ಫೆಲೆಸ್ತೀನಿ-ಇಸ್ರೇಲಿ ಮಾತುಕತೆಗಳ ಪುನಃಶ್ಚೇತನಕ್ಕೆ ತನ್ನ ಅಳಿಯನನ್ನು ರವಾನಿಸಲಿರುವ ಟ್ರಂಪ್

Update: 2016-12-03 09:42 GMT

ಗಾಝಾ,ಡಿ.3: ಇಸ್ರೇಲ್ ಮತ್ತು ಫೆಲಿಸ್ತೀನ್ ನಡುವೆ ಶಾಂತಿ ಮಾತುಕತೆಗಳನ್ನು ಪುನಃಶ್ಚೇತನಗೊಳಿಸಲು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶೇಷ ದೂತನನ್ನು, ಬಹುಶಃ ತನ್ನ ಅಳಿಯ ಜೇರ್ಡ್ ಕುಷ್ನರ್ ಅವರನ್ನು ಕಳುಹಿಸಲಿದ್ದಾರೆ ಎಂದು ಫೆಲೆಸ್ತೀನಿ ಪ್ರಾಧಿಕಾರದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಮಾತುಕತೆಗಳ ಪುನರಾರಂಭಕ್ಕೆ ಮುಂಬರುವ ವಾರಗಳಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳುವುದಾಗಿ ಟ್ರಂಪ್ ನೇತೃತ್ವದ ನೂತನ ಆಡಳಿತವು ಇಸ್ರೇಲ್ ಮತ್ತು ಫೆಲೆಸ್ತೀನ್ ಗಳಿಗೆ ಭರವಸೆ ನಿಡಿದೆ ಎಂದು ಗಲ್ಪ್ ಆನ್‌ಲೈನ್ ಸುದ್ದಿತಾಣಕ್ಕೆ ನೀಡಿದ ಹೇಳಿಕೆಯಲ್ಲಿ ಈ ಅಧಿಕಾರಿ ತಿಳಿಸಿದ್ದಾರೆ.

ಕುಷ್ನರ್ ನೇತೃತ್ವದ ಅಮೆರಿಕ ನಿಯೋಗವು ಫೆಲಿಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತಾನ್ಯಹು ಅವರೊಂದಿಗೆ ಪ್ರತ್ಯೇಕ ಮತುಕತೆಗಳನ್ನು ನಡೆಸಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News