ಚಿರಾಗ್ ಶೆಟ್ಟಿ-ಸಾತ್ವಿಕ್‌ಸಾಯಿರಾಜ್‌ಗೆ ಡಬಲ್ಸ್ ಪ್ರಶಸ್ತಿ

Update: 2016-12-05 18:07 GMT

ಮುಂಬೈ, ಡಿ.5: ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ಟಾಟಾ ಓಪನ್‌ನ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ವಿಜಯಿಯಾಗಿದ್ದಾರೆ.

ಇಲ್ಲಿನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಕೋರ್ಟ್‌ನಲ್ಲಿ ನಡೆದ ಟಾಟಾ ಓಪನ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಚಿರಾಗ್ ಹಾಗೂ ಸಾತ್ವಿಕ್ ಜೋಡಿ ಅರ್ಜುನ್ ಹಾಗೂ ಶ್ಲೋಕ್ ರಾಮಚಂದ್ರನ್‌ರನ್ನು 10-12, 11-9,11-7,11-5 ಗೇಮ್‌ಗಳ ಅಂತರದಿಂದ ಮಣಿಸಿ ಟ್ರೋಫಿಯನ್ನು ಗೆದ್ದುಕೊಂಡರು.

ಚಿರಾಗ್ ಹಾಗೂ ಸಾತ್ವಿಕ್ ಸತತ ಎರಡನೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜಯಿಸಿದರು. ಮುಂಬೈ ಬಾಲಕ ಚಿರಾಗ್ 2013ರಲ್ಲಿ ಎಂಆರ್ ಅರ್ಜುನ್ ಜೊತೆಗೂಡಿ ಏಷ್ಯನ್ ಅಂಡರ್-17 ಪ್ರಶಸ್ತಿಯನ್ನು ಜಯಿಸಿದ್ದರು. ಸಾತ್ವಿಕ್ ಹಾಗೂ ಜಿ.ಕೃಷ್ಣಪ್ರಸಾದ್ 2015ರಲ್ಲಿ ಈ ಸಾಧನೆಯನ್ನು ಪುನರಾವರ್ತಿಸಿದ್ದರು. ಕೋಚಿಂಗ್ ಸ್ಟಾಫ್ ಹೈದರಾಬಾದ್‌ನಲ್ಲಿ ಈ ವರ್ಷಾರಂಭದಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಚಿರಾಗ್ ಹಾಗು ಸಾತ್ವಿಕ್ ಮೇಲೆ ಭರವಸೆ ಇಟ್ಟಿತ್ತು. ಆ ಬಳಿಕ ಇಬ್ಬರು ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡಲಾರಂಭಿಸಿದರು.

ಹಿಂದಿರುಗಿ ನೋಡಿದಾಗ ನಾವು ಇಷ್ಟೊಂದು ಸಾಧನೆ ಮಾಡುತ್ತೇವೆಂದು ನಂಬಲು ಸಾಧ್ಯವಾಗುತ್ತಿಲ್ಲ. ನಾವಿಬ್ಬರು ಆರಂಭದಲ್ಲಿ ಒಗ್ಗಟ್ಟಿನಿಂದ ಆಡಲು ಪರದಾಡಿದ್ದೆವು. ನಮ್ಮ ಪ್ರದರ್ಶನದ ಬಗ್ಗೆ ನಮಗೆ ತೃಪ್ತಿ ಇರಲಿಲ್ಲ ಎಂದು ಚಿರಾಗ್ ಶೆಟ್ಟಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News