ಜಿಂಬಾಬ್ವೆಗೆ ಹೊಸ ಕರೆನ್ಸಿ
Update: 2016-11-29 18:24 IST
ಹರಾರೆ, ನವೆಂಬರ್ 29: ಆರ್ಥಿಕ ಭಿಕ್ಕಟ್ಟನ್ನೆದುರಿಸುತ್ತಿರುವ ಜಿಂಬಾಬ್ವೆಗೆ ಹೊಸಕರೆನ್ಸಿ ಅಚ್ಚು ಹಾಕಲು ರಾಬರ್ಟ್‌ಮುಗಾಬೆ ಸರಕಾರ ತೀರ್ಮಾನಿಸಿದೆ. 2009ರಿಂದ ದೇಶದ ಕರೆನ್ಸಿಯಾದ ಜಿಂಬಾಬ್ವೆ ಡಾಲರ್‌ನ್ನು ಚಲಾವಣೆಯಿಂದ ಹಿಂತೆಗೆದು ಬಾಂಡ್‌ನೋಟುಗಳನ್ನು ಅಲ್ಲಿನ ಸೆಂಟ್ರಲ್ ಬ್ಯಾಂಕ್‌ಗಳು ಚಲಾವಣೆಗೆ ನೀಡತೊಡಗಿವೆ.
ಅಮೆರಿಕದ ಡಾಲರ್‌ಗೆ ಸಮಾನ ಮೌಲ್ಯ ಬಾಂಡ್ ನೋಟ್‌ಗಳಿಗೆ ನಿಶ್ಚಯಿಸಲಾಗಿದೆ.ಆರ್ಥಿಕ ಬಿಕ್ಕಟ್ಟು ತೀವ್ರವಾದ ನಂತರ ಸರಕಾರಕ್ಕೆ ತನ್ನ ಕೆಲಸಗಾರರಿಗೆ ಸಂಬಳ ನೀಡಲು ಕೂಡಾ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು ಎಂದು ವರದಿಯಾಗಿದೆ.