ದೊಡ್ಡ ಮೌಲ್ಯದ ನೋಟು ರದ್ದು : ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ
ಸಮಗ್ರ ಮಾಹಿತಿ, ನಿಮ್ಮ ಎಲ್ಲ ಪ್ರಶ್ನೆ, ಸಂಶಯಗಳಿಗೆ ಉತ್ತರ ಇಲ್ಲಿದೆ
1. ಯಾಕಾಗಿ ರೂ 500/- ಮತ್ತು ರೂ 1000/- ಅಮಾನ್ಯತೆ ಯೋಜನೆ ಅನುಷ್ಠಾನಗೊಳಿಸಿದರು?
ಹೆಚ್ಚಿನ ಸಂಖ್ಯೆಯಲ್ಲಿ ಅಧಿಕ ಮೌಲ್ಯದ ಭಾರತೀಯ ನೋಟುಗಳ ನಕಲಿ ಚಲಾವಣೆ ಘಟನೆಗಳು ಹೆಚ್ಚಾಗುತ್ತಿದೆ. ಚಲಾವಣೆ ಹಂತದಲ್ಲಿ ಸಿಕ್ಕಿಬಿದ್ದಾಗ ನೋಟುಗಳ ನಕಲಿತನ ಅರಿವಾಗುತ್ತದೆ ಹಾಗೂ ನಕಲಿ ನೋಟಿನ ಘಟನೆಯು ಬೆಳಕಿಗೆ ಬರುತ್ತದೆ. ನಕಲಿ ನೋಟುಗಳಲ್ಲಿ ಯಾವುದೇ ಭದ್ರತಾ ಸುರಕ್ಷಾ ವಿಶೇಷತೆಗಳ ನಕಲು ಸಾಧ್ಯವಾಗದಿದ್ದರೂ, ಸಾಮಾನ್ಯ ನಾಗರೀಕರಿಗೆಮೇಲುನೋಟಕ್ಕೆ ನಿಜವಾದ ನೋಟಿನಷ್ಟೇ ಸಹಜವಾಗಿ ಕಾಣುವ ಈ ನೋಟುಗಳ ವ್ಯತ್ಯಾಸ ಗುರುತಿಸಲು ವಿಫಲರಾಗುತ್ತಾರೆ. ಇವುಗಳನ್ನು ಅರಿಯದೆ ಪಡೆದು, ಚಲಾವಣೆ ಮಾಡುವಹಂತದಲ್ಲಿ ಸಿಕ್ಕಿಬೀಳುತ್ತಾರೆ. ಇದರಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶದವರು, ಬಡವರು ಮತ್ತು ಮಹಿಳೆಯರ ಸಂಖ್ಯೆ ಅಧಿಕವಾಗಿದೆ.
ನಕಲಿ ನೋಟುಗಳನ್ನು ರಾಷ್ಟ್ರದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಬಳಸಲಾಗುತ್ತದೆ. ಅಧಿಕ ಮೌಲ್ಯದ ನೋಟುಗಳನ್ನು ಕಾಳಧನಿಕರು ತಮ್ಮ ಕಪ್ಪು ಹಣಸಂಗ್ರಹಿಸಿಡಲು ಮತ್ತು ಭಯೋತ್ಪಾದಕರು ದುರುಪಯೋಗ ಮಾಡುತ್ತಾರೆ. ಭಾರತವು ನಗದು ವ್ಯವಹಾರವನ್ನು ಮೂಲ ಆಧಾರವಾಗಿ ಅವಲಂಬಿಸಿರುವ ದೇಶವಾಗಿದೆ. ಆದುದರಿಂದ ನಿರಂತರವಾಗಿ ಮುಂದುವರಿಯುತ್ತಿರುವ ನಕಲಿ ನೋಟು ಮುದ್ರಣ, ವಿತರಣೆ ಮತ್ತು ಚಲಾವಣೆಯ ಹೆಚ್ಚಳ ಜನಸಾಮಾನ್ಯರನ್ನು ಕಾಡುವ ದೈನಂದಿನ ಸಾಮಾಜಿಕ ಪಿಡುಗಾಗಿದೆ.ಕಾಳಧನಿಕರ ಕಪ್ಪು ಹಣ ಮತ್ತು ಹೆಚ್ಚುತ್ತಿರುವ ನಕಲಿನೋಟುಗಳ ಘಟನೆಗಳ ಸಂಖ್ಯೆಗೆ ಕಡಿವಾಣ ಹಾಕಲು ನೋಟು ರದ್ದತಿ ಯೋಜನೆ ಜಾರಿಗೆತರಲಾಗಿದೆ.
2. ಯೋಜನೆಯ ಸವಿವರವೇನು?
