ಬ್ಯಾಂಕಿನಲ್ಲಿ ಜನರಿಗೆ ನೆರವಾಗಲು ರೋಬೊಟ್

Update: 2016-12-03 11:30 GMT

ಹೊಸದಿಲ್ಲಿ,ಡಿ. 3: ಕಪ್ಪುಹಣವನ್ನು ತಡೆಯಲಿಕ್ಕಾಗಿ ಪ್ರಧಾನ ಮಂತ್ರಿ ನೋಟು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕ್‌ನಮುಂದೆ ಜನರು ಸರತಿ ಸಾಲು ನಿಲ್ಲುತ್ತಿದ್ದಾರೆ. ನೋಟ್ ಅಮಾನ್ಯಗೊಳಿಸಿದರೂ ಬಹಳಷ್ಟು ಜನರಿಗೆ ಈಗಲೂ ಬ್ಯಾಂಕ್‌ನ ಕುರಿತು, ಖಾತೆಯ ಕುರಿತು. ಅದರ ನಿರ್ವಹಣೆಯ ಕುರಿತು ಹೆಚ್ಚು ತಿಳುವಳಿಕಿಯಿಲ್ಲ. ಇಂತಹವರಿಗೆ ನೆರವಾಗಲಿಕ್ಕಾಗಿ ಕೋಯಮತ್ತೂರಿನ ಸಾಫ್ಟ್‌ವೇರ್ ಇಂಜಿನಿಯರ್ ವಿಜಯ್ ಹೊಸದಾದ ಒಂದು ಹ್ಯೂಮನ್ ರೋಬಟ್ ತಯಾರಿಸಿದ್ದಾರೆ.

ಇಂಜಿನಿಯರ್ ವಿಜಯ್ ಹೇಳುವ ಪ್ರಕಾರ ರೊಬೊಟ್‌ಗೆ ಹದಿನೈದು ಭಾಷೆಯ ಪರಿಜ್ಞಾನವಿದೆಯಂತೆ. ಆದ್ದರಿಂದ ರೊಬೊಟ್ ಬಳಕೆ ಮಾಡಿ ಜನರು ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿದೆ. ರೋಬೊಟ್‌ಗೆ ಪ್ರಶ್ನೆ ಕೇಳಿದರೆ ಅದುಅವರಿಗೆ ಸರಿಯಾದ ಮಾಹಿತಿ ನೀಡಲಿದೆ.ನೋಟು ಅಮಾನ್ಯಗೊಳಿಸಿದ ಬಳಿಕ ಜನರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.ಈಗಲೂ ಕೆಲವರಿಗೆ ಖಾತೆ ತೆರೆಯುವುದು ಕೂಡಾ ತಿಳಿದಿಲ್ಲ ಆದ್ದರಿಂದ ರೋಬೊಟ್ ನೀಡುವ ಮಾಹಿತಿ ಪ್ರಯೋಜನವಾಗಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News