ಚೊಕ್ಕಬೆಟ್ಟು: ಎಸ್ಕೆಎಸ್ಸೆಮ್‌ನಿಂದ ಪುಸ್ತಕ ಮೇಳ

Update: 2016-11-25 09:36 GMT

ಸುರತ್ಕಲ್, ನ.25: ಎಸ್ಕೆಎಸ್ಸೆಮ್‌ನಿಂದ ಪುಸ್ತಕ ಮೇಳ ಮತ್ತು ಇಸ್ಲಾಮೀ ಸಂದೇಶಗಳ ಪ್ಯಾನಲ್ ಪ್ರದರ್ಶನ ಕಾರ್ಯಕ್ರಮ ಗುರುವಾರ ಕೃಷ್ಣಾಪುರ ಜಂಕ್ಷನ್‌ನಲ್ಲಿ ನಡೆಯಿತು. ಮನಪಾ ಮಾಜಿ ಉಪಮೇಯರ್ ಪುರುಷೊತ್ತಮ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ಗುಣಕರ ಶೆಟ್ಟಿ, ಅಯಾಝ್, ಕುಮಾರ್ ಮೆಂಡನ್, ‘ಪ್ಯಾರಡೈಸ್’ನ ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಕೃಷ್ಣಾಪುರ ಧೂಮವತಿ ಕ್ಷೇತ್ರದ ಅಧ್ಯಕ್ಷ ದೇವೇಂದ್ರ ಡಿ. ಕೋಟ್ಯಾನ್, ಎಸ್‌ಡಿಪಿಐ ಮುಖಂಡ ಅಬೂಬಕರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಬೂ ಬಿಲಾಲ್ ಎಸ್.ಎಂ. ಮಾತನಾಡಿದರು. ಎಂ.ಜಿ.ಮುಹಮ್ಮದ್ ಪ್ಯಾನಲ್ ನಲ್ಲಿ ಪ್ರದರ್ಶಿಸಲಾದ ಸಂದೇಶಗಳನ್ನು ವಿವರಿಸಿದರು. ಎಸ್ಕೆಎಸ್ಸೆಮ್ ಚೊಕ್ಕಬೆಟ್ಟು ಅಧ್ಯಕ್ಷ ಫಯಾಝ್, ಕೋಶಾಧಿಕಾರಿ ಅಬ್ದುಲ್ ಜಲೀಲ್, ಕಾರ್ಯದರ್ಶಿ ಅಬ್ದುಲ್ ಬಶೀರ್, ಟಿ.ಎಂಹನೀಫ್, ಮುಹಮ್ಮದ್ ರಫೀಕ್, ಅಬ್ದುರ್ರಹೀಮ್, ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು. ಶರೀಫ್ ಮುಲ್ಕಿ ಸ್ವಾಗತಿಸಿ, ವಂದಿಸಿದರು.

ಕುರ್‌ಆನ್ ಸಂದೇಶ ಸಮಾವೇಶ

ಎಸ್ಕೆಎಸ್ಸೆಮ್ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಸಂಜೆ 4:30 ರಿಂದ ರಾತ್ರಿ 9ರವರೆಗೆ ಕುರ್‌ಆನ್ ಸಂದೇಶ ಸಮಾವೇಶವು ಕೃಷ್ಣಾಪುರ ಜಂಕ್ಷನ್‌ನಲ್ಲಿ ನಡೆಯಿತು.

ಮೌಲವಿ ಮುಸ್ತಫಾ ದಾರಿಮಿ ‘ಅಹ್ಲುಸ್ಸುನ್ನತಿ ವಲ್ ಜಮಾಅ’ ಎಂಬ ವಿಷಯದಲ್ಲಿ ಮಾತನಾಡಿದರು.

 ಮುಖ್ಯ ಭಾಷಣಗಾರ ಮೌಲವಿ ಉನೈಝ್ ಪಾಪಿನಶ್ಶೇರಿ ‘ಪ್ರವಾದಿ ಮುಹಮ್ಮದ್(ಸ.) ಮಾನವರಲ್ಲಿ ಮಹೋನ್ನತರು’ ಎಂಬ ವಿಷಯದಲ್ಲಿ ಮಾತನಾಡಿದರು. ಎಸ್ಕೆಎಸ್ಸಮ್ ಮಂಗಳೂರು ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ, ಉಪಾಧ್ಯಕ್ಷ ಅಬೂಬಕರ್ ಪಾಂಡೇಶ್ವರ, ಪ್ರಧಾನ ಕಾರ್ಯದರ್ಶಿ ಬಶೀರ್ ಶಾಲಿಮಾರ್ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News