಾಯಾಧೀಶರಾಗಿದ್ದ ಡಾ.ನಾಗೇಂದ್ರ ಸಿಂಗ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.