×
Ad

ಸಿಬಿಎಸ್‌ಇಯಲ್ಲಿ 700ಕ್ಕೂ ಹೆಚ್ಚು ಅಫಿಲಿಯೇಶನ್ ಅರ್ಜಿ ಬಾಕಿ: ಸರಕಾರ

Update: 2016-11-21 20:47 IST

ಹೊಸದಿಲ್ಲಿ, ನ.21: ಸಂಯೋಜನೆಗಾಗಿ ಸಲ್ಲಿಸಲಾಗಿರುವ 700ಕ್ಕೂ ಹೆಚ್ಚು ಅರ್ಜಿಗಳು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಲ್ಲಿ(ಸಿಬಿಎಸ್‌ಇ) 6 ತಿಂಗಳಿಗೂ ಹೆಚ್ಚು ಕಾಲದಿಂದ ಬಾಕಿಯುಳಿದಿವೆಯೆಂದು ಲೋಕಸಭೆಗಿಂದು ಮಾಹಿತಿ ನೀಡಲಾಗಿದೆ.

ಸಂಯೋಜನೆ ಅರ್ಜಿಗಳ ಸಲ್ಲಿಕೆ ಹಾಗೂ ಪರಿಶೀಲನೆಗಾಗಿ ಸಿಬಿಎಸ್‌ಇ ಆನ್‌ಲೈನ್ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದೆಯೆಂದು ಮಾನವ ಸಂಪನ್ಮೂಲಾಭಿವೃದ್ಧಿ(ಎಚ್‌ಆರ್‌ಡಿ) ಸಹಾಯಕ ಸಚಿವ ಉಪೇಂದ್ರ ಕುಶ್ವಾಹ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.

710 ಅಫಿಲಿಯೇಶನ್ ಅರ್ಜಿಗಳು ಸಿಬಿಎಸ್‌ಇಯಲ್ಲಿ 6 ತಿಂಗಳಿಗೂ ಹೆಚ್ಚು ಕಾಲದಿಂದ ಬಾಕಿಯುಳಿದಿವೆ. ಪ್ರಕ್ರಿಯೆಯನ್ನು ಪಾರದರ್ಶಕವಾಗಿಸಲು ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ಸಮೃದ್ಧವಾಗಿಸಲು ಮಂಡಳಿಯು ಕಾಲಕಾಲಕ್ಕೆ ಸಂಯೋಜನೆಯ ಉಪನಿಬಂಧನೆಗಳಿಗೆ(ಬೈಲಾ) ತಿದ್ದುಪಡಿ ತರುತ್ತಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News