×
Ad

ಸ್ವತಂತ್ರ ವಿಶ್ವ ವ್ಯವಸ್ಥೆಗೆ ಬೆಂಬಲ ಮುಂದುವರಿಸಿ ಟ್ರಂಪ್‌ಗೆ ಒಬಾಮ ಕರೆ

Update: 2016-11-21 21:16 IST

 ಲಿಮಾ (ಪೆರು), ನ. 21: ಸ್ವತಂತ್ರ ವಿಶ್ವ ವ್ಯವಸ್ಥೆಗೆ ಅಮೆರಿಕ ನೀಡುವ ಬೆಂಬಲವನ್ನು ಮುಂದುವರಿಸಿಕೊಂಡು ಹೋಗುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತನ್ನ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್‌ಗೆ ಕರೆ ನೀಡಿದ್ದಾರೆ. ಜಾಗತಿಕ ಶಾಂತಿ ಮತ್ತು ಸಮೃದ್ಧಿ ಅದನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.

‘‘ನಮ್ಮ ವಿಶ್ವ ವ್ಯವಸ್ಥೆಯಲ್ಲಿ ಅಮೆರಿಕ ನಿಜವಾಗಿಯೂ ಅನಿವಾರ್ಯ ದೇಶವಾಗಿದೆ ಎನ್ನುವುದು ಆಗಮನ ಅಧ್ಯಕ್ಷರಿಗೆ ನಾನು ನೀಡುವ ಮಹತ್ವದ ಸಲಹೆಯಾಗಿದೆ’’ ಎಂದು ಅಧ್ಯಕ್ಷರಾಗಿ ತನ್ನ ಅಂತಿಮ ವಿದೇಶ ಪ್ರವಾಸವನ್ನು ಮುಕ್ತಾಯಗೊಳಿಸಿದ ಒಬಾಮ ಪೆರುವಿನಲ್ಲಿ ಹೇಳಿದರು.

‘‘ಅಂತಾರಾಷ್ಟ್ರೀಯ ವ್ಯವಸ್ಥೆ ಮತ್ತು ನೀತಿಗಳನ್ನು ಎತ್ತಿಹಿಡಿಯುವ ಸಾಮರ್ಥ್ಯ ಅಮೆರಿಕಕ್ಕಿದೆ. ಈ ವ್ಯವಸ್ಥೆ ಮತ್ತು ನೀತಿಗಳು ಆಧುನಿಕ ಜಗತ್ತನ್ನು ರೂಪಿಸಿವೆ’’ ಎಂದು ಒಬಾಮ ನುಡಿದರು.

ಅಮೆರಿಕಕ್ಕೆ ತನ್ನದೇ ಆದರ್ಶಗಳನ್ನು ಪ್ರತಿ ಬಾರಿಯೂ ಪೂರೈಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಒಪ್ಪಿಕೊಂಡ ಅವರು, ಆದರೆ, ಜಾಗತಿಕ ಭದ್ರತೆಗೆ ಪೂರಕವಾಗಿ ನಿಂತಿದೆ ಎಂದರು.

ಪರಿಷ್ಕೃತ ವಿಶ್ವ ವ್ಯವಸ್ಥೆಯನ್ನು ಕಲ್ಪಿಸಿದವರಿಗೆ ಇತಿಹಾಸ ಎಚ್ಚರಿಕೆ ನೀಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News