×
Ad

ಪಂಕಜ್ ಅಡ್ವಾಣಿಗೆ ಕಂಚಿನ ಪದಕ

Update: 2016-11-29 23:46 IST

ದೋಹಾ, ನ.29: ಇಲ್ಲಿ ನಡೆದ ಐಬಿಎಸ್‌ಎಫ್ ವರ್ಲ್ಡ್ ಸ್ನೂಕರ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ವೇಲ್ಸ್‌ನ ಆ್ಯಂಡ್ರೂ ಪೆಗೆಟ್ ವಿರುದ್ಧ 2-7 ಅಂತರದಿಂದ ಸೋತಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ನಾಲ್ಕು ಗಂಟೆಗಳ ಕಾಲ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಜಯ ಸಾಧಿಸಿದ ಬೆನ್ನಿಗೇ ನಿರ್ಣಾಯಕ ಸೆಮಿ ಫೈನಲ್‌ನಲ್ಲಿ ಆಡಿದ ಹಾಲಿ ಚಾಂಪಿಯನ್ ಅಡ್ವಾಣಿ ಎದುರಾಳಿ ಆ್ಯಂಡ್ರೂ ವಿರುದ್ಧ 14-74, 8-71, 0-87, 78-64, 0-81, 70-37, 7-80, 37-68, 19-74 ಅಂತರದಿಂದ ಸೋತಿದ್ದಾರೆ.

ಅಡ್ವಾಣಿ ಡಿ.5 ರಿಂದ ಆರಂಭವಾಗಲಿರುವ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬೆಂಗಳೂರಿಗೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News