ಭಾರತೀಯ ರಿಸರ್ವೇ ಬ್ಯಾಂಕ್ ಜಾರಿಗೆ ತಂದ ದೊಡ್ಡಮೊತ್ತದ ಬ್ಯಾಂಕ್ ನೋಟುಗಳಾದ ರೂ 500 ಮತ್ತು ರೂ 1000 ನೋಟುಗಳನ್ನು ವಿಮುದ್ರೀಕರಣಗೊಳಿಸಿ ನವೆಂಬರ್ 08, 2016 (ರಾತ್ರಿ12 ಗಂಟೆ)ಯ ನಂತರ ಅವುಗಳ ಅಧಿಕೃತ ಚಲಾವಣೆಯ ಮಾನ್ಯತೆಯನ್ನು ರದ್ದಗೊಳಿಸಲಾಗಿದೆ. ಇದರಿಂದಾಗಿ, ಈ ನಿರ್ದಿಷ್ಟ ನೋಟುಗಳು ವ್ಯವಹಾರಿಕವಾಗಿ ಚಲಾವಣೆಯ ಹಾಗೂ ಮುಂದಿನ ಬಳಕೆಗಾಗಿ ಮೌಲ್ಯಾಧಾರಿತವಾಗಿ ಸಂಗ್ರಹಿಸಿಡುವ ಅರ್ಹತೆ ಕಳೆದುಕೊಳ್ಳುತ್ತವೆ. ಈ ನಿರ್ದಿಷ್ಟ ನೋಟುಗಳು ಯಾವುದೇ ಮೌಲ್ಯಕ್ಕಾಗಿ ಭಾರತೀಯ ರಿಸರ್ವೇ ಬ್ಯಾಂಕ್ ಮತ್ತು ಇದರ 19 ಕಚೇರಿಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು, ಸ್ಥಳೀಯ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಅವುಗಳ ಬ್ರ್ಯಾಂಚುಗಳು, ಪ್ರಧಾನ ಅಂಚೆ ಕಚೇರಿ ಅಥವಾ ಉಪ ಅಂಚೆ ಕಚೇರಿಗಳಲ್ಲಿ ಬದಲಾಯಿಸುವಂತಿಲ್ಲ.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು (District Central Cooperative Banks -DCCBs) ಗಳು ನವೆಂಬರ 24,2016ರ ತನಕ ತಮ್ಮ ಗ್ರಾಹಕರಿಗೆ ಅವರುಗಳ ಖಾತೆಗಳಿಂದ ಪ್ರತಿ ವಾರಕ್ಕೆ ಗರಿಷ್ಠ ರೂ. 24 ಸಾವಿರವನ್ನು ಹಿಂಪಡೆಯುವ ಅವಕಾಶ ನೀಡಲಾಗಿದೆ. ಈ ಜಿಲ್ಲಾ ಬ್ಯಾಂಕುಗಳು ರದ್ದಾದ ಹಳೆ ರೂ 500 ಮತ್ತು ರೂ 1000 ನೋಟುಗಳನ್ನು ಬದಲಾಯಿಸುವಂತಿಲ್ಲ ಅಲ್ಲದೆ ಅವುಗಳನ್ನು ಠೇವಣಿ ನಿಕ್ಷೇಪವಾಗಿ ಸ್ವೀಕರಿಸುವಂತಿಲ್ಲ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ಅಗತ್ಯದಷ್ಟೇ ಹಣವನ್ನು ಅವುಗಳ ಖಾತೆಗಳಿಂದ ನೀಡಲು ಎಲ್ಲಾ ರಾಷ್ಟ್ರೀಕೃತ ಮತ್ತು ಇತರ ಶೇಡ್ಯೂಲ್ಡ್ ಬ್ಯಾಂಕುಗಳಿಗೆ ಭಾರತೀಯ ರಿಸರ್ವೇ ಬ್ಯಾಂಕ್ ತಿಳಿಸಿದೆ.
3. 2005ನೇ ಇಸವಿಗೂ ಮೊದಲು ಮುದ್ರಿತ ರೂ. 500 / 1000 ಬ್ಯಾಂಕು ನೋಟುಗಳಿಗೆ ಈ ಯೋಜನೆ ಅನ್ವಯಿಸುತ್ತದೆಯೇ?
ಹೌದು. ಅಮಾನ್ಯವಾಗಿದೆ. ಈ ಹಿಂದಿನ ಎಲ್ಲ ರೂ.500 ಮತ್ತು ರೂ. 1000 ಬ್ಯಾಂಕು ನೋಟುಗಳಿಗೂ ಈ ಅಮಾನ್ಯ ಯೋಜನೆ ಅನ್ವಯಿಸುತ್ತದೆ. ಯಾವುದೇ ಬ್ಯಾಂಕು ಅಥವಾ ಅಂಚೆ ಕಚೇರಿಗಳಲ್ಲಿ 2005ನೇ ಇಸವಿಗೂ ಮೊದಲು ಮುದ್ರಿತ ರೂ. 500 / 1000 ಬ್ಯಾಂಕು ನೋಟುಗಳನ್ನೂ ಸೇರಿಸಿ ಎಲ್ಲ ನೋಟುಗಳನ್ನೂ ಸ್ವೀಕರಿಸಲಾಗುವುದು, ಬದಲಾವಣೆ ಮಾಡಲಾಗುವುದು ಮತ್ತು ಠೇವಣಿ ನಿಕ್ಷೇಪ ಗೋಳಿಸಳಾಗುವುದು.
4. ನನ್ನ ರೂ.500/ರೂ1000 ನೋಟಿಗೆ ನಾನೆಷ್ಟು ಮೌಲ್ಯ ಪಡೆಯಬಲ್ಲೆ?
ನಿಮ್ಮ ರದ್ದಾದ ರೂ.500 / ರೂ1000 ನೋಟನ್ನು ಬ್ಯಾಂಕು ಕಚೇರಿಗಳಲ್ಲಿ / RBI ಕಚೇರಿಗಳಲ್ಲಿ / ಅಂಚೆ ಕಚೇರಿಗಳಲ್ಲಿ ನೀಡಿದಾಗ ನಿಮ್ಮ ಹಳೆ ನೋಟಿನ ಮುದ್ರಿತ ಸಂಖ್ಯೆಯ ಮೌಲ್ಯದಷ್ಟನ್ನೂ ನೀವು ಪಡೆಯುವಿರಿ. ಬ್ಯಾಂಕು ಕಚೇರಿಗಳಲ್ಲಿ / RBI ಕಚೇರಿಗಳಲ್ಲಿ / ಅಂಚೆ ಕಚೇರಿಗಳಲ್ಲಿ ನೀಡಿದಾಗ ನಿಮ್ಮ ರದ್ದಾದ ನೋಟಿನ ಸಂಪೂರ್ಣ ಬೆಲೆ ನಿಮಗೆ ಸಿಗುವುದು.
5. ಸಂಪೂರ್ಣ ಮೊತ್ತವನ್ನು ನಗದು ರೂಪದಲ್ಲಿ ನಾನು ಪಡೆಯಬಲ್ಲನೇ?
