ನೋಟು ನಿಷೇಧ ಸಿಂಧುತ್ವ : ಡಿ.2ರಂದು ಸುಪ್ರೀಂ ವಿಚಾರಣೆ

Update: 2016-11-25 13:27 GMT

ಹೊಸದಿಲ್ಲಿ, ನ.25: ನೋಟು ರದ್ದತಿಯ ಸಾಂವಿಧಾನಿಕ ಸಿಂಧುತ್ವ ಹಾಗೂ ಅದರಿಂದ ಜನರಿಗಾಗಿರುವ ತೊಂದರೆಯನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿ.2ರಂದು ನಡೆಸಲಿದೆ.

 ತಾವು ಮೊದಲು ಸಾರ್ವಜನಿಕರಿಗಾಗಿರುವ ತೊಂದರೆ ಹಾಗೂ ಅದರ ನಿವಾರಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ವಿಚಾರಣೆ ನಡೆಸುತ್ತೇವೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಹಾಗೂ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡರನ್ನೊಳಗೊಂಡ ಪೀಠವೊಂದು ಮೊದಲು ಹೇಳಿತ್ತು.

ನೋಟು ನಿಷೇಧದ ಸಿಂಧುತ್ವದ ಕುರಿತು ಬಳಿಕ ವಿಚಾರಣೆ ನಡೆಸಬಹುದೆಂದು ಅದು ತಿಳಿಸಿತ್ತಾದರೂ, ಈಗ, ಎರಡೂ ಆಯಾಮಗಳ ಕುರಿತು ಒಟ್ಟಿಗೇ ವಿಚಾರಣೆ ನಡೆಸಲು ಒಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News