ಇಂದಿನಿಂದ ಎಸೆಸೆಲ್ಸಿ ಬಾನುಲಿ ಪಾಠ ಸರಣಿ ಆರಂಭ

Update: 2016-12-01 18:33 GMT

ಮಂಗಳೂರು, ಡಿ.1: ಮಂಗಳೂರು ಆಕಾಶವಾಣಿ ಕೇಂದ್ರವು ಡಿ.2ರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬಾನುಲಿ ಪಾಠ ಸರಣಿಯನ್ನು ಆರಂಭಿಸಲಿದೆ.
 ಗಣಿತ, ವಿಜ್ಞ್ಞಾನ ಮತ್ತು ಇಂಗ್ಲಿಷ್ ಪೂರಕ ಪಾಠಗಳು ಪ್ರತಿ ಶುಕ್ರವಾರ, ಸೋಮವಾರ, ಬುಧವಾರದಂದು ಬೆಳಗ್ಗೆ 9:30ರಿಂದ 10ರವರೆಗೆ ಪ್ರಸಾರವಾಗಲಿದೆ. ವಿದ್ಯಾರ್ಥಿಗಳು ಒಟ್ಟು 42 ಕಂತುಗಳಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತ ಕುಮಾರ ಪೆರ್ಲ ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News