×
Ad

ಪ್ರಭಾವಿ ಸಚಿವನ ಸಂಬಂಧಿ ಕುಟುಂಬದ ದುರಹಂಕಾರ, ಪ್ರಯಾಣಿಕರಿಗೆ ಶಿಕ್ಷೆ

Update: 2016-12-03 10:36 IST

ಮುಂಬೈ, ಡಿ3: ಇಲ್ಲಿಂದ ಭೋಪಾಲ್ ಗೆ ತೆರಳಲು ಸಜ್ಜಾಗಿದ್ದ ಜೆಟ್‌ ಏರ್‌ವೇಸ್‌ಗೆ ಸೇರಿದ 9ಡಬ್ಲ್ಯು7083 ವಿಮಾನವನ್ನು ಪ್ರಭಾವಿಗಳ ಕುಟುಂಬ ಹೈಜಾಕ್ ಮಾಡಿ, ಅರಾಜಕ ಸ್ಥಿತಿ ನಿರ್ಮಾಣವಾದ ಘಟನೆ ವರದಿಯಾಗಿದೆ.
ಸುಮಾರು 80 ಪ್ರಯಾಣಿಕರು ಭೋಪಾಲ್‌ಗೆ ವಿವಾಹ ಸಮಾರಂಭಕ್ಕಾಗಿ ತೆರಳಬೇಕಿತ್ತು. ಈ ಪೈಕಿ 17 ಮಂದಿ ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ್ದರಿಂದ, ಅವರ ಮುಂಗಡ ಕಾಯ್ದಿರಿಸುವಿಕೆ ರದ್ದಾಯಿತು. ಈ ಹಿನ್ನೆಲೆಯಲ್ಲಿ ಇತರರಿಗೆ ಆದ್ಯತೆ ನೀಡಲಾಯಿತು. ಆದರೆ ವಿಚಿತ್ರವೆಂದರೆ ಇವರ ಟಿಕೆಟ್ ದೃಢೀಕರಣಗೊಳ್ಳದಿದ್ದರೂ ಎಲ್ಲ ಭದ್ರತಾ ತಪಾಸಣೆಗಳನ್ನು ಹಾಗೂ ವಿಮಾನ ಏರುವ ಗೇಟ್ ತಪಾಸಣೆಯನ್ನು ಈ 17 ಮಂದಿ ಪೂರೈಸಿಬಿಟ್ಟರು.

ಎಲ್ಲ 80 ಮಂದಿ ಒಟ್ಟಾಗಿ, ಜೆಟ್ ಏರ್‌ವೇಸ್ ಸಿಬ್ಬಂದಿಗೆ ಬೆದರಿಕೆ ಹಾಕಿ, ಆ 17 ಮಂದಿಯನ್ನು ವಿಮಾನಕ್ಕೆ ಹತ್ತಿಸದಿದ್ದರೆ, ನಾವ್ಯಾರೂ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ವಿಮಾನದಲ್ಲಿದ್ದ 17 ಮಂದಿಯ ಮನವೊಲಿಸಿ ಅವರನ್ನು ವಿಮಾನದಿಂದ ಕೆಳಗಿಳಿಸಿ, ಈ 17 ಮಂದಿಗೆ ಅವಕಾಶ ಮಾಡಿಕೊಡಲು ಮುಂದಾದರು. ಪ್ರಭಾವಿ ಸಚಿವರೊಬ್ಬರ ಸಂಪರ್ಕ ಹೊಂದಿದ್ದ ಈ ಕುಟುಂಬದ ಎಲ್ಲ 80 ಮಂದಿ ಒಟ್ಟಿಗೇ ಪ್ರಯಾಣ ಬೆಳೆಸುವ ಸಲುವಾಗಿ ಹೊಂದಾಣಿಕೆ ಮಾಡಿಕೊಂಡು ಸೀಟು ಬಿಟ್ಟುಕೊಟ್ಟದ್ದಕ್ಕಾಗಿ ಈ ಪ್ರಯಾಣಿಕರಿಗೆ ಉತ್ತೇಜಕ ರೂಪದಲ್ಲಿ ಹಣವನ್ನೂ ನೀಡಲಾಯಿತು. ಒಂದು ಗಂಟೆಯ ಚರ್ಚೆ ಹಾಗು ವಾಗ್ವಾದದ ಬಳಿಕ, ಐದು ಮಂದಿ, ಜೆಟ್ ಸಿಬ್ಬಂದಿ ನೀಡಿದ ತಲಾ 10 ಸಾವಿರ ರೂಪಾಯಿ ’ಲಂಚ’ ಸ್ವೀಕರಿಸಿ, ವಿಮಾನದಿಂದ ಕೆಳಗೆ ಇಳಿಯಲು ಒಪ್ಪಿಕೊಂಡರು. ಭೋಪಾಲ್ ವಿಮಾನ ನಿಲ್ದಾಣದ ಆಧುನೀಕರಣಕ್ಕಾಗಿ 9 ಗಂಟೆಗೆ ವಿಮಾನ ನಿಲ್ದಾಣ ಮುಚ್ಚಲಾಗುತ್ತದೆ ಎಂದು ಪೈಲಟ್ ಮಾಹಿತಿ ನೀಡಿದರೂ, ಇಡೀ ಕುಟುಂಬ ತಮ್ಮ ಪಟ್ಟು ಸಡಿಲಿಸಲಿಲ್ಲ. ಈ ರಾಜಕಾರಣಿಗಳ ಬೆಂಬಲ ಇದ್ದ ದುರಹಂಕಾರಿ ಕುಟುಂಬದಿಂದಾಗಿ ಜನಸಾಮಾನ್ಯರು ಬವಣೆಪಡಬೇಕಾಯಿತು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News