ವಿಶ್ವಸಂಸ್ಥೆಯ ಮಾನವೀಯ ನೆರವು ಸಮನ್ವಯಕಾರ

Update: 2016-12-05 15:28 GMT

ಜಿನೇವ, ಡಿ. 5: ಜಗತ್ತಿನಾದ್ಯಂತ ಸಂಘರ್ಷ ಮತ್ತು ವಿಪತ್ತುಗಳಿಂದ ತತ್ತರಿಸಿರುವ ಜನರಿಗೆ ನೆರವು ನೀಡಲು ಮುಂದಿನ ವರ್ಷ 22.2 ಬಿಲಿಯ ಡಾಲರ್ (1,51,392 ಕೋಟಿ ರೂಪಾಯಿ) ನಿಧಿಯ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಸಮನ್ವಯಕಾರರು ಹೇಳಿದ್ದಾರೆ.
ಸಿರಿಯ, ಯಮನ್ ಮತ್ತು ದಕ್ಷಿಣ ಸುಡಾನ್‌ನಲ್ಲಿ ಆಂತರಿಕ ಸಂಘರ್ಷ ಮತ್ತು ರೋಗಗಳು ಈಗಲೂ ಭುಗಿಲೇಳುತ್ತಿರುವ ಹಿನ್ನೆಲೆಯಲ್ಲಿ, ಈ ಮೊತ್ತವು 2016ರ ಸಾಲಿನ ಮೊತ್ತಕ್ಕಿಂತ 10 ಶೇಕಡದಷ್ಟು ಹೆಚ್ಚಳವಾಗಿದೆ.

ಒಟ್ಟು ನಿರೀಕ್ಷಿತ ನಿಧಿಯ ಮೂರನೆ ಒಂದು ಭಾಗಕ್ಕಿಂತಲೂ ಹೆಚ್ಚು (8.1 ಬಿಲಿಯ ಡಾಲರ್) ಮೊತ್ತವನ್ನು ಸಿರಿಯ ಮತ್ತು ಅಲ್ಲಿನ ನಿರಾಶ್ರಿತರಿಗಾಗಿ ಖರ್ಚು ಮಾಡಬೇಕಾಗುತ್ತದೆ ಎಂದು ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್‌ಎ) ತಿಳಿಸಿದೆ.

ಸಂಘರ್ಷ ಪೀಡಿತ 32 ದೇಶಗಳಲ್ಲಿರುವ ಮತ್ತು ಅಲ್ಲಿಂದ ಪಲಾಯನಗೈದಿರುವ ಸುಮಾರು 9.3 ಕೋಟಿ ಜನರಿಗೆ ನೆರವು ನೀಡಬೇಕಾದ ಅಗತ್ಯವಿದೆ ಹಾಗೂ ಈ ಪೈಕಿ ಮೂರನೆ ಎರಡರಷ್ಟು ಮಂದಿ ಆಫ್ರಿಕದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News