ಡೇವಿಸ್ ಕಪ್: ಅರ್ಜೆಂಟೀನಕ್ಕೆ ಚೊಚ್ಚಲ ಪ್ರಶಸ್ತಿ

Update: 2016-11-28 17:30 GMT

ಝಾಗ್ರೆಬ್, ನ.28: ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಹಾಗೂ ಫೆಡೆರಿಕೊ ಡೆಲ್ಬೊನಿಸ್ ರಿವರ್ಸ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸುವುದರೊಂದಿಗೆ ಅರ್ಜೆಂಟೀನ ತಂಡ ಚೊಚ್ಚಲ ಡೇವಿಸ್ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ರವಿವಾರ ಇಲ್ಲಿ ನಡೆದ ಡೇವಿಸ್ ಕಪ್ ಫೈನಲ್‌ನಲ್ಲಿ ಅರ್ಜೆಂಟೀನ ತಂಡ ಆತಿಥೇಯ ಕ್ರೊಯೇಷಿಯ ತಂಡವನ್ನು 3-2 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿತು.

ಎರಡು ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ಡೆಲ್ ಪೊಟ್ರೊ ಅವರು ಮರಿನ್ ಸಿಲಿಕ್‌ರನ್ನು 6-7(4), 2-6, 7-5,6-4, 6-3 ಸೆಟ್‌ಗಳ ಅಂತರದಿಂದ ಮಣಿಸಿದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಡೆಲ್ಬೊನಿಸ್ ಅವರು ಇವೊ ಕಾರ್ಲೊವಿಕ್‌ರನ್ನು 6-3, 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ಅರ್ಜೆಂಟೀನ ಕಳೆದ ನಾಲ್ಕು ಫೈನಲ್‌ನಲ್ಲಿ ಸೋತ ಬಳಿಕ ಕೊನೆಗೂ ಡೇವಿಸ್ ಕಪ್‌ನಲ್ಲಿ ವಿಜಯಿಯಾಗಿದೆ. ರನ್ನ್ರರ್-ಅಪ್‌ಗೆ ತೃಪ್ತಿಪಟ್ಟಿರುವ ಕ್ರೊಯೇಷಿಯ ಎರಡನೆ ಪ್ರಶಸ್ತಿಯಿಂದ ವಂಚಿತವಾಗಿದೆ.

ಮಾಜಿ ವಿಶ್ವಕಪ್ ವಿಜೇತ ಆಟಗಾರ ಡಿಯಾಗೊ ಮರಡೋನಾ ಸಹಿತ ಅರ್ಜೆಂಟೀನದ ಟೆನಿಸ್ ಅಭಿಮಾನಿಗಳು ಐತಿಹಾಸಿಕ ಸಾಧನೆ ಮಾಡಿರುವ ತಂಡವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News