ಉಗ್ರರ ದಾಳಿಗೆ ಇಬ್ಬರು ಪೊಲೀಸರು ಬಲಿ
Update: 2016-11-25 23:23 IST
ಶ್ರೀನಗರ, ನ.25: ದಕ್ಷಿಣ ಕಾಶ್ಮೀರದ ಕುಲ್‌ಗಾಮ್ ನಗರದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. ಹೆಡ್‌ಕಾನ್‌ಸ್ಟೆಬಲ್ ತನ್ವೀರ್ ಅಹ್ಮದ್ ಮತ್ತು ಕಾನ್‌ಸ್ಟೆಬಲ್ ಜಲಾಲುದ್ದೀನ್ ಅಹ್ಮದ್ ಮೃತಪಟ್ಟ ಪೊಲೀಸರು. ದಾಳಿ ನಡೆಸಿ ಪರಾರಿಯಾದ ಉಗ್ರರ ಪತ್ತೆಗಾಗಿ ಪೊಲೀಸರು ನಾಕಾಬಂದಿ ನಡೆಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.