×
Ad

ಒಂದೇ ರೂಪಾಯಿಗೆ ಊಟ ಕೊಟ್ಟ ಅಮ್ಮ...

Update: 2016-12-06 11:21 IST

ಚೆನ್ನೈ, ಡಿ.6: ವಿಧಿವಶರಾಗಿರುವ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜೆ.ಜಯಲಲಿತಾ ತಮ್ಮ ಹತ್ತು ಹಲವು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಂದಾಗಿಯೇ ಜನರ ಕಣ್ಮಣಿಯಾಗಿದ್ದವರು.

ಬಡವರಿಗೆ ಒಂದು ರೂಪಾಯಿಯಲ್ಲಿ ಊಟ ಒದಗಿಸಿದ್ದರು. ಜನರ ನೆಚ್ಚಿನ ‘ಅಮ್ಮ’ನಾಗಿದ್ದ ಜಯಲಲಿತಾ ಹೆಣ್ಣು ಭ್ರೂಣ ಹತ್ಯೆ ತಡೆಯಲು ‘ಕ್ರೇಡಲ್ ಟು ಬೇಬಿ’ ಯೋಜನೆಯನ್ನೂ ಜಾರಿಗೊಳಿಸಿದ್ದರು. ‘ಅಮ್ಮ’ ಬ್ರ್ಯಾಂಡ್ ಮುಖಾಂತರ 18 ಲೋಕ ಕಲ್ಯಾಣ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದರು ಹಾಗೂ ಈ ಯೋಜನೆಗಳಿಗೆ ಸಾಕಷ್ಟು ಸಬ್ಸಿಡಿಗಳನ್ನೂ ಒದಗಿಸಿದ್ದರು.
ಅವರ ಒಂದು ರೂಪಾಯಿಯಲ್ಲಿ ಊಟ ಒದಗಿಸುವ ‘ಅಮ್ಮ ಕ್ಯಾಂಟೀನ್’ ಗಳಂತೂ ಬಹಳಷ್ಟು ಜನಪ್ರಿಯವಾಗಿವೆ. ಅಮ್ಮ ಸಾಲ್ಟ್, ಅಮ್ಮ ವಾಟರ್, ಅಮ್ಮ ಮೆಡಿಸಿನ್‌ ಮುಂತಾದ ಯೋಜನೆಗಳನ್ನು ಅವರು ಬಡವರಿಗೆ ತಲುಪಿಸಲು ಶ್ರಮಪಟ್ಟಿದ್ದರು.

ಕ್ರೇಡಲ್ ಟು ಬೇಬಿ ಸ್ಕೀಮ್: ಈ ಯೋಜನೆಯಡಿ ತಾವು ಹೆತ್ತ ಮಕ್ಕಳನ್ನು ಸಾಕಲು ಸಮಸ್ಯೆಯಿರುವ ತಮ್ಮ ಗುರುತು ನೀಡದೆ ಮಗುವನ್ನು ಸರಕಾರಕ್ಕೆ ಹಸ್ತಾಂತರಿಬಹುದಲ್ಲದೆ ಅಂತಹ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನೂ ಸರಕಾರ ವಹಿಸಿಕೊಳ್ಳುವುದು.

ಗೋಲ್ಡ್ ಫಾರ್ ಮ್ಯಾರೇಜ್ ಸ್ಕೀಮ್: ಈ ಯೋಜನೆಯನ್ವಯ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರು ಡಿಗ್ರಿ ಹಾಗೂ ಡಿಪ್ಲೋಮಾ ಪೂರ್ತಿಗೊಳಿಸಿದಲ್ಲಿ ಸರಕಾರ ಅವರ ವಿವಾಹಕ್ಕೆ ನಾಲ್ಕು ಗ್ರಾಂ ಚಿನ್ನದ ಹೊರತಾಗಿ 50,000 ರೂ. ಹಣಕಾಸು ಸಹಾಯವನ್ನೂ ಒದಗಿಸುವುದು.

ಅಮ್ಮ ಕ್ಯಾಂಟೀನ್: ಇದು ಅಮ್ಮ ಬ್ರ್ಯಾಂಡಿನ ಮೊದಲ ಯೋಜನೆ. ಈ ಯೋಜನೆಯನ್ವಯ ಒಂದು ರೂಪಾಯಿಗೆ ಊಟ ಒದಗಿಸಲಾಗುತ್ತಿದೆ.
ಅಮ್ಮ ವಾಟರ್: ಈ ಯೋಜನೆಯನ್ವಯ10 ರೂಪಾಯಿಗೆ ಮಿನರಲ್ ವಾಟರ್ ದೊರೆಯುತ್ತದೆ.
ಅಮ್ಮ ಸಾಲ್ಟ್: ಈ ಯೋಜನೆಯಲ್ಲಿ ಕಡಿಮೆ ದರಕ್ಕೆಉಪ್ಪನ್ನು ಒದಗಿಸಲಾಗುತ್ತದೆ.
ಅಮ್ಮ ಲ್ಯಾಪ್ ಟಾಪ್: ರಾಜ್ಯ ಸರಕಾರವು ಕಾಲೇಜು ವಿದ್ಯಾರ್ಥಿಗಳಿಗೆಉಚಿತ ಲ್ಯಾಪ್ ಟಾಪ್ ಒದಗಿಸುತ್ತಿದೆ.
ಅಮ್ಮ ಬೇಬಿ ಕೇರ್ ಕಿಟ್, ಅಮ್ಮ ಸಿಮೆಂಟ್, ಅಮ್ಮ ಗ್ರೈಂಡರ್, ಮಿಕ್ಸಿ ಹಾಗೂ ಟೇಬಲ್ ಫ್ಯಾನ್, ರೈತರಿಗೆ ಕಡಿಮೆ ದರದಲ್ಲಿ ಬೀಜಗಳನ್ನು ಒದಗಿಸುವ ಅಮ್ಮ ಬೀಜ, ಅಮ್ಮ ಸರ್ವಿಸ್ ಸೆಂಟರ್, ಸ್ಪೆಶಲ್ ಅಮ್ಮ ಕ್ಯಾಂಪ್, ಅಮ್ಮ ಕಾಲ್ ಸೆಂಟರ್, ಅಮ್ಮ ಮೊಬೈಲ್, ಅಮ್ಮ ಫಾಮರ್ಸಿ, ಅಮ್ಮ ಮೈಕ್ರೋ ಲೋನ್ ಸ್ಕೀಮ್, ಅಮ್ಮ ಥಿಯೇಟರ್ ಪ್ರಾಜೆಕ್ಟ್, ಅಮ್ಮಾ ಜಿಮ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದ ಖ್ಯಾತಿ ಜಯಲಲಿತಾರಿಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News