×
Ad

ಸರ್ಜುಬಾಲಾಗೆ ಹ್ಯಾಟ್ರಿಕ್ ಚಿನ್ನ

Update: 2016-11-24 23:42 IST

 ಹರಿದ್ವಾರ, ನ.24: ಭಾರತದ ಬಾಕ್ಸರ್ ತಾರೆ ಸರ್ಜುಬಾಲಾ ದೇವಿ ನ್ಯಾಶನಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸತತ 3ನೆ ಚಿನ್ನದ ಪದಕ ಜಯಿಸಿದ್ದಾರೆ.

ಐದು ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಜಯಿಸಿದ ಹರ್ಯಾಣ ತಂಡ ಸಮಗ್ರ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರೈಲ್ವೇಸ್ ಸ್ಪೋರ್ಟ್ಸ್ ಪ್ರೊಮೊಶನ್ ಬೋರ್ಡ್(2 ಚಿನ್ನ, 1 ಬೆಳ್ಳಿ, 4 ಕಂಚು) ಎರಡನೆ ಸ್ಥಾನ ಪಡೆಯಿತು.

  23ರ ಪ್ರಾಯದ ಸರ್ಜುಬಾಲಾ ಸ್ಥಳೀಯ ಆಟಗಾರ್ತಿ ಕೃಷ್ಣಾ ಥಾಪಾರನ್ನು ಫೈನಲ್‌ನಲ್ಲಿ ಮಣಿಸಿದರು. 2011ರ ಟೂರ್ನಿಯಲ್ಲೂ ಥಾಪಾರನ್ನು ಸೋಲಿಸಿದ್ದ ಸರ್ಜುಬಾಲಾ ರಾಷ್ಟ್ರೀಯ ಪ್ರಶಸ್ತಿಯನ್ನು ಜಯಿಸಿದ್ದರು.

‘‘ನನಗಿದು ಒಟ್ಟಾರೆ ನಾಲ್ಕನೆ ರಾಷ್ಟ್ರೀಯ ಚಿನ್ನದ ಪದಕವಾಗಿದ್ದು, ಸತತ ಮೂರನೆ ಬಾರಿ ಈ ಪದಕ ಲಭಿಸಿದೆ. ಹೊಸ ಫೆಡರೇಶನ್ ಮೊದಲ ಬಾರಿ ಈ ಟೂರ್ನಿಯನ್ನು ಆಯೋಜಿಸಿತ್ತು’’ ಎಂದು ಸರ್ಜುಬಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News