ರೂ.500ರ ಹಳೆಯ ನೋಟಿಗೆ ರೈತರಿಗೆ ಬಿತ್ತನೆ ಬೀಜ: ಸರಕಾರ
Update: 2016-11-21 20:09 IST
ಹೊಸದಿಲ್ಲಿ, ನ.21: ರೂ.500ರ ಹಳೆಯ ನೋಟು ನೀಡಿ ರೈತರು ಬಿತ್ತನೆ ಬೀಜ ಖರೀದಿಸಬಹುದೆಂದು ಸೋಮವಾರ ಸರಕಾರ ತಿಳಿಸಿದೆ.
ಕೇಂದ್ರ ಅಥವಾ ರಾಜ್ಯ ಸರಕಾರಗಳ ಬಿತ್ತನೆ ಬೀಜ ಮಾರಾಟ ಕೇಂದ್ರಗಳು, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ರಾಷ್ಟ್ರೀಯ ಅಥವಾ ರಾಜ್ಯ ಬಿತ್ತನೆ ಬೀಜ ಕಂಪೆನಿಗಳು ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳಿಂದ ರೈತರು ಸೂಕ್ತ ಗುರುತು ದಾಖಲೆ ನೀಡಿ ಹಳೆಯ ನೋಟುಗಳಿಗೆ ಬಿತ್ತನೆ ಬೀಜ ಖರೀದಿಸಬಹುದು.
ರಬಿ ಹಂಗಾಮಿನಲ್ಲಿ ರೈತರಿಗೆ ತೊಂದರೆಯಾಗದಂತೆ ಖಚಿತಪಡಿಸಲು ಸರಕಾರ ಬದ್ಧವಿದೆಯೆಂದು ಅಧಿಕೃತ ಪ್ರಕಟನೆಯೊಂದು ತಿಳಿಸಿದೆ.