×
Ad

ಬಾಹುಬಲಿ-2 ದೃಶ್ಯ ಸೋರಿಕೆ: ಗ್ರಾಫಿಕ್ ಡಿಸೈನರ್ ಬಂಧನ

Update: 2016-11-22 23:50 IST

ಹೊಸದಿಲ್ಲಿ, ನ.22: ಕೆಲಸವು ಪ್ರಗತಿಯಲ್ಲಿರುವ ‘ಬಾಹುಬಲಿ-2’ ಚಿತ್ರದ 9 ನಿಮಿಷಗಳ ದೃಶ್ಯಾವಳಿ ‘ಕದ್ದ’ ಆರೋಪದಲ್ಲಿ ಗ್ರಾಫಿಕ್ ಡಿಸೈನರ್ ಒಬ್ಬನನ್ನು ಆಂಧ್ರಪ್ರದೇಶದ ವಿಜಯವಾಡದಿಂದ ಬಂಧಿಸಲಾಗಿದೆ.ಇದು ಕಳೆದ ವರ್ಷ ಭಾರೀ ಯಶಸ್ಸು ಕಂಡಿದ್ದ ಕಾಲ್ಪನಿಕ ಚಿತ್ರದ 2ನೆಯ ಭಾಗವಾಗಿದೆ.

ಚಿತ್ರದ ನಿರ್ದೇಶಕ ಎಸ್.ಎಸ್. ರಾಜವೌಳಿ, ಹೈದರಾಬಾದ್‌ನ ಜುಬಿಲಿಹಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಗ್ರಾಫಿಕ್ ಡಿಸೈನರ್‌ನನ್ನು ಬಂಧಿಸಲಾಗಿದೆ.
ಚಿತ್ರದ ಕ್ಲೈಮ್ಯಾಕ್ಸ್‌ನದೆನ್ನಲಾದ ಕಚ್ಚಾ ಯುದ್ಧದ ದೃಶ್ಯಾವಳಿ ಆನ್‌ಲೈನ್‌ನ ದಾರಿ ಹಿಡಿದು ವ್ಯಾಪಕವಾಗಿ ಸುತ್ತಾಡತೊಡಗಿದ್ದು ಬಳಿಕ ಅದನ್ನು ಡಿಲಿಟ್ ಮಾಡಲಾಯಿತೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News