×
Ad

ಪಾಪ, ಈ ‘ಬಡ’ ಶಾಸಕ ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಕೊಟ್ಟ ಬರ್ತ್ ಡೇ ಗಿಫ್ಟ್ ಏನು ಗೊತ್ತೇ ?

Update: 2016-11-25 12:16 IST

ಮುಂಬೈ, ನ.25: ಗಣಿ ಧಣಿ ಜನಾರ್ದನ ರೆಡ್ಡಿಯ ಪುತ್ರಿಯ 500 ಕೋಟಿ ರೂಪಾಯಿ ವಿವಾಹವು ಇನ್ನೂ ಜನಮಾನಸದಲ್ಲಿರುವಾಗಲೇ ಮುಂಬೈ ಶಾಸಕರೊಬ್ಬರು ತಮ್ಮ ಪುತ್ರನಿಗೆ ಬರ್ತ್ ಡೇ ಗಿಫ್ಟ್ ಎಂದು ವಿಲಾಸಿ ಮರ್ಸಿಡಿಸ್ ಕಾರು ನೀಡಿದ್ದಾರೆ. ಇಲ್ಲಿ ಅಂತಹುದ್ದೇನು ವಿಶೇಷ ಅಂತೀರಾ ? ಈ ಶಾಸಕನ ಪುತ್ರ ಇನ್ನೂ ಅಪ್ರಾಪ್ತ ವಯಸ್ಕ!.

ಮಕ್ಕಳಿಗೆ ಹುಟ್ಟುಹಬ್ಬದ ದಿನ ಹೊಚ್ಚ ಹೊಸ ಡ್ರೆಸ್, ಚಾಕಲೇಟ್, ಕೇಕ್ ಮುಂತಾದ ಉಡುಗೊರೆಗಳು ಸಾಮಾನ್ಯ. ಆದರೆ ಘಾಟ್ ಕೊಪರ್ ಪಶ್ಚಿಮ ಕ್ಷೇತ್ರದ ಶಾಸಕ ರಾಮ್ ಕದಮ್ ತಮ್ಮ ಪುತ್ರನಿಗೆ ಕನ್ವರ್ಟಿಬಲ್ ಮರ್ಸಿಡಿಸ್ ನೀಡಿದ್ದಾರೆ.
ತಮ್ಮ ಪುತ್ರನಿಗೆ ಈ ದುಬಾರಿ ಗಿಫ್ಟ್ ನೀಡಿದ ಖುಷಿಯಲ್ಲಿ ರಾಮ್ ಕದಮ್ ಟ್ವಿಟ್ಟರ್ ಮೊರೆ ಹೋಗಿ ತಮ್ಮ ಪುತ್ರ ಕಾರಿನೆದುರು ಹೆಮ್ಮೆಯಿಂದ ನಿಂತುಕೊಂಡ ಫೋಟೋ ಪೋಸ್ಟ್ ಮಾಡಿದ್ದಾರೆ. ಹ್ಯಾಪಿ ಬರ್ತ್ ಡೇ ಟು ಮೈ ಡಿಯರೆಸ್ಟ್ ಸನ್@ಔಮ್‌ಆರ್‌ಕದಮ್. ದಿಸ್ ಮೈ ಲವಿಂಗ್ ಗಿಫ್ಟ್ ಫಾರ್ ಹಿಮ್!!!’’ ಎಂದು ಬರೆದಿದ್ದಾರೆ.
ಇದು ಟ್ವಿಟ್ಟರಿಗರ ಕಣ್ಣಿಗೆ ಬಿದ್ದಿದ್ದೇ ತಡ, ಟೀಕಾತ್ಮಕ ಟ್ವೀಟುಗಳ ಪ್ರವಾಹವೇ ಹರಿದು ಬಂದಿತ್ತು. ಶಾಸಕ ತನ್ನ ಅಪ್ರಾಪ್ತ ವಯಸ್ಕ ಪುತ್ರನಿಗೆ ಇಷ್ಟೊಂದು ದುಬಾರಿ ಗಿಫ್ಟ್ ಏಕೆ ನೀಡಿದ್ದಾರೆಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸರಕಾರದ ನೋಟು ಅಮಾನ್ಯ ಎಷ್ಟು ಪರಿಣಾಮ ಬೀರಬಹುದು ಎಂದು ಪ್ರಶ್ನಿಸಿದ್ದಾರೆ. ಮತ್ತೂ ಹಲವರು ತಮ್ಮನ್ನು ದತ್ತು ಪಡೆಯುವಂತೆ ಶಾಸಕನನ್ನು ಕೇಳಿಕೊಂಡಿದ್ದಾರೆ.
ಶಾಸಕ ತಮ್ಮನ್ನು ಟ್ವಿಟ್ಟರಿನಲ್ಲಿ ಡ್ಯಾಶಿಂಗ್ ಎಂಎಲ್‌ಎ ಎಂದು ಹೇಳಿಕೊಂಡಿದ್ದಾರೆ. ಒಂದಂತೂ ನಿಜ ಶಾಸಕನ ಈ ಟ್ವೀಟ್ ಹಲವರಿಗೆ ತಮಗೆ ದೊರೆಯುತ್ತಿದ್ದ ಬರ್ತ್ ಡೇ ಗಿಫ್ಟ್ ನೆನಪಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News