ಪ್ರಧಾನಿ ಫೋಟೋ ಅಕ್ರಮವಾಗಿ ಬಳಕೆ: ರಿಲಯನ್ಸ್ ಜಿಯೊಗೆ ಬೀಳುವ ‘ಭಾರೀ ದಂಡ’ ಎಷ್ಟು ಗೊತ್ತೇ ?
ಹೊಸದಿಲ್ಲಿ, ಡಿ.3: ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರಗಳನ್ನು ತನ್ನ ಜಾಹೀರಾತುಗಳಿಗೆ ಅಕ್ರಮವಾಗಿ ಬಳಕೆ ಮಾಡಿದ ಆರೋಪ ಎದುರಿಸುತ್ತಿರುವ ರಿಲಯನ್ಸ್ ಜಿಯೊಸಂಸ್ಥೆ ತಾನು ಮಾಡಿದ ತಪ್ಪಿಗೆ ತೆರಬೇಕಾದ ದಂಡ ಎಷ್ಟು ಗೊತ್ತೇ? ಕೇಳಿದರೆ ಯಾರಿಗಾದರೂ ಆಶ್ಚರ್ಯವಾಗದೇ ಇರದು. ಕೇವಲ 500 ರೂಪಾಯಿ. ನಿಜ ಹೇಳಬೇಕೆೆಂದರೆ ಅಧಿಕೃತ ಲಾಂಛನ ಮತ್ತು ಕೆಲವೊಂದುಹೆಸರುಗಳನ್ನು ಅಕ್ರಮವಾಗಿ ಬಳಕೆ ಮಾಡುವವರಗೆ ಲಾಂಛನಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯಿದೆ ವಿಧಿಸುವ ದಂಡ ನಗಣ್ಯ.
ಗುರುವಾರದಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ರಾಜವರ್ಧನ ಸಿಂಗ್ ರಾಥೋರ್‘‘ಪ್ರಧಾನಿ ಕಚೇರಿಯಿಂದಮೋದಿ ಫೋಟೋಗಳನ್ನು ಜಾಹೀರಾತುಗಳಿಗೆ ಉಪಯೋಗಿಸಲು ಅನುಮತಿ ನೀಡಲಾಗಿರಲಿಲ್ಲ’’ ಎಂದು ತಿಳಿಸಿದ್ದಾರೆ. ಈ ಬಗ್ಗೆ ರಿಲಯನ್ಸ್ ಜಿಯೊ ಪ್ರತಿಕ್ರಿಯಿಸಿಲ್ಲ,
ರಿಲಯನ್ಸ್ ಜಿಯೊ ಪ್ರಧಾನಿ ಫೋಟೋಗಳನ್ನು ತನ್ನ ಜಾಹೀರಾತುಗಳಿಗೆ ಬಳಸಿರುವ ಬಗ್ಗೆ ಸರಾರಕ್ಕೆ ಅರಿವಿತ್ತು ಎಂದು ಸಮಾಜವಾದಿಪಕ್ಷದ ಸಂಸದ ನೀರ್ ಶೇಖರ್ ಕೇಳಿದ ಪ್ರಶ್ನೆಗೆಸಚಿವರು ತಿಳಿಸಿದರು.
ಪ್ರಧಾನಿಯ ಫೋಟೋಗಳನ್ನು ಖಾಸಗಿ ಕಂಪೆನಿಯೊಂದು ತನ್ನ ಉತ್ಪನ್ನಗಳನ್ನು ಪ್ರಚುರಪಡಿಸುವ ಜಾಹೀರಾತುಗಳಿಗೆ ಉಪಯೋಗಿಸಿದ ಕುರಿತು ವಿಪಕ್ಷಗಳು ಭಾರೀ ಕೋಲಾಹಲವೆಬ್ಬಿಸಿದ್ದವು. ನೋಟು ಅಮಾನ್ಯಗೊಳಿಸಿದ ನಂತರ ಪೇಟಿಎಂ ಜಾಹೀರಾತುಗಳಲ್ಲಿಯೂ ಪ್ರಧಾನಿ ಫೋಟೋಇದ್ದ ಬಗ್ಗೆ ವಿಪಕ್ಷಗಳು ತಕರಾರು ಸೂಚಿಸಿದ್ದವು.
ಲಾಂಛನಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯಿದೆ ಜಾರಿಯು ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಬರುವುದೆಂದೂ ಈ ಸಚಿವಾಲಯ ಯಾವುದೇ ದೂರುಸ್ವೀಕರಿಸಿಲ್ಲವೆಂದೂ ಸಚಿವರು ತಿಳಿಸಿದರು.