ಪ್ರಸಿದ್ಧ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್ ಆತ್ಮಹತ್ಯೆ ?
Update: 2016-11-27 12:54 IST
ಪ್ಯಾರಿಸ್,ನ. 27: ಪ್ರಸಿದ್ಧ ಬ್ರಿಟಿಷ್ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್ ಪ್ಯಾರಿಸಿನ ಸ್ವವಸತಿಯಲ್ಲಿ ನಿಧನರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಅವರಿಗೆ 83ವರ್ಷ ವಯಸ್ಸಾಗಿತ್ತು. ಪೊಲೀಸರು ಇದು ಆತ್ಮಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಡೇವಿಡ್‌ರ ಮನೆಯಲ್ಲಿಯಾವುದೇ ಜನರ ಚಲನವಲನ ಕಾಣದ ಹಿನ್ನೆಲೆಯಲ್ಲಿ ನೆರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಅಶ್ಲೀಲವೋ ಕಲೆಯೊ ಎಂದು ಅರ್ಥಮಾಡಲು ಸಾಧ್ಯವಿಲ್ಲದ ರೀತಿಯ ಫೋಟೊಗಳು ಅವರನ್ನು ಹೆಚ್ಚು ಪ್ರಸಿದ್ಧಿಗೊಯ್ದಿತ್ತು. ಡೇವಿಡ್‌ರ ಫೋಟೊಗಳನ್ನು ಫ್ಯಾಶನ್ ಮ್ಯಾಗಝಿನ್‌ಗಳು ಪ್ರಕಟಿಸುತ್ತಿದ್ದವು. 1933ರಲ್ಲಿ ಲಂಡನ್‌ನಲ್ಲಿ ಜನಿಸಿದ್ದರು. ಆದರೆ ಅವರು ತನ್ನ ಜೀವನದಲ್ಲಿ ಹೆಚ್ಚು ಕಾಲ ಪ್ಯಾರಿಸ್ ನಲ್ಲಿ ವಾಸವಿದ್ದರು. ತನ್ನ ಫೋಟೊಗಳ ರೂಪದರ್ಶಿಗಳಲ್ಲಿ ನಾಲ್ವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಅವರ ಮೇಲೆ ಆರೋಪವಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರೆಂದು ವರದಿತಿಳಿಸಿದೆ.