ಟ್ಯಾಲೆಂಟ್‌ನಲ್ಲಿ ಹುಖೂಖುಲ್ ಇಬಾದ್ ಸ್ನೇಹ ಸಮ್ಮಿಲನ

Update: 2016-11-23 14:50 GMT

ಮಂಗಳೂರು, ನ.23: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಮಂಗಳೂರು, ಗುರುಪುರ ಮತ್ತು ಮಂಗಳೂರು ಸೌತ್-ಕಣ್ಣೂರು ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್‌ಮೆಂಟ್‌ನ ಜಂಟಿ ಆಶ್ರಯದಲ್ಲಿ ಹುಖೂಖುಲ್ ಇಬಾದ್ ಅಭಿಯಾನದ ಅಂಗವಾಗಿ ಉಲಮಾಗಳ ಹಾಗೂ ಮದ್ರಸ ಮ್ಯಾನೇಜ್‌ಮೆಂಟ್ ಸಮಿತಿಯ ಪದಾಧಿಕಾರಿಗಳ ಸ್ನೇಹಸಮ್ಮಿಲನವು ಟ್ಯಾಲೆಂಟ್ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಜಂಇಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಉಮರ್ ದಾರಿಮಿ ಪಟ್ಟೋರಿ ಉದ್ಘಾಟಿಸಿದರು. ಹುಖೂಖುಲ್ ಇಬಾದ್-ಮನುಕುಲದ ಸೇವೆ ವಿಷಯದಲ್ಲಿ ಸಮಸ್ತ ಮುಶಾವರ ಕರ್ನಾಟಕ ಸದಸ್ಯ ಅಲ್‌ಹಾಜ್ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ಹಾಗೂ ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ತರಗತಿ ನಡೆಸಿದರು.

ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ವೈ.ಮೊಯ್ದಿನಬ್ಬ ಹಾಜಿ, ಗುರುಪುರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಮಂಗಳೂರು ರೇಂಜ್‌ನ ರಿಯಾಝ್ ಹಾಜಿ ಬಂದರ್, ಮಂಗಳೂರು ಸೌತ್ ರೇಂಜ್‌ನ ನಝೀರ್ ವಳಚ್ಚಿಲ್ ಪದವು, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಕಣ್ಣೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ರಶೀದ್ ಹನೀಫಿ, ಡಿಕೆಎಸ್‌ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯ, ಟ್ಯಾಲೆಂಟ್ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ಯಾಲೆಂಟ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ವಹಿಸಿದ್ದರು. ಗುರುಪುರ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ದುಆ ನೆರವೇರಿಸಿದರು.

ಟಿಆರ್‌ಎಫ್ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವನೆಗೈದರು. ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಅಸ್ಪರ್ ಹುಸೈನ್ ವಂದಿಸಿದರು. ಮುಹಮ್ಮದ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News