ದಿಲ್ಲಿಯಲ್ಲಿ ಎಟಿಎಂ ಕ್ಯೂ ನಿಂತವರನ್ನು ಭೇಟಿಯಾದ ರಾಹುಲ್ ಗಾಂಧಿ
ಹೊಸದಿಲ್ಲಿ, ನವೆಂಬರ್ 21: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ ದಿಲ್ಲಿಯ ಹಲವುಪ್ರದೇಶಗಳಿಗೆ ತೆರಳಿ ಎಟಿಎಂಗೆ ಸರತಿ ಸಾಲಲ್ಲಿ ನಿಂತ ಜನರನ್ನು ಭೇಟಿಯಾದರೆಂದು ವರದಿಯಾಗಿದೆ. ರಾಹುಲ್ ಗಾಂಧಿ ಜನರಲ್ಲಿ ನೋಟು ಅಮಾನ್ಯಗೊಳಿಸಿದ ಬಳಿಕ ಜನರಿಗಾಗಿರುವ ಕಷ್ಟವನ್ನು ವಿಚಾರಿಸಿದ್ದಾರೆ.ಮೊದಲುದಿಲ್ಲಿಯ ಜಹಾಂಗೀರ್ ಪುರದ ಎಟಿಎಂನಲ್ಲಿ ಸಾಲಾಗಿ ನಿಂತಜನರನ್ನು ಭೇಟಿಯಾಗಿದ್ದಾರೆ.
ನಂತರ ಇಂದ್ರಲೋಕ ಪ್ರದೇಶದಲ್ಲಿ ಎಟಿಎಂ ಮುಂದೆ ನೆರೆದ ಜನರನ್ನು ಮಾತಾಡಿಸಿದ್ದಾರೆ. ದಿಲ್ಲಿಯ ಜಾಕಿರಾ, ಆನಂದ್ ಪರ್ವತ್ ಪ್ರದೇಶದಲ್ಲಿ ಹಣಕ್ಕಾಗಿ ಪರದಾಡಿದ ಜನರನ್ನು ಭೇಟಿಯಾಗಿದ್ದಾರೆ. ಈ ಹಿಂದೆ ಬ್ಯಾಂಕ್‌ಗೆ ಹೋಗಿ ಅವರೇ ಲೈನ್‌ನಲ್ಲಿ ನಿಂತು ನೋಟು ಬದಲಾಯಿಸಿದ್ದರು.
ನವೆಂಬರ್ ಹನ್ನೊಂದಕ್ಕೆ ದಿಲ್ಲಿ ಸಂಸದ ಮಾರ್ಗದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಳೆಯ ನಾಲ್ಕು ಸಾವಿರ ರೂಪಾಯಿ ನೋಟನ್ನು ಬದಲಾಯಿಸಿಕೊಂಡಿದ್ದರು. ಅಂದು ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಾ "15-20 ಜನರಿಗಾಗಿ ಸರಕಾರ ನಡೆಯುವಂತಿರಬಾರದು. ಸರಕಾರ ಜನಸಾಮಾನ್ಯರಿಗಾಗಿ ಇರಬೇಕು. ಕಷ್ಟ ಸಾಮಾನ್ಯ ಜನರು ಅನುಭವಿಸುತ್ತಿದ್ದಾರೆ. ಇವರು ಇಲ್ಲಿ ಗಂಟೆಗಳ ಕಾಲ ನಿಂತು ಕಾಯುತ್ತಿದ್ದಾರೆ.
ನಾನುಇಲ್ಲಿಗೆ 4000ರೂಪಾಯಿಹಳೆ ನೋಟು ಬದಲಾಯಿಸಿಕೊಳ್ಳಲು ಬಂದಿದ್ದೆ. ಮೋದಿಗಾಗಲಿ.ಮಾಧ್ಯಮಗಳಿಗಾಗಲಿ ಸಾಮಾನ್ಯ ಜನರು ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಅರ್ಥವಾಗಲಾರದು. ನನ್ನಜನರಿಗೆ ನೋವಾಗುತ್ತಿದೆ. ನಾನು ಅವರ ನೋವಿಗಾಗಿ ನಾನು ಇಲ್ಲಿ ಲೈನಲ್ಲಿ ನಿಂತಿದ್ದೇನೆ"ಎಂದು ಹೇಳಿದ್ದರೆಂದು ವರದಿ ತಿಳಿಸಿದೆ.