×
Ad

ನೋಟು ರದ್ದತಿಯಿಂದ ಚಹಾ ಕಾರ್ಮಿಕರಿಗೆ ವೇತನ ಸಂಕಷ್ಟ

Update: 2016-11-23 23:58 IST

ಜಲ್ಪಾಯ್ಗುರಿ(ಪ.ಬಂ.), ನ.23: ವೇತನ ಪಾವತಿಸದಿರುವುದನ್ನು ಪ್ರತಿಭಟಿಸಿ ಜಲ್ಪಾಯ್ಗುರಿ ಜಿಲ್ಲೆಯ ಕೊರೋಲಾ ವ್ಯಾಲಿ ಚಹಾ ತೋಟದ ಕಾರ್ಮಿಕರಿಂದು ಎರಡು ತಾಸುಗಳ ಕಾಲ ಮ್ಯಾನೇಜರ್‌ಗೆ ೇರಾವ್ ನಡೆಸಿ, ರಾಷ್ಟ್ರೀಯ ಹೆದ್ದಾರಿ 31ನ್ನು 8 ತಾಸುಗಳ ಕಾಲ ತಡೆದಿದ್ದಾರೆ.

ತಾವು ನೋಟಿನ ಬಿಕ್ಕಟ್ಟಿನಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಆರ್‌ಬಿಐಯ ನಿಯಮಗಳಿಂದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟರ ಖಾತೆಗೆ ಹಣ ಬರುತ್ತಿಲ್ಲ. ಅದರಿಂದಾಗಿ ಅದು ಸಂಬಂಧಿತ ಚಹಾ ತೋಟಗಳ ಖಾತೆಗೆ ವರ್ಗಾವಣೆಯಾಗುತ್ತಿಲ್ಲ ಹಾಗೂ ಹಣ ಪಡೆದ, ವೇತನ ನೀಡಲು ಸಾಧ್ಯವಾಗುತ್ತಿಲ್ಲವೆಂದು ಚಹಾ ತೋಟಗಳ ಮಾಲಕರು ಹೇಳುತ್ತಿದ್ದಾರೆ.
ಅದರಿಂದಾಗಿ ಜಲ್ಪಾಯ್ಗುರಿ ಹಾಗೂ ನೆರೆಯ ಅಲಿಪುರ್ ದುವಾರ್ ಜಿಲ್ಲೆಗಳ ಹಲವು ಚಹಾ ತೋಟಗಳಲ್ಲಿ ಕಾರ್ಮಿಕರಿಗೆ ಸಂಬಳ ಪಾವತಿಯ ಬಿಕ್ಕಟ್ಟು ತಲೆದೋರಿದೆಯೆಂದು ಚಹಾ ತೋಟಗಾರರ ಸಂಘ ತಿಳಿಸಿದೆ.
ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ಕಾರ್ಮಿಕರು ಮುಂಜಾನೆ 7ಕ್ಕೆ ಆರಂಭವಾದ ಹೆದ್ದಾರಿ ತಡೆಯನ್ನು ಅಪರಾಹ್ನ 3ರ ವೇಳೆ ಹಿಂದೆಗೆದರು ಹಾಗೂ ೇರಾವನ್ನೂ ಹಿಂಪಡೆದರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News