×
Ad

ಕೊಡಗಿನಲ್ಲಿ ಕೇರಳ ವ್ಯಾಪಾರಿಯ ದರೋಡೆ

Update: 2016-11-29 14:47 IST

ಬೆಂಗಳೂರು, ನ. 29: ಕೋಝಿಕ್ಕೋಡ್‌ನ ವ್ಯಾಪಾರಿ ಮತ್ತು ಸಂಗಡಿಗರನ್ನು ದಕ್ಷಿಣ ಕೊಡಗಿನ ಹುಡಿಕೇರಿಯಲ್ಲಿ ಅಜ್ಞಾತ ತಂಡವೊಂದು ದಾಳಿ ನಡೆಸಿ 23,000ರೂಪಾಯಿ ನಗದು ಹಾಗೂ ಮೊಬೈಲ್ ಫೋನ್ ಕಿತ್ತು ಕೊಂಡು ಹೋಗಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ತರಕಾರಿವ್ಯಾಪಾರಿ ಮುಹಮ್ಮದ್  ಮತ್ತು ಸಂಗಡಿಗ ನೌಷಾದ್‌ರನ್ನು ಸೋಮವಾರ ಬೆಳಗ್ಗೆಯ ಜಾವ ಎರಡು ಗಂಟೆಯ ಹೊತ್ತಿಗೆ ಹುಡಿಕೇರಿಯಲ್ಲಿ ಎರಡು ಇನ್ನೊವ ಕಾರಿನಲ್ಲಿ ಬಂದ ತಂಡ ಇವರುದೋಚಿ ಪರಾರಿಯಾಗಿದೆ. ಮುಹಮ್ಮದ್ ಮತ್ತುನೌಷಾದ್ ಸಂಚರಿಸುತ್ತಿದ್ದ ಕಾರಿಗೆ ಢಿಕ್ಕಿಹೊಡೆದು ನಿಲ್ಲುವಂತೆ ಮಾಡಿ ಕಾರಿನೊಳಗಿನಿಂದ ನೌಷಾದ್‌ರನ್ನು ಹೊರಗೆಳೆದು ಹೋಡೆದು ರಸ್ತೆಬದಿಗೆ ತಂಡ ದೂಡಿಹಾಕಿತ್ತು. ಮುಹಮ್ಮದ್‌ರನ್ನು ಎರಡಿ ಕಿ.ಮೀ ದೂರ ಕರೆದೊಯ್ದು ಅವರಕೈಯಲ್ಲಿದ್ದ ಹಣ ಮತ್ತು ಮೊಬೈಲ್ ಫೋನ್ ಕಿತ್ತು ಕೊಂಡಿದೆ. ಗಾಯಗೊಂಡಿರುವ ಮುಹಮ್ಮದ್‌ರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ನೌಷಾದ್ ದೂರು ನೀಡಿದದ್ದು, ಶ್ರೀಮಂಗಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇರಳದಿಂದ ರಾತ್ರೆವೇಳೆ ಕರ್ನಾಟಕಕ್ಕೆ ಹೊಗುವ ಕೇರಳೀಯರು ನಿರಂತರ ಕೊಡಗಿನಲ್ಲಿ ದೋಚಲ್ಪಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News