ಇಲ್ಲ. ನೀವು ಎಷ್ಟು ಬೇಕಾದರೂ ಹಣವನ್ನು ಬ್ಯಾಂಕು /ಅಂಚೆ ಕಚೇರಿಯಲ್ಲಿ ಸಂದಾಯಿಸಬಹುದು, ಆದರೆ ವೈಯ್ಯಕ್ತಿಕವಾಗಿ ಗರಿಷ್ಠ ರೂ.2000 ತನಕದ ಹಣವನ್ನು ನಗದು ರೂಪದಲ್ಲಿ ಹಿಂದಕ್ಕೆ ಪಡೆಯಬಲ್ಲಿರಿ. ನೀವು ಜಮಾಯಿಸಿದ ಹಣ ಈ ಮೊತ್ತಕಿಂತ ಅಧಿಕ ಮೊತ್ತ ವಾಗಿದ್ದರೆ ಅಥವಾ ಗರಿಷ್ಠ ಮಿತಿ ಇಲ್ಲದೆ ಎಷ್ಟಾಗಿದ್ದರೂ ಕೂಡಾ, ಆ ಹಣ ನಿಮ್ಮ ಖಾತೆಯಲ್ಲಿ ಜಮಾವಾಗುತ್ತದೆ. ಆ ಹಣವೆಲ್ಲಾ ನಿಮ್ಮ ಬ್ಯಾಂಕು ಖಾತೆ / ಅಂಚೆ ಕಚೇರಿ ಖಾತೆಯಲ್ಲಿ ಸಂದಾಯವಾಗುತ್ತದೆ.
6. ನನ್ನೆಲ್ಲಾ ಹಣವನ್ನು ನಗದಾಗಿ ಸಲ್ಲಿಸಿರುವಾಗ, ನನಗೇಕೆ ಪುನಃ ನಗದು ರೂಪದಲ್ಲಿ ನನ್ನೆಲ್ಲಾ ಹಣ ನೀಡಲಾಗುವುದಿಲ್ಲ?
ಈ ಯೋಜನೆಯ ಅನುಷ್ಠಾನದಲ್ಲಿ ವಸ್ತುನಿಷ್ಠವಾದ ಹಲವು ಧ್ಯೇಯೋದ್ದೇಶಗಳು ಇರುವ ಕಾರಣ, ಯೋಜನೆಯಡಿಲ್ಲಿ ನಿಮ್ಮೆಲ್ಲ ಹಣ ಪುನಃ ನಗದು ರೂಪದಲ್ಲಿ ನೀಡಲು ಸಾಧ್ಯವಿಲ್ಲ.
7. ನನ್ನ ಆವಶ್ಯಕತೆಗಳಿಗೆ ರೂ.2000/- ನಗದು ಸಾಕಾಗುವುದಿಲ್ಲ. ನಾನೇನು ಮಾಡಲಿ?
ನಮ್ಮ ಬ್ಯಾಂಕು ಖಾತೆಯಲ್ಲಿ ಉಳಿದಿರುವ ಹಣವನ್ನು ನಿಮ್ಮ ಇತರ ಅಗತ್ಯಗಳಿಗೆ ಚೆಕ್ / ಎಲೆಕ್ಟ್ರೋನಿಕ್ ಪಾವತಿ ಮಾದರಿಯಲ್ಲಿ , ಅಂದರೆ ಅಂತರ್ಜಾಲ ಬ್ಯಾಂಕಿಂಗ್ , ಮೊಬೈಲ್ ವ್ಯಾಲೆಟ್ಸ್ , ಐ.ಎಂ.ಪಿ.ಎಸ್., ಆರ್.ಟಿ.ಜಿ.ಎಸ್, ಕ್ರೆಡಿಟ್ / ಡೆಬಿಟ್ ಕಾರ್ಡ್ ಮುಂತಾದ ಇತರ ಹಣ ವರ್ಗಾವಣೆ ವ್ಯವಸ್ಥೆಯಲ್ಲಿ ನೀವು ಪಾವತಿಸಬಹುದು.
8. ನನ್ನಲ್ಲಿ ಬ್ಯಾಂಕ್ ಖಾತೆ ಇಲ್ಲ, ನಾನೇನು ಮಾಡಲಿ?
ನೀವು ಖಾತೆ ತೆರೆದರಾಯಿತು. ಖಾತೆ ತೆರಯುವುದು ಬಲು ಸುಲಭ. ಬ್ಯಾಂಕು / ಅಂಚೆ ಖಾತೆ ತೆರೆಯಲು ಅಗತ್ಯದ ದಾಖಲೆಪತ್ರಗಳ ಜೊತೆ ಸಮೀಪದ ಬ್ಯಾಂಕನ್ನು ಸಮೀಪಿಸಿರಿ. ಖಾತೆ ತೆರೆಯಲು ನಿಮ್ಮ ಛಾಯಾಚಿತ್ರವಿರುವ ಗುರುತುಪತ್ರ ಮತ್ತು ವಿಳಾಸದ ದಾಖಲೆಪತ್ರ ಗಳ ನಕಲುಪ್ರತಿ ಹಾಗೂ ಇತ್ತೀಚಿಗಿನ ವರ್ಣ ಛಾಯಾಚಿತ್ರ (ನಿಮ್ಮ ಗ್ರಾಹಕರನ್ನು ಅರಿಯಿರಿ / KYCದಾಖಲೆಪತ್ರ ) ಇದ್ದರೆ ಸಾಕು. ಇವುಗಳನ್ನು ನೀಡಿ ಕೂಡಲೇ ಖಾತೆ ತೆರೆಯಬಹುದು.
9. ಒಂದುವೇಳೆ, ನನ್ನಲ್ಲಿ ಕೇವಲ ಜನ್ ಧನ್ ಯೋಜನೆ ಖಾತೆ (JDY account ) ಮಾತ್ರ ಇದ್ದಲ್ಲಿ?
ಜನ್ ಧನ್ ಯೋಜನೆ ಖಾತೆದಾರರೂ ಹಣ ಬದಲಾವಣೆ ಸವಲತ್ತು ಪಡೆಯಬಲ್ಲರು, ಆದರೆ ಇತರ ಖಾತೆಗಳ ಗರಿಷ್ಠ ಮಿತಿ, ಇತರ ರೂಢಿ ವಿಧಿಗಳು, ಕಾರ್ಯವಿಧಾನಗಳು ಹಾಗೂ ನಿಯಮಗಳೂ ಯಥಾಪ್ರಕಾರ ಅನ್ವಯವಾಗುತ್ತವೆ.
