ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ತಡೆಯಾಜ್ಞೆ ಡಿ.6ರ ತನಕ ಮುಂದುವರಿಕೆ
Update: 2016-11-25 15:07 IST
ಚೆನ್ನೈ, ನ.25: ರಾಜ್ಯ ಸರಕಾರದ ಮಹತ್ವಾಂಕಾಕ್ಷಿ ಯೋಜನೆಯಾಗಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಕಾಮಗಾರಿ ಆರಂಭಕ್ಕೆ ತಡೆಯಾಜ್ಞೆಯನ್ನು ಚೆನ್ನೈನ ಹಸಿರು ನ್ಯಾಯಾಧೀಕರಣವು ಡಿ.6ರ ತನಕ ಮುಂದೂಡಿದೆ.
ಇಂದು ರಾಜ್ಯ ಸರಕಾರದ ಪರ ಎಜಿ ಮಧುಸೂಧನ್ ನಾಯಕ್ ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಪರಿಸರಕ್ಕೆ ಹಾನಿ ಇಲ್ಲ ಎಂದು ವಾದ ಮಂಡಿಸಿದರು.
ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿರೋಧಿಸಿ ಸಿಟಿಜನ್ ಆಕ್ಷನ್ ಫೋರಂ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಹಸಿರು ಪೀಠ ಒಂದು ಗಂಟೆ ಕಾಲ ವಿಚಾರಣೆ ನಡೆಸಿತು.