ಮನೆ ಕಟ್ಟುವ ಕನಸು ನನಸು ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆಯ ಸಮಯವಿಲ್ಲ
ಅಧಿಕ ಬೆಲೆಯ ನೋಟುಗಳ ರದ್ದತಿ ಕಾರಣದಿಂದಾಗಿ ಮುಂದಿನ 6-12 ತಿಂಗಳೊಳಗೆ ಭಾರತದ 42 ಪ್ರಮುಖ ನಗರಗಳಲ್ಲಿ ಮನೆಗಳ ಬೆಲೆಗಳು ಶೇ. 30ರಷ್ಟು ಇಳಿಯುವ ಸಾಧ್ಯವಿದೆ ಎನ್ನಲಾಗಿದೆ. ಹೀಗಾಗಿ 2008ರಿಂದ ಮಾರಾಟವಾದ ಮತ್ತು ಮಾರಾಟವಾಗದೆ ಇರುವ ವಸತಿಗಳ ರು. 8 ಲಕ್ಷ ಕೋಟಿ ಮಾರುಕಟ್ಟೆ ಬೀಳಲಿದೆ.
ಭಾರತೀಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನೋಟು ರದ್ದತಿಯ ನಂತರ ಇಳಿಯಲಿದೆ ಎಂದು ಪ್ರಾಪ್ ಈಕ್ವಿಟಿ ಹೇಳಿಕೆ ತಿಳಿಸಿದೆ.
ಭಾರತದ 42 ನಗರಗಳಲ್ಲಿ 22,202 ಡೆವಲಪರ್‌ಗಳ 83,650 ಪ್ರಾಜೆಕ್ಟ್‌ಗಳ ಕುರಿತಂತೆ ರಿಯಲ್ ಎಸ್ಟೇಟ್ ವಿವರ ಮತ್ತು ವಿಶ್ಲೇಷಣಾ ಸುದ್ದಿಗಳನ್ನು ಪ್ರಾಪ್ ಈಕ್ವಿಟಿ ನೀಡುತ್ತಿರುತ್ತದೆ. “ಪ್ರಾಪ್ ಈಕ್ವಿಟಿ ಸಂಶೋಧನೆಯ ಪ್ರಕಾರ ವಸತಿ ರಿಯಲ್ ಎಸ್ಟೇಟ್ ಮೌಲ್ಯವು ರೂ. 39,55,044ರಿಂದ ಶೇ. 30ರಷ್ಟು ಇಳಿದು ಸುಮಾರು ರೂ. 8,02,874 ಕೋಟಿಯಿಂದ ರೂ. 31,52,170 ಕೋಟಿವರೆಗೆ ಬೀಳಲಿದೆ.
2008ರಿಂದ 42 ನಗರಗಳಲ್ಲಿ ಈಗಾಗಲೇ ಸಿದ್ಧವಾಗಿರುವ, ನಿರ್ಮಾಣ ಹಂತದಲ್ಲಿರುವ ಮತ್ತು ಈಗ ಲಾಂಚ್ ಆಗಿರುವ ಆಸ್ತಿಗಳ ಮಾರುಕಟ್ಟೆ ಮೌಲ್ಯ 49,42,637 ಯುನಿಟ್‌ಗಳು. ಒಟ್ಟು ಮಾರುಕಟ್ಟೆಯ ಗರಿಷ್ಠ ಕುಸಿತವು ಮುಂಬೈನಲ್ಲಿ ರೂ. 2,00,330 ಕೋಟಿ ಇದ್ದರೆ, ಬೆಂಗಳೂರಿನಲ್ಲಿ ರೂ. 99,983 ಕೋಟಿ ಮತ್ತು ಗುರುಗಾಂವ್‌ನಲ್ಲಿ ರೂ. 