ಬಾಡಿ ಮಸಾಜ್ ಹೆಸರಿನಲ್ಲಿ ಅನೈತಿಕ ದಂಧೆ: ಕ್ರಮಕ್ಕೆ ಆಗ್ರಹ

Update: 2016-11-20 18:40 GMT

ಉಡುಪಿ, ನ.20: ಯುನಿಸೆಕ್ಸ್ ಸೆಲೂನ್ ಹೆಸರಿನಲ್ಲಿ ಯುವತಿಯರಿಂದ ಬಾಡಿ ಮಸಾಜ್ ಮಾಡಿಸುತ್ತಿರುವ ಅನೈತಿಕತೆ ಹಾಗೂ ಹಣಗಳಿಸುವ ದಂಧೆಯ ವಿರುದ್ಧ ಕ್ರಮ ಕೈಗೊಳ್ಳ್ಳುವಂತೆ ಉಡುಪಿ ಜಿಲ್ಲಾ ಸವಿತಾ ಸಮಾಜ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿತು.

ಸವಿತಾ ಸಮಾಜ ಹಲವು ವರ್ಷಗಳಿಂದ ಪರಂಪರೆಯಾಗಿ ಕುಲಕುಸುಬು ಕ್ಷೌರಿಕ ವೃತ್ತಿ ನಡೆಸುತ್ತಿದ್ದು, ಇದೀಗ ದೊಡ್ಡ ದೊಡ್ಡ ಕಂಪೆನಿಗಳು ಯುನಿಸೆಕ್ಸ್ ಹೆಸರಿನಲ್ಲಿ ಮಸಾಜ್ ಸೆಂಟರ್ ತೆರೆದು ಯುವತಿಯರಿಂದ ಮಸಾಜ್ ಮಾಡುವ ಮೂಲಕ ಅನೈತಿಕವಾಗಿ ಪ್ರಚೋದಿಸುತ್ತಿದೆ. ಇದರಿಂದ ಕುಲಬಾಂಧವರ ವೃತ್ತಿಗೆ ಅನ್ಯಾಯವಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸ ಲಾಗಿದೆ.

ಕೆಲವರು ಪರವಾನಿಗೆ ಪಡೆಯದೆ ಈ ಸೆಂಟರ್ ತೆರೆದಿದ್ದು, ಕೆಲವು ಕಡೆ ಒಂದು ಪರವಾನಿಗೆಯಲ್ಲಿ ಬೇರೆ ಬೇರೆ ಸೇವೆ ನೀಡಲಾಗುತ್ತಿದೆ. ಆದುದರಿಂದ ಈ ಬಗ್ಗೆ ಕೂಡಲೇ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಂಡು ನ್ಯಾಯ ಒದಗಿಸಬೇಕು ಎಂದು ಸವಿತಾ ಸಮಾಜ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅರುಣ್ ಭಂಡಾರಿ ಪರ್ಕಳ, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸತೀಶ್ ಭಂಡಾರಿ, ಕೋಶಾಧಿಕಾರಿ ಬೈಕಾಡಿ ಅರುಣ್ ಭಂಡಾರಿ, ತಾಲೂಕು ಅಧ್ಯಕ್ಷ ಶಂಕರ್ ಭಂಡಾರಿ, ಕರುಣಾಕರ ಭಂಡಾರಿ, ಬಸವರಾಜ್ ಮಣಿಪಾಲ, ಶೇಖರ್ ಸಾಲ್ಯಾನ್, ಶಂಕರ್ ಸಾಲ್ಯಾನ್, ಸತೀಶ್ ಅಚ್ಲಾಡಿ, ರಾಜೇಶ್ ಸುವರ್ಣ, ತ್ರಾಸಿ ಮಂಜುನಾಥ್ ಸಾಲ್ಯಾನ್, ಸಚಿನ್ ಭಂಡಾರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News