×
Ad

ಬ್ಯಾಂಕುಗಳಲ್ಲಿ 5,44,571 ಕೋ.ರೂ.ಮೌಲ್ಯದ ಹಳೆಯ ನೋಟುಗಳು ಜಮೆ

Update: 2016-11-21 18:47 IST

ಮುಂಬೈ,ನ.21: ಹಣ ನಿಷೇಧ ಕ್ರಮದ ಬಳಿಕ ಜನರು ವಿವಿಧ ಬ್ಯಾಂಕುಗಳಲ್ಲಿ ನ.18ರವರೆಗೆ 5.44 ಲ.ಕೋ.ರೂ.ಗೂ ಅಧಿಕ ವೌಲ್ಯದ ಹಳೆಯ 500 ಮತ್ತು 1,000 ರೂ.ನೋಟುಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಮತ್ತು ತಮ್ಮ ಖಾತೆಗಳಿಗೆ ಜಮಾ ಮಾಡಿದ್ದಾರೆ.
 ನ.10ರಿಂದ 18ರವರೆಗೆ ಬ್ಯಾಂಕುಗಳು ತಮ್ಮ ಕೌಂಟರ್‌ಗಳು ಮತ್ತು ಎಟಿಎಂಗಳ ಮೂಲಕ 1,03,316 ಕೋ.ರೂ.ಗಳನ್ನು ವಿತರಿಸಿವೆ ಎಂದು ಆರ್‌ಬಿಐ ಇಂದು ಹೇಳಿಕೆ ೆಯಲ್ಲಿ ತಿಳಿಸಿದೆ.
  ಈ ಅವಧಿಯಲ್ಲಿ ಬ್ಯಾಂಕುಗಳು ಹೊಸನೋಟುಗಳಿಗೆ ವಿನಿಮಯವಾಗಿ 33,006 ಕೋ.ರೂ.ವೌಲ್ಯದ ಮತ್ತು ಗ್ರಾಹಕರ ಖಾತೆಗಳಲ್ಲಿ ಠೇವಣಿಗಳ ಮೂಲಕ 5,11,565 ಕೋ.ರೂ.ವೌಲ್ಯದ ಹಳೆಯ ನೋಟುಗಳನ್ನು ಸ್ವೀಕರಿಸಿವೆ ಎಂದು ಹೇಳಿಕೆಯು ತಿಳಿಸಿದೆ.
ತನ್ಮಧ್ಯೆ ಹಿಂಗಾರು ಹಂಗಾಮಿಗಾಗಿ ಬಿತ್ತನೆ ಬೀಜಗಳ ಖರೀದಿಗಾಗಿ ಸರಕಾರಿ ಬೀಜಮಾರಾಟ ಕೇಂದ್ರಗಳು ಅಥವಾ ರಾಜ್ಯ,ಕೇಂದ್ರೀಯ ಕೃಷಿ ವಿವಿಗಳಲ್ಲಿ ಹಳೆಯ 500 ರೂ.ನೋಟುಗಳನ್ನು ಪಾವತಿಸಲು ರೈತರಿಗೆ ಅವಕಾಶ ಕಲ್ಪಿಸಿ ಸರಕಾರವು ಸೋಮವಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News