ಟೈಮ್ಸ್ ನೌ ಗೆ ಹೊಸ ಪ್ರಧಾನ ಸಂಪಾದಕ

Update: 2016-11-21 13:20 GMT

ಹೊಸದಿಲ್ಲಿ , ನ. 21 : ಟೈಮ್ಸ್ ನೌ ಸುದ್ದಿ ವಾಹಿನಿಗೆ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೊನೆಗೂ ಹೊಸ ಮುಖ ( ನಿಜವಾಗಿ ಹಳೆಮುಖ) ಬಂದಿದೆ. ನ್ಯೂಸ್ ಎಕ್ಸ್ ಸುದ್ದಿ ವಾಹಿನಿಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್ ಶಿವ್ ಶಂಕರ್ ಅವರು ಟೈಮ್ಸ್ ನೌ ಗೆ ನೂತನ  ಪ್ರಧಾನ ಸಂಪಾದಕರಾಗಲಿದ್ದಾರೆ ಎಂದು ಹೇಳಲಾಗಿದೆ. ರಾಹುಲ್ ಈ ಹಿಂದೆ ಟೈಮ್ಸ್ ನೌ ನಲ್ಲಿ ಅರ್ನಬ್ ಜೊತೆ ಕೆಲಸ ಮಾಡಿದ್ದು ವಾಹಿನಿಯ ಹಿರಿಯ ಸಂಪಾದಕೀಯ ತಂಡದಲ್ಲಿ ಇದ್ದರು. 


ಟಿವಿ ಪತ್ರಿಕೋದ್ಯಮದಲ್ಲಿ ಸುಮಾರು ಎರಡು ದಶಕಗಳ ಅನುಭವವಿದ್ದು 2003 ರಲ್ಲಿ ಹೆಡ್ ಲೈನ್ಸ್ ಟುಡೇ ಸುದ್ದಿ ವಾಹಿನಿ ಪ್ರಾರಂಭಿಸುವ ತಂಡದಲ್ಲಿ ಸಕ್ರಿಯವಾಗಿದ್ದರು. ಅನಂತರ ಟೈಮ್ಸ್ ನೌ , ಇಂಡಿಯಾ ಟುಡೇ ಹಾಗು ನ್ಯೂಸ್ ಎಕ್ಸ್ ಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News