10. ಹಣ ಬದಲಾವಣೆಗೆ ನಾನೆಲ್ಲಿಗೆ ಹೋಗಲಿ?
ಭಾರತೀಯ ರಿಸರ್ವೇ ಬ್ಯಾಂಕ್ ಹಾಗೂ ಇದರ ಎಲ್ಲ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು , ಸ್ಥಳೀಯ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಅವುಗಳ ಬ್ರ್ಯಾಂಚುಗಳು ಮತ್ತು ಪ್ರಧಾನ ಅಂಚೆ ಕಚೇರಿ ಅಥವಾ ಯಾವುದೇ ಉಪ ಅಂಚೆ ಕಚೇರಿಗಳಲ್ಲಿ ಸಾರ್ವಜನಿಕರಿಗಾಗಿ ಹಣ ಬದಲಾವಣೆ ಸವಲತ್ತು ಲಭ್ಯ.
11. ಹಣ ಬದಲಾವಣೆಗಾಗಿ ಕೇವಲ ನನ್ನ ಬ್ಯಾಂಕು ಬ್ರ್ಯಾಂಚನ್ನು ಮಾತ್ರ ನಾನು ಭೇಟಿ ಮಾಡಬೇಕೆ?
ರೂ.2000/- ತನಕದ ಹಣ ಬದಲಾವಣೆಗಾಗಿ, ನೀವು ಯಾವುದೇ ಬ್ಯಾಂಕುಗಳ ಯಾವುದೇ ಬ್ರ್ಯಾಂಚುಗಳಿಗೂ ಅಥವಾ ಯಾವುದೇ ಅಂಚೆ ಕಚೇರಿಗೂ ಯಾವುದಾದರೊಂದು ನಿಮ್ಮ ಅಧಿಕೃತ ಗುರುತು ಪತ್ರ ಹಾಗೂ ಅದರ ನಕಲು ಪ್ರತಿ ಜೊತೆ ಭೇಟಿ ನೀಡಬಹುದು.
ರೂ. 2000/-ಕ್ಕಿಂತ ಅಧಿಕ ಹಣ ಬದಲಾವಣೆಗಾಗಿ ನೀವು ನಿಮ್ಮ ಖಾತೆ ಇರುವ ಬ್ಯಾಂಕನ್ನು ಭೇಟಿಮಾಡಿ ನಿಮ್ಮ ಖಾತೆಯಲ್ಲಿ ಹಾಕಬಹುದು. ಅಥವಾ ನಿಮ್ಮಅಧೀಕೃತ ಮಾನ್ಯ ಗುರುತು ಪತ್ರದೊಂದಿಗೆ ಇನ್ನಾವುದೇ ಬ್ಯಾಂಕು ಬ್ರ್ಯಾಂಚನ್ನು , ನಿಮ್ಮ ಖಾತೆಯ ವಿವರ ನೀಡಿದಲ್ಲಿ ಎಲೆಕ್ಟ್ರೋನಿಕ್ ವರ್ಗಾವಣೆ ಮೂಲಕ , ನಿಮ್ಮ ಬ್ಯಾಂಕಿನ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಬಹುದು.
12. ಹಣ ಬದಲಾವಣೆಗಾಗಿ ನನ್ನ ಬ್ಯಾಂಕಿನ ಯಾವುದೇ ಬ್ರ್ಯಾಂಚನ್ನೂ ನಾನು ಭೇಟಿ ಮಾಡಬಹುದೆ?
ಹೌದು. ಇದು ಸಾಧ್ಯ. ನೀವು ನಿಮ್ಮ ಬ್ಯಾಂಕಿನ ಯಾವುದೇ ಬ್ರ್ಯಾಂಚನ್ನೂ ಭೇಟಿ ಮಾಡಬಹುದು.
13.ಹಣ ಬದಲಾವಣೆಗಾಗಿ ಯಾವುದೇ ಬ್ಯಾಂಕಿನ ಯಾವುದೇ ಬ್ರ್ಯಾಂಚನ್ನೂ ನಾನು ಭೇಟಿ ಮಾಡಬಹುದೆ?
ಹೌದು. ಹಣ ಬದಲಾವಣೆಗಾಗಿ ನೀವು ಯಾವುದೇ ಬ್ಯಾಂಕಿನ ಯಾವುದೇ ಬ್ರ್ಯಾಂಚನ್ನೂ ಭೇಟಿ ಮಾಡಬಹುದು. ಆಗ ನಿಮ್ಮಅಧೀಕೃತ ಮಾನ್ಯ ಗುರುತು ಪತ್ರ ಹಾಗೂ ಅದರ ನಕಲು ಪ್ರತಿ,ಮತ್ತು ನಿಮ್ಮ ಖಾತೆಯ ವಿವರ ನಿಮ್ಮ ಜೊತೆಗಿರಬೇಕು. ನಿಮ್ಮ ನಗದು ಹಣ ರೂ.2000/- ಕ್ಕಿಂತ ಅಧಿಕವಾಗಿದ್ದಲ್ಲಿ , ಎಲೆಕ್ಟ್ರೋನಿಕ್ ವರ್ಗಾವಣೆ ಮೂಲಕ , ನಿಮ್ಮ ಬ್ಯಾಂಕಿನ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಬಹುದು.
14. ನಾನು ಒಂದು ಭಾರಿಗಿಂತ ಅಧಿಕ ಸಲ ರೂ.2000/- ನಗದು ಹಣವನ್ನು ಬದಲಾವಣೆ ಮಾಡಬಹುದೆ?
