ಡಾ.ರವಿ ದ.ಕ. ಜಿಲ್ಲಾ ನೂತನ ಸಿಇಒ

Update: 2016-12-01 18:34 GMT

ಮಂಗಳೂರು, ಡಿ.1: ದ.ಕ. ಜಿಪಂ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿ ಡಾ.ಎಂ.ಆರ್.ರವಿ ನೇಮಕಗೊಂಡಿದ್ದಾರೆ.
ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ದ.ಕ. ಜಿ.ಪಂ. ಸಿಇಒ ಆಗಿ ನೇಮಕಗೊಳಿಸಲಾಗಿದೆ.
2001ರಿಂದ 06ರವರೆಗೆ ಮೈಸೂರು ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ, 2007ರಿಂದ 2010ರವರೆಗೆ ಹುಣಸೂರು ಕಾರವಾರ ಮತ್ತು ಮಡಿಕೇರಿ ಉಪವಿಭಾಗದಲ್ಲಿ ಸಹಾಯಕ ಆಯುಕ್ತರಾಗಿ, 2011ರಿಂದ 2012ರ ವರೆಗೆ ಮಡಿಕೇರಿಯಲ್ಲಿ ಹಿರಿಯ ಸಹಾಯಕ ಆಯುಕ್ತರಾಗಿ, 2012ರಿಂದ 2013ರ ವರೆಗೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಹಾಗೂ 2013ರಿಂದ 2016ರವರೆಗೆ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News