ಪ್ರತಿರೋಧ ತಡೆಯಲು ನೋಟು ಗೊಂದಲದ ನಡುವೆ ಐಆರ್‌ಎಫ್ ನಿಷೇಧ

Update: 2016-11-26 18:38 GMT

ಮುಂಬೈ, ನ.26: ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಮೇಲೆ ವಿಧಿಸಿರುವ 5 ವರ್ಷಗಳ ನಿಷೇಧವು 'ಮುಸ್ಲಿಮರು, ಶಾಂತಿ, ಪ್ರಜಾಪ್ರಭುತ್ವ ಹಾಗೂ ನ್ಯಾಯದ ಮೇಲೆ ನಡೆಸಿರುವ ದಾಳಿಯಾಗಿದೆ. ಪ್ರತಿರೋಧವನ್ನು ತಡೆಯಲು ಹಾಗೂ ಮಾಧ್ಯಮಗಳ ಗಮನವನ್ನು ಬೇರೆಡೆಗೆ ಸೆಳೆಯಲು 'ನೋಟು ರದ್ದತಿ ಗೊಂದಲದ' ನಡುವೆಯೇ ನಿಷೇಧ ಹೇರಲಾಗಿದೆಯೆಂದು ವಿದ್ವಾಂಸ ಝಾಕಿರ್ ನಾಯ್ಕಾ ಇಂದು ಆರೋಪಿಸಿದ್ದಾರೆ.

ಕೇಂದ್ರ ಸರಕಾರವು ಇತ್ತೀಚೆಗೆ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ವಯ(ಯುಎಪಿಎ) ಐಆರ್‌ಎಫ್‌ನ ಮೇಲೆ ನಿಷೇಧ ವಿಧಿಸಿ, ಅದನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದೆ.
ನಿಷೇಧ ತೆರವಿಗಾಗಿ ತಾನು ಎಲ್ಲ ಕಾನೂನಿನ ದಾರಿಗಳನ್ನು ಮುಂದುವರಿಸುತ್ತೇನೆ. ನ್ಯಾಯಾಂಗವು ನರೇಂದ್ರ ಮೋದಿ ಸರಕಾರದ 'ಯೋಜನೆಯನ್ನು' ವಿಫಲಗೊಳಿಸಲಿದೆಯೆಂದು ವಿದೇಶದಲ್ಲಿರುವ 51ರ ಹರೆಯದ ನಾಯ್ಕಾ ಬಹಿರಂಗ ಪತ್ರವೊಂದರಲ್ಲಿ ಹೇಳಿದ್ದಾರೆ.
ಐಆರ್‌ಎಫ್‌ನ ಅಧಿಕಾರಿಗಳು ಸಹಿತ ನಾಯ್ಕ ವಿರುದ್ಧ ಐಪಿಸಿಯ ಸೆ.153 ಎ ಹಾಗೂ ಯುಎಪಿಎಯ ವಿವಿಧ ಪರಿಚ್ಛೇದಗಳನ್ವಯ ಮೊಕದ್ದಮೆ ದಾಖಲಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News