ಇಲ್ಲ. ಕೇವಲ ಒಂದು ಭಾರಿ ಮಾತ್ರ ರೂ.2000/- ನಗದು ಹಣವನ್ನು ಬದಲಾವಣೆ ಮಾಡಬಹುದು. ಇದಕ್ಕಾಗಿ ವಿಶೇಷ ಶಾಹಿ ಗುರುತನ್ನು ನಿಮ್ಮ ಬೆರಳಿಗೆ ಹಾಕಲಾಗುವುದು. ಭಾರತೀಯ ರಿಸರ್ವೇ ಬ್ಯಾಂಕ್ ಇತರ ಬ್ಯಾಂಕುಗಳಿಗೆ ನೀಡಿರುವ ವ್ಯವಹಾರಿಕ ನೀತಿ ಪದ್ದತಿ ನಿರ್ದೇಶನದಂತೆ ಬ್ಯಾಂಕು ಅಧಿಕಾರಿಗಳು ಮೊದಲು ಹಳೇ ನೋಟು ಪಡೆದುಕೊಂಡು ನಿಮ್ಮ ಬಲ ತೋರುಬೆರಳು ಮೇಲೆ ಅಳಿಸಲಾಗದ ಶಾಹಿಯ ಗುರುತು ಹಾಕುತ್ತಾರೆ, ಆಮೇಲೆ ನಿಮ್ಮ ಬದಲಾಯಿಸಿರುವ ಹೊಸ ನೋಟನ್ನು ನಿಮ್ಮ ಕೈಯಲ್ಲಿ ನೀಡುತ್ತಾರೆ. ಈಗ ನಗರ ಪ್ರದೇಶಗಳಲ್ಲಿ ಮಾತ್ರವಿದ್ದು, ನಂತರದ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಈ ನಿಯಮ ವಿಸ್ತಾರಗೊಳ್ಳಲಿದೆ.
15. ನನ್ನಲ್ಲಿ ಬ್ಯಾಂಕ್ ಖಾತೆ ಇಲ್ಲ, ಅಲ್ಲದೆ ನನ್ನ ಸಂಬಂಧಿಗಳು ಮತ್ತು ಗೆಳೆಯರು ಖಾತೆ ಹೊಂದಿದ್ದಾರೆ, ಅವರ ಖಾತೆ ಮೂಲಕ ನಾನು ನನ್ನ ಹಳೆನೋಟು ಬದಲಾವಣೆ ಮಾಡಿ ಜಮಾಯಿಸಬಹುದೆ?
ಹೌದು. ಒಂದು ವೇಳೆ ಖಾತೆದಾರ ಬರಹ ಮೂಲಕ ಅನುಮತಿ ಬರೆದು ಕೊಟ್ಟಲ್ಲಿ ಇದು ಸಾಧ್ಯ. ಹಳೆನೋಟು ಬದಲಾವಣೆ ಮಾಡಿ ಜಮಾಯಿಸುವ ವೇಳೆ ನೀವು ಖಾತೆದಾರ ನೀಡಿದ ಅನುಮತಿಯನ್ನು ಬ್ಯಾಂಕಿನಲ್ಲಿ ಸಲ್ಲಿಸಬೇಕು, ಜೊತೆಗೆ ನಿಮ್ಮಅಧೀಕೃತ ಮಾನ್ಯ ಗುರುತು ಪತ್ರ ನೀವು ಹೊಂದಿರಬೇಕು.
16. ಸ್ವತಃ ನಾನೇ ಬ್ಯಾಂಕಿಗೆ ಭೇಟಿ ನೀಡಬೇಕೆ ಅಥವಾ ನನ್ನ ಪ್ರತಿನಿಧಿಯ ಜೊತೆ ನನ್ನ ಹಳೆ ನೋಟನ್ನು ಕಳುಹಿಸಬಹುದೆ?
ನೀವು ಸ್ವತಃ ಬ್ಯಾಂಕಿಗೆ ಭೇಟಿ ಹಳೆನೋಟು ಬದಲಾವಣೆ ಮಾಡಿದರೆ ಅತ್ಯುತ್ತಮ. ಒಂದುವೇಳೆ ನಿಮಗೆ ಸ್ವತಃ ಭೇಟಿನೀಡಲು ಸಾಧ್ಯವಾಗದ ನಿಟ್ಟಿನಲ್ಲಿದ್ದಾಗ, ನಿಮ್ಮ ಸಹಿ ಹೊಂದಿರುವ ಅನುಮತಿ ಪತ್ರ ಹಾಗೂ ನಿವೇದಾ ಪತ್ರ ನೀಡಿ ನಿಮ್ಮ ಪ್ರತಿನಿಧಿಯನ್ನು ಕಳುಹಿಸಬಹುದು. ನಿಮ್ಮ ಪ್ರತಿನಿಧಿ ಹಳೆನೋಟು ಬದಲಾವಣೆಗಾಗಿ ಸಹಿ ಹೊಂದಿರುವ ಅನುಮತಿ / ಅಧೀಕೃತ ಮಾನ್ಯ ಗುರುತು ಪತ್ರ ಗಳನ್ನು (ನಿಮ್ಮ ಮತ್ತು ಪ್ರತಿನಿಧಿ ಇಬ್ಬರ ಗುರುತು ಪತ್ರ) ಬ್ಯಾಂಕಲ್ಲಿ ನೀಡಬೇಕು.
17. ನಾನು ATM ನಿಂದ ಹಣ ಪಡೆಯಬಹುದೆ?
