ಜಯಲಲಿತಾ ಆರೋಗ್ಯ ಸ್ಥಿತಿ ಈಗ ಹೇಗಿದೆ? ಆಸ್ಪತ್ರೆ ನೀಡಿದ ಮಾಹಿತಿಯೇನು ?

Update: 2016-11-25 14:30 GMT

ಚೆನ್ನೈ, ನ.25: ತೀವ್ರ ಶ್ವಾಸಕೋಶಗಳ ಸೋಂಕಿಗೆ ಒಳಗಾದ ಬಳಿಕ ಟ್ರೇಕಿಯೋಸ್ಟಮಿ ಚಿಕಿತ್ಸೆ ಪಡೆದಿರುವ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಈಗ ಸ್ಪೀಕರ್‌ಗಳನ್ನು ಬಳಸಿ ಒಮ್ಮೆಗೆ ಕೆಲವು ನಿಮಿಷಗಳ ಕಾಲ ಮಾತನಾಡುತ್ತಿದ್ದಾರೆಂದು ಎಂದು ಅಪೊಲೊ ಆಸ್ಪತ್ರೆಯಿಂದು ಹೊಸ ಆರೋಗ್ಯಮಾಹಿತಿಯಲ್ಲಿ ತಿಳಿಸಿದೆ.

ಟ್ರೇಕಿಯೋಸ್ಟಮಿಯೆಂದರೆ ಉಸಿರಾಟಕ್ಕಾಗಿ ಶ್ವಾಸನಾಳಗಳನ್ನು ಹಿಗ್ಗಿಸುವ ಶಸ್ತ್ರ ಚಿಕಿತ್ಸೆಯಾಗಿದೆ. ವಾರಗಳ ಕಾಲ ಜೀವರಕ್ಷಕ ವ್ಯವಸ್ಥೆಯಲ್ಲಿದ್ದ ಜಯಲಲಿತಾ, ಈಗ ಅದರ ನೆರವಿಲ್ಲದೆ ಶೇ.90ರಷ್ಟು ಸಮಯ ಉಸಿರಾಡಲು ಶಕ್ತರಾಗಿದ್ದಾರೆಂದು ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್ ರೆಡ್ಡಿ ಹೇಳಿದ್ದಾರೆ.

ಅವರು ನಡೆಯಲಾರಂಭಿಸುವುದು ಮುಂದಿನ ಗುರಿಯಾಗಿದೆ. ಜಯಾ ಸಂಪೂರ್ಣ ಆರೋಗ್ಯವಾಗಿದ್ದಾರೆ. ಯಾವಾಗ ಮನೆಗೆ ಹೋಗಬೇಕೆಂಬುದನ್ನು ಅವರೇ ನಿರ್ಧರಿಸಲಿದ್ದಾರೆಂದು ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News