ಐಸಿಸ್ ದಾಳಿಗೆ ಪ್ರತಿರೋಧ ಒಡ್ಡಿ ಹುತಾತ್ಮನಾದವನ ತಾಯಿಗೆ ಶೂರಾ ಕೌನ್ಸಿಲ್ ಸದಸ್ಯತ್ವ ನೀಡಿದ ಸೌದಿ

Update: 2016-12-04 04:24 GMT

ದುಬೈ, ಡಿ.4: ಐಸಿಸ್ ದಾಳಿಗೆ ಪ್ರತಿರೋಧ ಒಡ್ಡಿ ಹುತಾತ್ಮನಾದವನ ತಾಯಿ ಕೌತಾರ್ ಅರ್ಬಶ್ ಸೇರಿದಂತೆ 29 ಮಹಿಳೆಯರಿಗೆ ಸೌದಿ ಅರೇಬಿಯಾದ ಪುನರ್ರಚಿತ ಶೂರಾ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ.

ಕೌತಾರ್ ಅರ್ಬಶ್ ಅವರು ಪತ್ರಕರ್ತೆ ಹಾಗೂ ಲೇಖಕಿಯಾಗಿ, ಸೌದಿ ಅರೇಬಿಯಾದಲ್ಲಿ ವಾಸವಿದ್ದು, ನಿರ್ಭೀತ ಬರವಣಿಗೆಗೆ ಹೆಸರುವಾಸಿ. ಅದರಲ್ಲೂ ಮುಖ್ಯವಾಗಿ ಮಸೀದಿಯ ಮೇಲೆ ಐಸಿಸ್ ದಾಳಿಯನ್ನು ತಡೆಯಲು ವೀರಾವೇಶದಿಂದ ಹೋರಾಡಿ ಮಗ ಹುತಾತ್ಮನಾದ ಬಳಿಕ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

ಇವರ ಪುತ್ರ ಮುಹಮ್ಮದ್ ಅಲ್ ಎಸ್ಸಾ ಹಾಗೂ ಅಳಿಯ ಅಬ್ದುಲ್ ಜಲೀಲ್ ಅಲ್ ಅರ್ಬಶ್ ಅವರು ದಮ್ಮಾಮ್ ಮಸೀದಿ ಮೇಲೆ ಐಸಿಸ್‌ನ ಈ ಆತ್ಮಹತ್ಯಾ ಬಾಂಬ್ ದಾಳಿಕೋರರು ನಡೆಸಿದ ದಾಳಿ ವೇಳೆ ಮೃತರಾಗಿದ್ದರು.

ಕೌತಾರ್ ಅವರು, ಕಿಂಗ್ ಫೈಸಲ್ ವಿಶ್ವವಿದ್ಯಾನಿಲಯದಿಂದ ವ್ಯವಹಾರ ಆಡಳಿತದಲ್ಲಿ ಪದವೀಧರರಾಗಿದ್ದು, ಸೌದಿ ಅರೇಬಿಯನ್ ಸೊಸೈಟಿ ಫಾರ್ ಕಲ್ಚರ್ ಆ್ಯಂಡ್ ಆರ್ಟ್ಸ್‌ನ ಸದಸ್ಯೆ. ಇವರು ಪಂಥೀಯತೆ ವಿರುದ್ಧ ನಿರ್ಭೀತ ಬರಹಗಳ ಮೂಲಕ ಜನಜನಿತರಾಗಿದ್ದಾರೆ. ರಾಷ್ಟ್ರೀಯ ಐಡೆಂಟಿಟಿ ಮತ್ತು ಏಕತೆಯ ಪ್ರತಿಪಾದಕರು.

ಅಮೆರಿಕ ಪ್ರವಾಸದಲ್ಲಿರುವ ಅವರು, ದೊರೆ ಆದೇಶದ ಮೂಲಕ ಶೂರಾ ಮಂಡಳಿಗೆ ನೇಮಕಗೊಂಡ ಮಾಹಿತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News