ಹೌದು. ATM ನಿಂದ ಹಣ ಪಡೆಯಬಹುದು. ಆದರೆ, ಬದಲಾದ ನೋಟಿನ ಆಕಾರ, ಗಾತ್ರ, ಭಾರ ಹಾಗೂ ಮೌಲ್ಯಗಳ ವ್ಯವಸ್ಥೆಗೆ ಅನುಗುಣವಾಗಿ ATMಗಳ ಹಾರ್ಡವೇರ್ ಮತ್ತು ಸಾಫ್ಟವೇರ್ ಗಳ ಬದಲಾವಣೆಯಾಗಿ ಪುನರ್ ಮಾಪನಾಂಕ ( Recalibrated ) ಮಾಡಬೇಕಿದೆ. ಹಣ ಹಿಂಪಡೆಯುವ ಮೊತ್ತ ಪ್ರತಿದಿನದ ಗರಿಷ್ಠ ರೂ2,500 ಮಿತಿಯನ್ನು ಅನುಷ್ಠಾನಗೊಳಿಸಬೇಕಿದೆ. ರೂ. 500/- ಹೊಸ ನೋಟು, ಹಾಗೂ ರೂ 100/- ನೋಟುಗಳನ್ನು ದಿನದ ಮಿತಿ ಹಾಗೂ ವಾರದ ಮಿತಿಗಳನ್ನು ಗಮನಿಸಿಕೊಂಡು ವಿತರಿಸುವ ನಿಟ್ಟಿನಲ್ಲಿ ಆದಷ್ಟು ಬೇಗನೆ ATMಗಳಲ್ಲಿ ಬದಲಾವಣೆ ಕಾರ್ಯ ಸಾಧ್ಯವಾಗಬಹುದು. ಅಷ್ಟರವರೆಗೆ ಕೆಲವೊಂದು ಹಳೆ ATMಗಳಲ್ಲಿ ರೂ 2000 ಮಾತ್ರ ವಿತರಿಸಲು ಸಾಧ್ಯ. ಸಕಾಲಿಕವಾಗಿ, ಅತಿಶೀಘ್ರದಲ್ಲೇ ಅನುಷ್ಠಾನವಾಗುವ ನಿಟ್ಟಿನಲ್ಲಿ ಬ್ಯಾಂಕುಗಳು ತಮ್ಮ ATMಗಳನ್ನು ನಿರ್ವಹಿಸುತ್ತಿರುವ ವ್ಯಾಪಾರ ಪ್ರತಿನಿಧಿಗಳಿಗೆ ಹಣ ವಿತರಣಾ ನಿರ್ದೇಶನ ನೀಡಿವೆ.
18. ATMಗಳಲ್ಲಿ ಹಣ ಪಡೆಯವಾಗ ಶುಲ್ಕ ನೀಡಬೇಕೆ?
ಇಲ್ಲ. ATMಗಳಲ್ಲಿ ಹಣ ಮತ್ತು ಇತರ ಮಾಹಿತಿ ಪಡೆಯಲು ಯಾವುದೇ ಶುಲ್ಕ, ಕರ ವಿಧಿಸದಿರಲು ಬ್ಯಾಂಕುಗಳೆಲ್ಲ ಒಟ್ಟಾಗಿ ನಿರ್ದರಿಸಿವೆ.ಖಾತೆದಾರರು, ತಮ್ಮ ಬ್ಯಾಂಕುಗಳ ಹಾಗೂ ಇತರ ಯಾವುದೇ ಬ್ಯಾಂಕುಗಳ ATMಗಳಲ್ಲಿನ ಎಷ್ಟು ಬಾರಿ ಕೂಡಾ ಯಾವುದೇ ವ್ಯವಹಾರ ನಡೆಸಿದರೂ ಅವುಗಳೆಲ್ಲ ಸಂಪೂರ್ಣವಾಗಿ ಉಚಿತವಾಗಿರತ್ತವೆ. ಪ್ರಸ್ತುತ ಲಭ್ಯ ಪರಿಷ್ಕೃತ ನಿಯಮದಂತೆ ನವೆಂಬರ್ 10, 2016 ರಿಂದ ದಶಂಬರ 30, 2016ರ ತನಕ ನಿಶುಲ್ಕವಾಗಿ ATMಗಳನ್ನು ಬಳಸಬಹುದು.
19. ಹಣಪಡೆಯಲು ರೂ.10,000/- ಪ್ರತಿದಿನದ ಮಿತಿ, ಇನ್ನೊಂದು ಬ್ಯಾಂಕಿನಲ್ಲಿರುವ ಮತ್ತೊಂದು ಬ್ಯಾಂಕಿನ ಖಾತೆಗೆ ಅನ್ವಯಿಸುತ್ತದೆಯೆ?
ಗಿರವಿ ವ್ಯಾಪಾರಿಗಳು, ಬ್ಯಾಂಕುಗಳು, ಅಂಚೆ ಕಚೇರಿಗಳು, ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಿಳಿ ಬಣ್ಣದ ATMಗಳಿಗೆ ( White Label ATMs) ಪ್ರತಿದಿನದ ಹಣ ಪಡೆಯುವ ಗರಿಷ್ಠ ಮಿತಿ ರೂ.10,000/- ಎಲ್ಲರಿಗೂ ಅನ್ವಯವಾಗುವುದಿಲ್ಲ.
20. ನಾನೂ ಚೆಕ್ ಮೂಲಕ ನಗದು ಪಡೆಯಬಹುದೆ?
ಪ್ರತಿಯೊಂದೂ ಖಾತೆಗೂ ATMಗಳಲ್ಲಿ ಮತ್ತು ಬ್ಯಾಂಕು ಕಚೇರಿಯಲ್ಲಿ ಪಡೆಯುವ ಮೊತ್ತವೂ ಸೇರಿದಂತೆ ವಾರದ ಗರಿಷ್ಠ ಮಿತಿ ರೂ.24000/- ಆಗಿರುತ್ತದೆ. ಉಳಿತಾಯ ಖಾತೆಗೆ ಪ್ರಸ್ತುತ ಇರುವ ದಿನದ ಗರಿಷ್ಠ ಹಣ ಪಡೆಯುವ ಮೊತ್ತದ ಮಿತಿ ನವೆಂಬರ್ 24, 2016 ರ ನಂತರ ಬದಲಾಗಬಹುದು.
ಕನಿಷ್ಠ 3 ತಿಂಗಳಿಂದ ಚಲಾವಣೆಯಲ್ಲಿ ಇರುವ ವ್ಯವಹಾರಿಕ ಖಾತೆಯಲ್ಲಿ (Current Accounts) ವಾರದ ಗರಿಷ್ಠ ಮಿತಿ ರೂ 50,000/-ಗೆ ಒಳಪಟ್ಟು, ಪ್ರತಿದಿನದಲ್ಲಿ ಹಾಗೂ ವಾರದಲ್ಲಿ ಎಷ್ಟು ಬಾರಿ ಬೇಕಾದರೂ ಹಣ ಪಡೆಯಬಹುದು.
