×
Ad

ಫೆಲೆಸ್ತೀನ್‌ಗೆ ಬೆಂಬಲ, ಜೆರುಸಲೇಮ್ ರಕ್ಷಣೆ ಎಲ್ಲ ಮುಸ್ಲಿಮರ ಕರ್ತವ್ಯ: ಎರ್ದೊಗಾನ್

Update: 2016-11-30 11:53 IST

ಇಸ್ತಾಂಬುಲ್, ನ.30: ಫೆಲೆಸ್ತೀನ್‌ಗೆ ಬೆಂಬಲ ನೀಡಿ ಜೆರುಸಲೇಮ್ ರಕ್ಷಿಸುವುದು ಎಲ್ಲಾ ಮುಸ್ಲಿಮರ ಕರ್ತವ್ಯ ಎಂದುಟರ್ಕಿ ಅಧ್ಯಕ್ಷ ರೆಸೆಪ್ ಎರ್ದೊಗಾನ್‌ ಹೇಳಿದ್ದಾರೆ.

ಸಂಸದೀಯ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಅವರು ‘‘ಅಲ್-ಅಖ್ಸಾ ಮಸೀದಿಯ ರಕ್ಷಣೆಯನ್ನು ಕಲ್ಲುಗಳನ್ನು ಕೈಯಲ್ಲಿ ಅಸ್ತ್ರಗಳನ್ನಾಗಿ ಹಿಡಿದವರಿಗೆ ಬಿಡಬಾರದು ಎಂದು ಹೇಳಿದರು.
ಜೆರುಸಲೇಮ್ ನಲ್ಲಿರುವ ಪ್ರಾರ್ಥನಾ ಸ್ಥಳಗಳಲ್ಲಿರುವ ‘ದನಿಯ ಮಟ್ಟ’ವನ್ನು ನಿಯಂತ್ರಿಸುವ ಪ್ರಸ್ತಾವಿತ ಇಸ್ರೇಲಿ ಮಸೂದೆಗೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು, ಇದು ಮುಸ್ಲಿಮರಿಗೆ ಪ್ರಾರ್ಥನೆಗೆ ನೀಡುವ ಕರೆಯನ್ನು ಮಟ್ಟ ಹಾಕುವ ತಂತ್ರವಾಗಿದೆ ಎಂದು ಹೇಳಿದರಲ್ಲದೆ ಈ ಮಸೂದೆ ‘ಆತ್ಮಸಾಕ್ಷಿ ರಹಿತ’ ಎಂದು ಬಣ್ಣಿಸಿದರು.
ಫೆಲೆಸ್ತೀನಿ ಸಹೋದರರ ದೌರ್ಜನ್ಯಕರ ಹಾಗು ತಾರತಮ್ಯ ನೀತಿಗಳನ್ನೂ ಎರ್ದೊಗಾನ್ ಉಲ್ಲೇಖಿಸಿದರು. ಪೂರ್ವ ಜೆರುಸಲೇಮ್ ರಾಜಧಾನಿಯಾಗಿರುವ ಸ್ವತಂತ್ರ ಫೆಲೆಸ್ತೀನಿ ರಾಜ್ಯದ ನಿರ್ಮಾಣವೇ ಮಧ್ಯಪೂರ್ವ ದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಸಹಕಾರಿ ಎಂದು ಅವರು ಅಭಿಪ್ರಾಯ ಪಟ್ಟರಲ್ಲದೆ, ಮಧ್ಯ ಪೂರ್ವ ದೇಶಗಳ ಗಾಯಗಳಿಗೆ ಬ್ಯಾಂಡೇಜ್ ಹಚ್ಚದೆ ಶಾಂತಿ ಸಾಧ್ಯವಿಲ್ಲ ಎಂದರು.
ಆದರೆ ಎರ್ದೊಗಾನ್ ಅವರ ಹೇಳಿಕೆಗಳು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆಟನ್ಯಹು ಅವರಿಗೆ ಪಥ್ಯವಾಗಲಿಕ್ಕಿಲ್ಲವೆಂಬ ಭಾವನೆಯಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News