ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಣೆ

Update: 2016-11-24 12:58 GMT

ಕೊಣಾಜೆ, ನ.24: ಅರ್ಹ ಫಲಾನುಭವಿಗಳನ್ನು ಪಂಚಾಯತ್ ಗುರುತಿಸಿ ಸವಲತ್ತುಗಳನ್ನು ವಿತರಿಸಿದ್ದು, ಮುಂದೆಯೂ ಅರ್ಜಿ ಸಲ್ಲಿಸಿದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಸಿಗುವ ಬಹುತೇಕ ಸವಲತ್ತುಗಳನ್ನು ವಿತರಿಸುವಲ್ಲಿ ಪಂಚಾಯತ್ ಬದ್ಧವಾಗಿದೆ ಎಂದು ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಹೇಳಿದರು.

ಅವರು ಕುರ್ನಾಡು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆದ 14ನೆ ಹಣಕಾಸು ಮತ್ತು ಗ್ರಾಮ ಪಂಚಾಯತ್ ನಿಧಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಶೇ.25ರ ಅನುದಾನದಡಿ ಮಂಜೂರಾದ ಅಂಗವಿಕಲರಿಗೆ, ವೈದ್ಯಕೀಯ ಚಿಕಿತ್ಸೆ ವೆಚ್ಚದ ಸಹಾಯಧನದ ಚೆಕ್‌ಗಳನ್ನು ಗುರುವಾರ ವಿತರಿಸಿ ಮಾತನಾಡಿದರು.

ಕೆಲ ಜಾತಿ ಪ್ರಮಾಣದ ತೊಡಕುಗಳಿಂದ ಹಲವು ಅರ್ಜಿದಾರರಿಗೆ ಸವಲತ್ತು ದೊರಕಿಸಲು ಸಾಧ್ಯವಾಗಿಲ್ಲ. ಮುಂದೆ ಅದನ್ನು ಸರಿಪಡಿಸಿ ದಾಖಲೆ ಸಮೇತ ಪಂಚಾಯತ್‌ಗೆ ಒದಗಿಸಿದಲ್ಲಿ ಮುಂಬರುವ ಸಾಲಿನಲ್ಲಿ ವಿತರಿಸಲಾಗುವುದು. ಸದ್ಯ ಸರಕಾರದಿಂದ ಸಿಕ್ಕ ಉಪಯೋಗವನ್ನು ಸರಿಯಾಗಿ ವಿನಿಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕುರ್ನಾಡು ಗ್ರಾ.ಪಂ ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ , ಕುರ್ನಾಡು ಪಂಚಾಯತ್ ಸದಸ್ಯರಾದ ಗೋಪಾಲ ಬಂಗೇರ, ಶಿವಶಂಕರ್ ಭಟ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಹಾಗೂ ಲೆಕ್ಕಸಹಾಯಕ ದಿನೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News