ಭಾರತ ಮಹಿಳಾ ತಂಡಕ್ಕೆ ಐಸಿಸಿ ಶಿಕ್ಷೆ
Update: 2016-11-23 23:03 IST
ದುಬೈ, ನ.23: ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಪಂದ್ಯಗಳನ್ನು ಬಹಿಷ್ಕರಿಸಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಐಸಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲ ಆರು ಅಂಕವನ್ನು ಎದುರಾಳಿ ಪಾಕಿಸ್ತಾನಕ್ಕೆ ನೀಡಲು ನಿರ್ಧರಿಸಿದೆ.
ಭಾರತ ಹಾಗೂ ಪಾಕಿಸ್ತಾನದಲ್ಲಿನ ಈಗಿನ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆದರೆ, ಬಿಸಿಸಿಐ ಸರಣಿಯಲ್ಲಿ ಭಾಗವಹಿಸದೇ ಇರುವುದಕ್ಕೆ ‘ಒಪ್ಪುವಂತಹ ಕಾರಣ’ವನ್ನು ನೀಡಲು ವಿಫಲವಾಗಿದೆ ಎಂದು ಐಸಿಸಿ ತಾಂತ್ರಿಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಆಡುವುದನ್ನು ಎಲ್ಲರೂ ವಿರೋಧಿಸುತ್ತಿದ್ದಾರೆಂಬ ಅಂಶ ಐಸಿಸಿಗೆ ಚೆನ್ನಾಗಿಯೇ ಗೊತ್ತು. ಆದರೆ, ಐಸಿಸಿ ಚೇರ್ಮನ್‌ಗೂ ಬಿಸಿಸಿಐ ಸರಕಾರದ ಅನುಮತಿ ಪಡೆಯಬೇಕಾಗುತ್ತದೆ ಎಂಬ ಅಂಶವೂ ಚೆನ್ನಾಗಿ ಗೊತ್ತಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಹೇಳಿದ್ದಾರೆ.