79,059 ಕೋಟಿ ಎನ್ನಲಾಗಿದೆ. “ಭಾರತೀಯ ರಿಯಲ್ ಎಸ್ಟೇಟ್ ಉದ್ಯಮ ಸಬ್ ಪ್ರೈಮ್ ಮಟ್ಟದ ಬಿಕ್ಕಟ್ಟು ಎದುರಿಸುತ್ತಿದೆ. ದ್ವಿತೀಯ ಮಾರುಕಟ್ಟೆ ವ್ಯವಹಾರಗಳು (ಮರುಮಾರಾಟ) ದೊಡ್ಡ ಪ್ರಮಾಣದಲ್ಲಿ ಕೆಳಗಿಳಿಯಲಿದೆ. ಐದು ಖರೀದಿದಾರರಲ್ಲಿ ಒಬ್ಬ ಮಾತ್ರ ಎಲ್ಲವನ್ನೂ ಚೆಕ್‌ನಲ್ಲಿ ನೀಡಲು ಬಯಸುವವರು. ಸಾಮಾನ್ಯವಾಗಿ ಜನರು ಕನಿಷ್ಠ ಶೇ. 20ರಿಂದ 30 ರಷ್ಟು ಮೊತ್ತವನ್ನು ನಗದಲ್ಲೇ ನೀಡಲು ಬಯಸುತ್ತಾರೆ. ಆದರೆ ಸ್ವಲ್ಪ ಸಮಯ ಇದು ಸಾಧ್ಯವಾಗದು. ಮುಂದಿನ ವಾರಗಳಲ್ಲಿ ಮರುಮಾರಾಟಕ್ಕೆ ಪೂರ್ಣ ಅಂತ್ಯ ಬೀಳಲಿದೆ. ಇದನ್ನು ಸಹಿಸಿಕೊಳ್ಳಲು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕೆಲ ಸಮಯ ಹಿಡಿಯಬಹುದು” ಎನ್ನುತ್ತಾರೆ ಪ್ರಾಪ್ ಈಕ್ವಿಟಿ ಅಧ್ಯಕ್ಷ ಮತ್ತು ಸಿಇಒ ಸಮೀರ್ ಜಸೂಜ.
ಅಲ್ಲದೆ ಕಳೆದ 15 ದಿನಗಳಲ್ಲಿ ಬಹಳಷ್ಟು ಮಂದಿ ತಮ್ಮ ಅಕ್ರಮ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಲು ಪ್ರಯತ್ನಿಸಿದ್ದಾರೆ. ಆದರೆ ಇದರಿಂದ ಹೆಚ್ಚು ಅಧಿಕೃತ ಮತ್ತು ವ್ಯವಸ್ಥಿತ ಡೆವಲಪರ್‌ಗಳು ಈ ಬಿರುಗಾಳಿಯನ್ನು ಸಹಿಸುವ ಶಕ್ತಿ ಹೊಂದಿದ್ದಾರೆ. ಅವರು ಮುಂದಿನ ಒಂದು ವರ್ಷದೊಳಗೆ ಉತ್ತಮ ಸ್ಥಿತಿಯಲ್ಲಿ ಇರಲಿದ್ದಾರೆ. “ನಮ್ಮ ದೃಷ್ಟಿಯಲ್ಲಿ ಅಲ್ಪಾವಧಿಗೆ ಬಹಳ ತೊಂದರೆಯಾಗಲಿದೆ. ಆದರೆ ಧೀರ್ಘ ಅವಧಿಯಲ್ಲಿ ಭಾರತೀಯ ರಿಯಲ್ ಎಸ್ಟೇಟ್ ಕ್ಷೇತ್ರ ಹೆಚ್ಚು ಪಾರದರ್ಶಕವಾಗಲು ಇದು ನೆರವಾಗಲಿದೆ” ಎಂದು ಪ್ರಾಪ್ ಈಕ್ವಿಟಿ ಹೇಳಿದೆ.
ಕೃಪೆ:timesofindia.indiatimes.com