×
Ad

ಕೇರಳದಲ್ಲಿ ಒಂದು ದಿವಸದ ದುಃಖಾಚರಣೆ, ರಜೆ; ವಿಶ್ವವಿದ್ಯಾನಿಲಯಗಳ ಪರೀಕ್ಷೆ ಮುಂದಕ್ಕೆ

Update: 2016-12-06 12:40 IST

ತಿರುವನಂತ ಪುರಂ, ಡಿ. 6: ನಿಧನರಾದ ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾರ ಗೌರವಸೂಚಕವಾಗಿ ಕೇಂದ್ರ, ರಾಜ್ಯ ಸರಕಾರಗಳು ಶೋಕಾಚರಣೆ ಘೋಷಿಸಿವೆ. ಕೇಂದ್ರ ಸರಕಾರ ಒಂದು ದಿವಸ ಮತ್ತುತಮಿಳ್ನಾಡು ಸರಕಾರ ಏಳು ದಿವಸಗಳ ಶೋಕಾಚರಣೆಯನ್ನು ಘೋಷಿಸಿದೆ. ಕೇರಳ ಸರಕಾರ ಇಂದು ಸಾರ್ವತ್ರಿಕ ರಜೆ ಮತ್ತು ಶೋಕಾಚರಣೆಯನ್ನು ಘೋಷಿಸಿದೆ. ವೃತ್ತಿಪರ ಕಾಲೇಜುಗಳ ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಕೇರಳದಲ್ಲಿ ರಜೆ ನೀಡಲಾಗಿದೆ.

ಕೇರಳ ಸರಕಾರ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. ಕೇರಳ. ಎಂಜಿ, ಕೊಚ್ಚಿ, ಕ್ಯಾಲಿಕಟ್, ಕಣ್ಣೂರ್, ಆರೋಗ್ಯ, ಕುಸಾಟ್ಟ್ ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಹೊಸ ತಾರೀಕನ್ನು ಬಳಿಕ ತಿಳಿಸಲಾಗುವುದು.

ರಾಜ್ಯ ಶಾಲಾ ಕ್ರೀಡೋತ್ಸವದ ಸಮಾಪನ ಸಮ್ಮೇಳನಕ್ಕೆ ಸಂಬಂಧಿಸಿದ ಆಚರಣಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಕೇಂದ್ರೀಯ ವಿದ್ಯಾಲಯಗಳಿಗೂ ರಜೆ ಬಾಧಕವಾಗಿದೆ. ಸಬ್ ಜಿಲ್ಲಾ ಸ್ಕೂಲ್ ಕಲೋತ್ಸವಗಳನ್ನು ಮುಂದೂಡಲಾಗಿದೆ ಎಂದು ಡಿಪಿಐ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News