×
Ad

'ಅಪರಿಚಿತ ಮೂಲಗಳಿಂದ' ಅತಿ ಹೆಚ್ಚು ಆದಾಯ ಪಡೆದ ರಾಜಕೀಯ ಪಕ್ಷ ಯಾವುದು ಗೊತ್ತೇ ?

Update: 2016-11-29 18:15 IST

ಹೊಸದಿಲ್ಲಿ.ನ.29: ಆಡಳಿತ ಎನ್‌ಡಿಎದ ಮುಖ್ಯ ಪಾಲುದಾರನಾಗಿರುವ ಬಿಜೆಪಿಯು 2013-14 ಮತ್ತು 2014-15 ಈ ಎರಡು ವರ್ಷಗಳಲ್ಲಿ ಅಪರಿಚಿತ ಮೂಲಗಳಿಂದ 977 ಕೋ.ರೂ.ಗಳ ಆದಾಯವನ್ನು ಗಳಿಸಿದೆ ಎಂದು ದತ್ತಾಂಶ ಪತ್ರಿಕೋದ್ಯಮ ಜಾಲತಾಣ ಫ್ಯಾಕ್ಟ್ಲಿ ಡಾಟ್ ಇನ್ ವರದಿ ಮಾಡಿದೆ.

ಇದೇ ಅವಧಿಯಲ್ಲಿ ಮುಖ್ಯ ಪ್ರತಿಪಕ್ಷ ಕಾಂಗ್ರೆಸ್‌ನ ಗಳಿಕೆ 969 ಕೋ.ರೂ.ಗಳಾಗಿವೆ.

ಭಾರತದಲ್ಲಿ ರಾಜಕೀಯ ಪಕ್ಷಗಳು ವಿವಿಧ ಮೂಲಗಳಿಂದ ದೇಣಿಗೆಗಳನ್ನು ಸಂಗ್ರಹಿಸುತ್ತವೆ. ಪ್ರಸಕ್ತ ಕಾನೂನಿನಂತೆ ಇಂತಹ ದೇಣಿಗೆಗಳು 20,000 ರೂ.ಗಿಂತ ಕಡಿಮೆಯಿದ್ದರೆ ದೇಣಿಗೆದಾರನ ಗುರುತನ್ನು ಬಹಿರಂಗಗೊಳಿಸುವ ಅಗತ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News