21. ಅಮಾನ್ಯವಾದ ಹಳೆ ಬ್ಯಾಂಕು ನೋಟಗಳನ್ನು ATMs, Cash Deposit Machine, cash Recycler ಮತ್ತು ಬ್ಯಾಂಕು ಬ್ರ್ಯಾಂಚುಗಳಲ್ಲಿ ಹಲವು ಬಾರಿ ಠೇವಣಿ ನಿಕ್ಷೇಪಿಸಬಹುದೇ?
ಹೌದು. ದಶಂಬರ 30, 2016ರ ತನಕ ಅಮಾನ್ಯವಾದ ಹಳೆ ಬ್ಯಾಂಕು ನೋಟಗಳನ್ನು ನೀವು ಎಷ್ಟು ಬಾರಿ ಬೇಕಾದರೂ ATMs, Cash Deposit Machine, cash Recycler ಮತ್ತು ಬ್ಯಾಂಕು ಬ್ರ್ಯಾಂಚುಗಳಲ್ಲಿ ನಿಕ್ಷೇಪಿಸಬಹುದು. ಬ್ಯಾಂಕು ಬ್ರ್ಯಾಂಚುಗಳಲ್ಲಿ ಈ ಗ್ರಾಹಕರಿರ ಅಮಾನ್ಯವಾದ ಹಳೆ ಬ್ಯಾಂಕು ನೋಟಗಳನ್ನು ತುಂಬಲು ಪ್ರತ್ಯೇಕ ಪಾವತಿ ಅರ್ಜಿ ಲಭ್ಯ.
22. ಎಲೆಕ್ಟ್ರೋನಿಕ್ ವರ್ಗಾವಣೆ (NEFT/RTGS /IMPS/ Internet Banking / Mobile banking ) ಮೂಲಕ ಹಣ ಪಾವತಿಸಬಹುದೆ?
ಹೌದು. ನೀವು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಎಲೆಕ್ಟ್ರೋನಿಕ್ ವರ್ಗಾವಣೆ (NEFT/RTGS /IMPS/ Internet Banking / Mobile banking ) ಮೂಲಕ ಅಥವಾ ಇನ್ನಾವುದೇ ನಗದು ರಹಿತ ಮಾದರಿಯ ಹಣ ಪಾವತಿವ್ಯವಸ್ಥೆ ಬಳಸಬಹುದು.
23. ಎಷ್ಟು ಬಾರಿ ನಾನು ಹಣ ಬದಲಾಯಿಸಬಹುದು?
ಯೋಜನೆಯ ಕೊನೆ ದಿನ ದಶಂಬರ 30, 2016ರ ತನಕ , ಭಾರತೀಯ ರಿಸರ್ವೇ ಬ್ಯಾಂಕ್ ಹಾಗೂ ಇದರ ಎಲ್ಲ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು ,ಸ್ಥಳೀಯ ಗ್ರಾಮೀಣ ಬ್ಯಾಂಕುಗಳು, ಸ್ಥಳೀಯ ನಗರ ಸಹಕಾರಿ ಬ್ಯಾಂಕುಗಳು, ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಅವುಗಳ ಬ್ರ್ಯಾಂಚುಗಳು ಮತ್ತು ಪ್ರಧಾನ ಅಂಚೆ ಕಚೇರಿ ಅಥವಾ ಯಾವುದೇ ಉಪ ಅಂಚೆ ಕಚೇರಿಗಳಲ್ಲಿ ನೀವು ಎಷ್ಟು ಬಾರಿ ಬೇಕಾದರೂ ನಿಮ್ಮ ಹಣ ವನ್ನು ಖಾತೆಯಲ್ಲಿ ಜಮಾಮಾಡಬಹುದು. ದಶಂಬರ 30, 2016ರ ನಂತರ ಭಾರತೀಯ ರಿಸರ್ವೇ ಬ್ಯಾಂಕ್ ಇದರ ನಿರ್ದಿಷ್ಟ ಕಚೇರಿಗಳಲ್ಲಿ ಮಾತ್ರ ಸಾಧ್ಯ.
ಹಾಗಾಗಿ, ಸಾಕಷ್ಟು ಕಾಲಾವಕಾಶ ನಿಮಗೆ ಲಭ್ಯವಿದ್ದು, ಯಾವುದೇ ರೀತಿಯ ಗೊಂದಲ ಪಡಬೇಕಿಲ್ಲ, ಹಣದ ಮೌಲ್ದ ಬಗ್ಗೆ ಆತುರಪಡಬೇಕಿಲ್ಲ, ಅಮಾನ್ಯತೆ ಕುರಿತು ಗಾಬರಿಯಾಗಬೇಕಿಲ್ಲ.ಯಾವುದೇ ಒತ್ತಡದಲ್ಲಿ ಗೊಂದಲ ಸೃಷ್ಠಿಸಿಕೊಳ್ಳುವ, ವ್ಯವದಾನ ಕಳೆದುಕೊಳ್ಳುವ ನೂಕುನುಗ್ಗಲುಗಳಲ್ಲಿ ಶ್ರಮವಹಿಸಬೇಕಿಲ್ಲ. ಆರಾಮವಾಗಿ, ಯಾವುದೇ ಬ್ಯಾಂಕಿನ ಯಾವುದೇ ಬ್ರ್ಯಾಂಚಿನಲ್ಲೂ ಹಾಗೂ ATMs, Cash Deposit Machine, cash Recycler ಮೂಲಕ ನಿಮ್ಮ ಹಣ ಬದಲಾವಣೆಯನ್ನು ಯೋಜನೆಯ ಕೊನೆ ದಿನ ದಶಂಬರ 30, 2016ರ ರಾತ್ರಿ12.00 ಗಂಟೆ ತನಕ ಮಾಡಬಹುದು.
24. ನಾನು ಈಗ ವಿದೇಶದಲ್ಲಿದ್ದೇನೆ. ನಾನೇನು ಮಾಡಲಿ?
