ಪಿಡಿಪಿ “ಕರ್ನಾಟಕ ಮಾರ್ಚ್” ಡಿಸೆಂಬರ್ 10ಕ್ಕೆ
Update: 2016-12-03 15:41 IST
ಮಲಪ್ಪುರಂ,ಡಿಸೆಂಬರ್ 3: ಅಬ್ದುನ್ನಾಸರ್ ಮಅದನಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಕರ್ನಾಟಕದ ಸರಕಾದ ಧೋರಣೆ ಪ್ರತಿಭಟಿಸಿ ಡಿಸೆಂಬರ್ ಹತ್ತಕ್ಕೆ ಪಿಡಿಪಿ ಕಾರ್ಯಕರ್ತರು “ಕರ್ನಾಟಕ ವಿಧಾನ ಸೌಧಕ್ಕೆ ಮಾರ್ಚ್” ನಡೆಸಲಿದ್ದಾರೆಂದು ವರ್ಕಿಂಗ್ ಚೇರ್‌ಮೆನ್ ಪುಂದುರ ಸಿರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಬೆಳಗ್ಗೆ ಹತ್ತುಗಂಟೆಗೆ ವಯನಾಟ್ ಮುತ್ತಂಙದಿಂದ ಮಾರ್ಚ್‌ಆರಂಭಗೊಳ್ಳಲಿದೆ. ಅಸೌಖ್ಯದಿಂದ ಬಳಲುತ್ತಿರುವ ಮತ್ತು ರೋಗ ಮೂರ್ಛಾವಸ್ಥೆಗೆ ತಲುಪಿರುವ ಮಅದನಿಗೆ ಬೆಂಗಳೂರು ಬಿಟ್ಟು ತೆರಳದಂತೆ ಆದೇಶವಿದೆ. ಇದರಿಂದಾಗಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ನಡೆದ ನಕ್ಸಲ್ ಎನ್‌ಕೌಂಟರ್‌ನ್ನು ಹಣ ಕಬಳಿಸುವುದಕ್ಕಾಗಿ ಮಾಡಲಾಗಿದೆ ಎಂದು ಬಹಿರಂಗ ಹೇಳಿಕೆ ನೀಡಿದ ಕಾನಂ ರಾಜೇಂದ್ರನ್ ವಿರುದ್ಧ ಕೂಡಾ ಸರಕಾರ ಯುಎಪಿಎ ಹಾಕಲುಸಿದ್ಧವಿರಬೇಕೆಂದು ಪುಂದುರ ಸಿರಾಜ್ ಈ ಸಂದರ್ಭದಲ್ಲಿ ಹೇಳಿದ್ದಾರೆಂದು ವರದಿತಿಳಿಸಿದೆ.