×
Ad

ಉನಾ ದಲಿತ ಥಳಿತ ಪ್ರಕರಣ: ನಾಲ್ವರು ಆರೋಪಿಗಳಿಗೆ ಜಾಮೀನು

Update: 2016-12-03 18:51 IST

ಅಹ್ಮದಾಬಾದ್, ಡಿ.3: ಗೀರ್-ಸೋಮನಾಥ ಜಿಲ್ಲೆಯ ಉನಾದಲ್ಲಿ ನಡೆದಿದ್ದ ದಲಿತರಿಗೆ ಥಳಿತ ಪ್ರಕರಣದ ನಾಲ್ವರು ಆರೋಪಿಗಳಿಗೆ ಗುಜರಾತ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಲ್ಲಿಬ್ಬರು ಪೊಲೀಸರಾಗಿದ್ದು, ನಾಲ್ವರನ್ನೂ ಬಂಧಿಸಲಾಗಿತ್ತು.

ಶಾಂತಿಭಾಯಿ ಮೊನ್ಪಾರಾ, ನಿತಿನ್ ಕೊಠಾರಿ, ಅಮಾನತುಗೊಂಡಿರುವ ಉನಾದ ಪೊಲೀಸ್ ನಿರೀಕ್ಷಕ ನಿರ್ಮಲ್ ಸಿಂಹ ಝಾಲಾ ಹಾಗೂ ಉಪನಿರೀಕ್ಷಕ ನರೇಂದ್ರ ದೇವ್ ಪಾಂಡೆ ಎಂಬವರಿಗೆ ನ್ಯಾಯಮೂರ್ತಿ ಎ.ಜೆ.ದೇಸಾಯಿ ಜಾಮೀನು ಮಂಜೂರು ಮಾಡಿದ್ದಾರೆ. ಶಾಂತಿಭಾಯಿ ಮೊನ್ಪಾರಾ ಸಾತ್ನಾ ಗೋ ಸೇವಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದು ನಿತಿನ್ ಕೊಠಾರಿ ಆ ಟ್ರಸ್ಟ್‌ಗೆ ಸಂಬಂಧಿಸಿದವನಾಗಿದ್ದಾನೆ.

ವಾದದ ವೇಳೆ ಮೊನ್ಪಾರಾ ಹಾಗೂ ಕೊಠಾರಿ ಪರ ವಕೀಲ ವಿರಾಟ್ ಪೋಪಟ್, ಪ್ರಕರಣದ ತನಿಖೆ ಮುಗಿದಿದ್ದು, ಸೆಪ್ಟಂಬರ್‌ನಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ. ಆದುದರಿಂದ ಅವರಿಬ್ಬರಿಗೂ ಜಾಮೀನು ಮಂಜೂರು ಮಾಡಬೇಕೆಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News