ನಿಮ್ಮ ಅಮಾನ್ಯ ಹಳೆ ಹಣವನ್ನು ಬ್ಯಾಂಕಿನ ನಿಮ್ಮ ಖಾತೆಯಲ್ಲಿ ಜಮಾ/ಠೇವಣಿ/ನಿಕ್ಷೇಪ ಮಾಡಲು ನೀವು ಯಾರನ್ನಾದರೂ ನಿಮ್ಮ ಪ್ರತಿನಿಧಿಯಾಗಿ ಸೂಚಿಸಿ ಹಣದ ಜೊತೆ ಬ್ಯಾಂಕಿಗೆ ಕಳುಹಿಸಿಕೊಡಬಹುದು. ಅವರಲ್ಲಿ ನಿಮ್ಮನ್ನ ಅವರು ಪ್ರತಿನಿಧಿಸುವ ಕುರಿತಾದ ನಿಮ್ಮ ಸಹಿ ಇರುವ ಪತ್ರ, ನಿಮ್ಮವಿಜ್ಞಾಪನಾ ಪತ್ರ, ಅವರ ಅಧಿಕೃತ ಮಾನ್ಯ ಗುರುತುಚೀಟಿಗಳು ಅಗತ್ಯ.
ಅಧಿಕೃತ ಮಾನ್ಯ ಗುರುತುಚೀಟಿಗಳಾಗಿ ಇವುಗಳನ್ನು ಬಳಸಬಹುದು:- Aadhaar Card, Driving License, Voter ID Card, Pass Port, NREGA Card, PAN Card ಅಲ್ಲದೆ, ಸರಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ Identity Cardಗಳು.
25. ನಾನು NRI, ಹಣ ಬದಲಾವಣೆ ಮಾಡಿ ನನ್ನಲ್ಲಿರುವ NRO ಖಾತೆಗೆ ಸೇರಿಸಬಹುದೆ?
ಹೌದು. ಇದು ಸಾಧ್ಯ. ಹಳೆ ಅಮಾನ್ಯ ನೋಟು ಬದಲಾಯಿಸಿ ಸಿಗುವ ಹೊಸ ನೋಟುಗಳನ್ನು ನಿಮ್ಮ NRO ಖಾತೆಗೆ ಸೇರಿಸಬಹುದು.
26.ನಾನು ವಿದೇಶಿ ಪ್ರವಾಸಿಗ. ನನ್ನಲ್ಲಿ ಹಳೆ ಅಮಾನ್ಯ ನೋಟು ಇದೆ. ನಾನೇನು ಮಾಡಲಿ?
ನೀವು ಗರಿಷ್ಠ ರೂ 5000/- ರನ್ನು ವಿಮಾನ ನಿಲ್ದಾಣಗಳ ಹಣವಿನಿಮಯ ಕೇಂದ್ರಗಳಲ್ಲಿ ನಿಮ್ಮ ಗುರುತು ಚೀಟಿ ನೀಡಿ ನವೆಂಬರ್ 24, 2016 ರ ರಾತ್ರಿ 12.00 ಗಂಟೆ ತನಕ ಹಳೆ ಅಮಾನ್ಯ ನೋಟು ವಿನಿಮಯ ಮಾಡಬಹುದು.
27.ನನಗೆ ಅತ್ಯಾವಶ್ಯಕ ತುರ್ತು ಕಾರ್ಯಗಳಿಗಾಗಿ ( ಆಸ್ಪತ್ರೆ, ಪಯಣ, ಜೀವ ರಕ್ಷಕ ಔಷಧಿಗಳಿಗಾಗಿ ) ಹಣದ ಅವಶ್ಯಕತೆ ಇದೆ, ನಾನೇನು ಮಾಡಲಿ?
ನವೆಂಬರ್ 24, 2016 ರ ರಾತ್ರಿ 12.00 ಗಂಟೆ ತನಕ ಹಳೆ ಅಮಾನ್ಯ ನೋಟು ಬಳಸಬಹುದಾದ 15 ಕಾರ್ಯಕ್ಷೇತ್ರಗಳೆಂದರೆ:-
01) ಕೇಂದ್ರ ಮತ್ತು ರಾಜ್ಯ ಸರಕಾರಗಳ, ಮುನಿಸಿಪಾಲಿಟಿ ಹಾಗೂ ಇತರ ಸ್ಥಳೀಯ ಪೌರಾಡಳಿತ ಸಂಸ್ಥೆಗಳ ಶುಲ್ಕ, ತೆರಿಗೆ, ಕರ, ಹೆಚ್ಚುವರಿ ದಂಢ ಪಾವತಿಸಲು
02) ವಿದ್ಯುತ್, ನೀರು ಮುಂತಾದ ವ್ಯಕ್ತಿ ಮತ್ತು ಗೃಹ ಬಳಕೆಯ ಸೇವೆಗಳ ಬಿಲ್ಲು , ಹೆಚ್ಚುವರಿ ಶುಲ್ಕ ಪಾವತಿಗಾಗಿ
03) ವೈದ್ಯರ ಔಷಧಚೀಟಿ ಜೊತೆಯಲ್ಲಿ ಶುಶ್ರೂಷೆಗಾಗಿ ಸರಕಾರಿ ಆಸ್ಪತ್ರೆಗಳ ಶುಲ್ಕ ಪಾವತಿಗಾಗಿ, ಔಷಧ ಅಂಗಡಿಗಳಲ್ಲಿ ಔಷಧ ಖರೀದಿಗಾಗಿ
04) ರೈಲ್ವೇ ಟಿಕೆಟ್, ಬಸ್, ವಿಮಾನ ಮುಂತಾದ ಸರಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಸಾರ್ವಜನಿಕ ಸೇವಾ ವ್ಯವಸ್ಥೆಗಳಲ್ಲಿ,
05) ಕೇಂದ್ರ ಮತ್ತು ರಾಜ್ಯ ಸರಕಾರದ ಅನುಮತಿಯ ಸಹಕಾರಿ ಮಾರಾಟ ಸಂಸ್ಥೆಗಳಲ್ಲಿ ( ಗ್ರಾಹಕರು ತಮ್ಮ ಮಾನ್ಯ ಗುರುತು ಚ