ಹೈದರಾಬಾದ್‌ಗೆ ಮಲ್ಟಿ ಆಕ್ಸೆಲ್ ಬಸ್ ಸೌಲಭ್ಯ

Update: 2016-12-02 16:40 GMT

ಮಂಗಳೂರು,ಡಿ.2:ಇದೀಗ ಹೊಸ ವೇಳಾ ಪಟ್ಟಿಯಂತೆ ಮಂಗಳೂರಿನಿಂದ ಹೈದ್ರಾಬಾದ್‌ಗೆ ಮಲ್ಟಿ ಆಕ್ಸೆಲ್ ಬಸ್ ಅಪರಾಹ್ನ 3:00 ಗಂಟೆಗೆ ಮಂಗಳೂರು ಬಸ್ ನಿಲ್ದಾಣ ದಿಂದ ಹೊರಟು 3:45ಕ್ಕೆ ಉಡುಪಿ, ಸಂಜೆ 4ಕ್ಕೆ ಮಣಿಪಾಲ ಹಾಗೂ 4:45ಕ್ಕೆ ಕುಂದಾಪುರ ಬಸ್ ನಿಲ್ದಾಣದಿಂದ ನಿರ್ಗಮಿಸುವಂತೆ ಡಿ.1ರಿಂದ ಪ್ರತಿದಿನ ಕಾರ್ಯಾಚರಿಸಲಿದೆ.

ಇದೀಗ ಹೊಸ ವೇಳಾ ಪಟ್ಟಿಯಂತೆ ಮಂಗಳೂರಿನಿಂದ ಹೈದ್ರಾಬಾದ್‌ಗೆ ಮಲ್ಟಿ ಆಕ್ಸೆಲ್ ಬಸ್ ಅಪರಾಹ್ನ 3:00 ಗಂಟೆಗೆ ಮಂಗಳೂರು ಬಸ್ ನಿಲ್ದಾಣ ದಿಂದ ಹೊರಟು 3:45ಕ್ಕೆ ಉಡುಪಿ, ಸಂಜೆ 4ಕ್ಕೆ ಮಣಿಪಾಲ ಹಾಗೂ 4:45ಕ್ಕೆ ಕುಂದಾಪುರ ಬಸ್ ನಿಲ್ದಾಣದಿಂದ ನಿರ್ಗಮಿಸುವಂತೆ ಡಿ.1ರಿಂದ ಪ್ರತಿದಿನ ಕಾರ್ಯಾಚರಿಸಲಿದೆ. ಈ ಸಾರಿಗೆ ಹುಬ್ಬಳ್ಳಿ ಬಸ್‌ನಿಲ್ದಾಣಕ್ಕೆ ರಾತ್ರಿ 10:40ಕ್ಕೆ, ರಾಯಚೂರು ಬಸ್ಸು ನಿಲ್ದಾಣಕ್ಕೆ ಮರುದಿನ ಬೆಳಿಗ್ಗೆ 5:00 ಗಂಟೆಗೆ ತಲುಪಿ ಹೈದ್ರಾಬಾದ್ ನಗರಕ್ಕೆ ಬೆಳಗ್ಗೆ 7:30ಕ್ಕೆ ತಲುಪಲಿದೆ. ಇದು ಹೈದ್ರಾಬಾದ್‌ನ ಮಹಾತ್ಮಾಗಾಂಧಿ ಬಸ್ಸು ಟರ್ಮಿನಲ್ ನಿಲ್ದಾಣಕ್ಕೆ ತೆರಳುವ ಏಕೈಕ ಸಾರಿಗೆಯಾಗಿದೆ. ಇದರ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳುವಂತೆ ಕ.ರಾ.ರ.ಸಾ.ನಿಗಮದ ಮಂಗಳೂರು ಘಟಕ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News