ಸಂಸತ್ತಿನಲ್ಲಿ ಜಯಲಲಿತಾಗೆ ಶ್ರದ್ಧಾಂಜಲಿ, ದಿನದ ಮಟ್ಟಿಗೆ ಮುಂದೂಡಿಕೆ

Update: 2016-12-06 08:52 GMT

ಹೊಸದಿಲ್ಲಿ,ಡಿ.6: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನಕ್ಕೆ ಮಂಗಳವಾರ ಸಂತಾಪ ವ್ಯಕ್ತಪಡಿಸಿದ ಸಂಸತ್ತು, ದೇಶವು ಧೈರ್ಯವಂತ ಮತ್ತು ಪ್ರಭಾವಿ ನಾಯಕಿಯನ್ನು ಕಳೆದುಕೊಂಡಿದೆ ಎಂದು ಹೇಳಿದೆ. ದಿವಂಗತ ನಾಯಕಿಯ ಗೌರವಾರ್ಥ ಸಂಸತ್ತಿನ ಕಲಾಪಗಳನ್ನು ನಾಳೆಗೆ ಮುಂದೂಡಲಾಗಿದೆ.
1984-89ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯೆಯೂ ಆಗಿದ್ದ ಜಯಲಲಿತಾರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದ ಬಳಿಕ ಉಭಯ ಸದನಗಳಲ್ಲಿ ಸದಸ್ಯರು ಒಂದು ನಿಮಿಷ ವೌನ ಆಚರಿಸಿದರು.
ಜಯಲಲಿತಾರ ನಿಧನದಿಂದಾಗಿ ದೇಶವು ಪ್ರತಿಷ್ಠಿತ ನಾಯಕಿ, ಗೌರವಾನ್ವಿತ ಸಂಸದೀಯ ಪಟು ಮತ್ತು ಸಮರ್ಥ ಆಡಳಿತಗಾರರನ್ನು ಕಳೆದುಕೊಂಡಿದೆ ಎಂದು ರಾಜ್ಯಸಭೆಯ ಸಭಾಪತಿ ಹಾಮಿದ್ ಅನ್ಸಾರಿ ಅವರು ಹೇಳಿದರು.
ಜಯಲಲಿತಾರ ನಿಧನಕ್ಕೆ ತೀವ್ರ ಶೋಕವನ್ನು ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ದೇಶವು ಅತ್ಯಂತ ಜನಪ್ರಿಯ,ಧೈರ್ಯವಂತ ಮತ್ತು ಸಾರ್ವಜನಿಕ ಕ್ಷೇತ್ರದ ಪ್ರತಿಷ್ಠ್ಠಿತ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News